ಹದಿನೆಂಟು ವರ್ಷಗಳ ಕಾಯುವಿಕೆ, ಕ್ರಿಕೆಟ್ ಅಭಿಮಾನಿಗಳ ಹಾರೈಕೆ ಕೊನೆಗೊಂಡು ಅಂತಿಮವಾಗಿ ಐಪಿಎಲ್ ಕಪ್ ಗೆದ್ದ ರಾಯಲ್ ಚಾಲೆಂರ್ಸ್ ಬೆಂಗಳೂರು ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳ ಆಸೆ ಪೂರೈಸಿತ್ತು.
ಆರ್ಸಿಬಿ ಆ ಐತಿಹಾಸಿಕ ಸಾಧನೆಗೆ ಈಗ ಒಂದು ವರ್ಷ. ಮತ್ತೇ ಐಪಿಎಲ್ ಬಂದಿದೆ. ಈ ಸಂದರ್ಭದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಆರ್ಸಿಬಿ ಗೆದ್ದ ಕ್ಷಣಗಳ ನೆನಪು ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಬಂದು ಹೋಗುತ್ತದೆ.
ಈ ಬಾರಿಯೂ ಆರ್ಸಿಬಿ ಕಪ್ ಗೆಲ್ಲಲಿ ಎಂಬ ಅಭಿಮಾನಿಗಳ ಹಾರೈಕೆ ಮುಂದುವರೆಯಲಿದೆ. ಆದರೆ ಗೆದ್ದ ನಂತರ ಆದ ಕಳೆದ ಬಾರಿ ಕಾಲ್ತುಳಿತ ಘಟನೆ ನಡೆದಿದ್ದು, ಮಾತ್ರ ತೀವ್ರ ವಿಷಾಧನೀಯ ಇನ್ನು ಮುಂದೆ ಅಂತಹ ಘಟನೆಗಳು ಎಂದಿಗೂ ನಡೆಯಬಾರದು ಎಂಬುದು ಎಲ್ಲರ ಬಯಕೆ. ಈ ಬಾರಿಯೂ ಆರ್ಸಿಬಿ ಕಪ್ ಗೆಲ್ಲಲಿ ಎಂದು ಹಾರೈಸೋಣ. ಆದರೆ ಎಂದಿಗೂ ಕಳೆದ ಬಾರಿ ನಡೆದ ಕಹಿ ಘಟನೆಗಳು ಮಾತ್ರ ನಡೆಯದಿರಲಿ ಎಂದು ಕೂಡ ಹಾರೈಸೋಣ
ಆರ್ಸಿಬಿ ಈ ಬಾರಿಯೂ ಕಪ್ ಗೆಲ್ಲಲಿ: ಕಹಿ ಘಟನೆಗಳು ಎಂದಿಗೂ ನಡೆಯದಿರಲಿ




