Ad imageAd image

ಉತ್ತಮ ಶಿಕ್ಷಣ ಮಕ್ಕಳಿಗೆ ಉತ್ತಮ ದಾರಿ ತೋರಿಸಲಿ: ಸ್ವಾಮಿ ಬಿ ಹಿರೇಮಠ.

Bharath Vaibhav
ಉತ್ತಮ ಶಿಕ್ಷಣ ಮಕ್ಕಳಿಗೆ ಉತ್ತಮ ದಾರಿ ತೋರಿಸಲಿ: ಸ್ವಾಮಿ ಬಿ ಹಿರೇಮಠ.
WhatsApp Group Join Now
Telegram Group Join Now

ಸೇಡಂ:- ತಾಲ್ಲೂಕಿನ ಊಡಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ನೇ ತರಗತಿ ಇಂದ 3ನೇಯ ತರಗತಿ ವರೆಗೆ ನಡೆಯುವ ವಿದ್ಯಾ ಅಭ್ಯಾಸ ನಲಿ ಕಲಿ ಕೇಂದ್ರ ಉತ್ತಮವಾಗಿದೆ.

ಅಲ್ಲಿನ ಶಿಕ್ಷಕಿಯರಾದ ಸುವರ್ಣಲತಾ ಹಲಚೇರಿ ರವರು ಮಾಡಿರುವ ಉತ್ತಮವಾಗಿ ಎಲ್ಲಾ ವಿಷಯಗಳ ತರಹದ ಚಾರ್ಟ್ ಮೂಲಕ ಮಕ್ಕಳಿಗೆ ಮಾಹಿತಿ ತಿಳಿಯುವ ಹಾಗೇ ಮತ್ತು ಕಲಿಯಲು ಸರಳ ವಾಗಿದೆ.

ಅಂತಹ ಶಿಕ್ಷಕಿಯರಿಗೆ ನಮ್ಮ ಸಂಘಟನೆಯ ವತಿಯಿಂದ ಅಭಿನಂದನೆಗಳು ತಿಳಿಸಿ ಪ್ರೋತ್ಸಾಹ ನೀಡಲಾಯಿತು ಎಂದು ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಉಪಾಧ್ಯಕ್ಷರಾದ ವರದ ಸ್ವಾಮಿ ಬಿ ಹಿರೇಮಠ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳು ಅದ ದತ್ತು ಹಾಗೂ ಜಯ ಕರ್ನಾಟಕ ಜನಪರ ವೇದಿಕೆ ತಾಲ್ಲೂಕ ಅಧ್ಯಕ್ಷರು ಅಶೋಕ್ ಮಡಿವಾಳ ಕೊತ್ತಪಲ್ಲಿ ಭಾಗಿಯಾಗಿದ್ದರು.

ಇದೆ ತರ ನಮ್ಮ ತಾಲ್ಲೂಕಿನ ಎಲ್ಲಾ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಲಿ ಕಲಿ ಕೇಂದ್ರಗಳು ನಡೆದುಕೊಳ್ಳಲಿ ಎಂದು ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಉಪಾಧ್ಯಕ್ಷರಾದ ವರದಾ ಸ್ವಾಮಿ ಬಿ ಹೀರೆಮಠರವರು ಕೋಡ್ಲಾ ವಲಯದ ಕೆಲವು ಶಾಲೆಗಳಿಗೆ ಭೇಟಿಕೊಟ್ಟು ಶಾಲೆಯ ಮುಖ್ಯ ಗುರುಗಳ ಜೊತೆ ಈ ಶಾಲೆಯ ಕುರಿತು ಉದಾಹರಣೆ ಮಾತುಗಳು ತಿಳಿಸಿ ಅದೇ ತರ ಉತ್ತಮ ರೀತಿಯಾಗಿ ನಡೆದುಕೊಳ್ಳುವಂತೆ ಮನವಿ ಮಾಡಿದರು.

ಶಿಕ್ಷಕರು ಮಕ್ಕಳಿಗೆ ಇಂತಹ ಉತ್ತಮ ಶಿಕ್ಷಣ ನೀಡಿದರೆ ಅವರಿಗೆ ಮುಂದೆ ಉತ್ತಮ ದಾರಿಯಾಗುವುದು ಎಂದು ಸ್ವಾಮಿ ಈ ಸಂದರ್ಭದಲ್ಲಿ ಮಾತನಾಡಿದರು.

ವರದಿ :-ವೆಂಕಟಪ್ಪ ಕೆ ಸುಗ್ಗಾಲ್

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!