Ad imageAd image

ಮೌಲಾನಾ ಆಜಾದ ಮಾದರಿ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಆಹಾರ ಮೇಳ ಯಶಸ್ವಿ

Bharath Vaibhav
ಮೌಲಾನಾ ಆಜಾದ ಮಾದರಿ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಆಹಾರ ಮೇಳ ಯಶಸ್ವಿ
WhatsApp Group Join Now
Telegram Group Join Now

ಇಲಕಲ್ : ನಗರದ ಮೌಲಾನಾ ಆಜಾದ ಆಂಗ್ಲ ಮಾಧ್ಯಮ ಮಾದರಿ ಶಾಲೆಯಲ್ಲಿ ಬುಧವಾರ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಆಹಾರ ಮೇಳ ಅತ್ಯಂತ ಯಶಸ್ವಿಯಾಗಿ ನಡೆಯಿತು.

ಶಿಕ್ಷಣ ಸಂಯೋಜಕ ವಿನೋದ ಭೋವಿ ಸಸಿಗೆ ನೀರು ಹಾಕಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮೌಢ್ಯಗಳನ್ನು ತೊರೆದು ವಿಶಾಲ ಮನೋಭಾವ ಬೆಳೆಸಿಕೊಳ್ಳಬೇಕು ವೈಚಾರಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು ವಿದ್ಯಾರ್ಥಿಗಳಲ್ಲಿ ಅಡಗಿರುವ ಸೂಪ್ತ ಪ್ರತಿಭೆಗಳನ್ನು ಗುರುತಿಸಿಕೊಳ್ಳುವ ಸೂಕ್ತ ಅವಕಾಶ ಇದಾಗಿದೆ.ಪಠ್ಯದ ಜೊತೆಗೆ ಪಠ್ಯೇತರ ಹಾಗೂ ವ್ಯವಹಾರ ಜ್ಞಾನ ಬೆಳೆಸಿಕೊಳ್ಳಲು ಇಂತಹ ಕಾರ್ಯಕ್ರಮಗಳಿಂದ ಸಾಧ್ಯ ಎಂದು ಶಾಲೆಯ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಕಾರ್ಯ ಚಟುವಟಿಕೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಜಾಕೀರ್ ಹುಸೇನ ತಾಳಿಕೋಟಿ ಅವರು ಸರ್ಕಾರದ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವಲ್ಲಿ ಈ ಶಾಲೆಯ ಶಿಕ್ಷಕರು ಸಫಲರಾಗಿದ್ದಾರೆ ಪಾಲಕರು ಸಹ ಮಕ್ಕಳ ಕೈಗೆ ಮೊಬೈಲ್ ಫೋನುಗಳನ್ನು ನೀಡದೆ ಪುಸ್ತಕಗಳನ್ನು ನೀಡಿ ಓದುವ ಹವ್ಯಾಸ ರೂಢಿಸಿಕೊಳ್ಳಲು ಪಾಲಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಇನ್ನೊರ್ವ ಅತಿಥಿಗಳಾಗಿದ್ದ ಶ್ರೀಧರ ಜೋಗಿನ ಮಾತನಾಡಿದರು.ವೇದಿಕೆಯಲ್ಲಿ ಸಂಗಮೇಶ ಬಂಡರಗಲ್, ಹಾಗೂ ತೀರ್ಪುಗಾರ ಶಿಕ್ಷಕರು ಉಪಸ್ಥಿತರಿದ್ದರು.ಸಮಾರಂಭದ ಅಧ್ಯಕ್ಷತೆಯನ್ನು ಯಮನೂರ ನದಾಫ ವಹಿಸಿದ್ದರು.

ಶಾಲೆಯ ಶಿಕ್ಷಕಿ ಫರಜಾನ ಸೋಲಾಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೆಹಬೂಬ ಗಂಜಿಕೋಟಿ, ಅಮರೇಶ ಬಿಜ್ಜಳ, ಅತಾರಸೂಲ ಕರ್ನೂಲ್, ಸುಮಂಗಲಾ ಜಗ್ಗಲ್, ಶಕುಂತಲಾ ಸಂಗಮ,ತಷರೀಫಾ,ಹಾಜರಾಬೀ ಹಣಗಿ, ಹಾಗೂ ಮಾಹಿತಿ ಕೇಂದ್ರದ ಕೆ ಎಚ್ ಸೋಲಾಪೂರ ಇತರರು ಇದ್ದರು.50 ಕ್ಕೂ ಹೆಚ್ಚು ವಿಜ್ಞಾನ ವಸ್ತು ಪ್ರದರ್ಶನಗಳನ್ನು ಮಕ್ಕಳು ಪ್ರದರ್ಶಿಸಿದ ಪಾಲಕರ ಮೆಚ್ಚುಗೆಗೆ ಪಾತ್ರರಾದರು.

ಆಹಾರ ಮೇಳದಲ್ಲಿ 33 ಕ್ಕೂ ಹೆಚ್ಚು ಮಳಿಗೆಗಳಲ್ಲಿ ಹಲವು ಬಗೆಯ ರುಚಿಕರವಾದ ಖಾದ್ಯಗಳನ್ನು ತಯಾರಿಸಿ ಪಾಲಕರು ಹಾಗೂ ವಿವಿಧ ಶಾಲೆಗಳ ಮಕ್ಕಳು ವ್ಯಾಪಾರ ವಹಿವಾಟು ನಡೆಸಿದರು.ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅತಿಥಿಗಳು ಎಲ್ಲವುಗಳ ರುಚಿಯನ್ನು ಸವಿದು ಮೆಚ್ಚುಗೆ ವ್ಯಕ್ತಪಡಿಸಿದರು. ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು.7 ನೇ ತರಗತಿ ವಿದ್ಯಾರ್ಥಿನಿಯರು ಪರಿಸರ ಸಂರಕ್ಷಣೆಯ ಗೀತೆಯನ್ನು ನೃತ್ಯದ ಮೂಲಕ ಪ್ರಸ್ತುತ ಪಡಿಸಿದರು.ತೌಫಿಕ್ ಕುರಾನ್ ಪ್ರವಚನ ನೀಡಿದರು,ಮಹೇಶ್ವರಿ ಹಾಗೂ ಈರಮ್ಮ ಜುಂಜಾ ಪ್ರಾರ್ಥಿಸಿದರು,ಶಕುಂತಲಾ ಸಂಗಮ ನಿರೂಪಿಸಿದರು, ಕೆ ಎಚ್ ಸೋಲಾಪೂರ ಸ್ವಾಗತಿಸಿದರು, ಅಮರೇಶ ಬಿಜ್ಜಳ ಹಾಗೂ ಅತಾರಸೂಲ ಕರ್ನೂಲ್ ಪರಿಚಯಿಸಿದರು.ಸುಮಂಗಲಾ ಜಗ್ಗಲ್ ವಂದಿಸಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!