ರಾಜ್ಯದಲ್ಲಿ ಸಿಎಂ ಬದಲಾವಣೆ ಕೂಗು ಮತ್ತೆ ಮುನ್ನಲೆಗೆ ಬಂದಿದ್ದು, ಇದೀಗ ಬಗ್ಗೆ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಪ್ರತಿಕ್ರಿಯಿಸಿದ್ದು, ಉತ್ತರ ಕರ್ನಾಟಕ ಭಾಗದಿಂದ ಎಂಬಿ ಪಾಟೀಲ್ ಮುಖ್ಯಮಂತ್ರಿ ಆಗಲಿ ಎಂದಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಮೊನ್ನೆ ಸಿಎಂ ಸಿದ್ದರಾಮಯ್ಯ ಜೊತೆ ಮಾತನಾಡುತ್ತಿದ್ದೆ. ಈ ವೇಳೆ ಉತ್ತರ ಕರ್ನಾಟಕದಿಂದ ಯಾರಾದರು ಸಿಎಂ ಆಗಬಹುದು ಎಂದರೆ, ಎಂಬಿ ಪಾಟೀಲ್ ಆಗಲಿ ಎಂದಿದ್ದೆ ಎಂದು ತಿಳಿಸಿದರು.
ನಾಡು ಕಂಡ ಶ್ರೇಷ್ಠ ವ್ಯಕ್ತಿ, ರಾಜ್ಯಕ್ಕಾಗಿ ಸಾಕಷ್ಟು ಕೆಲಸವನ್ನು ಮಾಡಿದ್ದಾರೆ. ಬಹುಶಃ ಮುಂದಿನ ಸಿಎಂ ಎಂ ಬೀ ಪಾಟೀಲ್ ಅವರನ್ನೇ ಮಾಡುತ್ತಾರೆ. ನೇರ ನುಡಿ, ಸಮಾಜದ ಒಳಿತಿಗಾಗಿ ಕೆಲಸ ಮಾಡಿದವರು. ಹೀಗಾಗಿ ರಾಜ್ಯದ ಮುಂದಿನ ಸಿಎಂ ಆಗಿ ಪಾಟೀಲ್ ಅವರೇ ಆಗಬೇಕು ಎಂದು ಕೋಡಿಶ್ರೀಗಳು ನುಡಿದಿದ್ದಾರೆ.
ಈ ಹಿಂದೆ ಎಂ ಬಿ ಪಾಟೀಲ್ ಅವರು ಇಂತಹ ಕೆಟ್ಟ ರಾಜಕಾರಣದಲ್ಲಿ ನಾನು ಇರಲು ಇಷ್ಟ ಪಡುವುದಿಲ್ಲ ಎಂದು ಹೇಳಿ ರಾಜೀನಾಮೆ ನೀಡಲು ಮುಂದಾಗಿದ್ದರು, ಆದರೆ ತಿಳಿ ಹೇಳಿ ಆ ಕಾರ್ಯವನ್ನು ಕೈಬಿಡಲಾಗಿತ್ತು ಎಂದು ಶ್ರೀಗಳು ತಿಳಿಸಿದ್ದಾರೆ