Ad imageAd image

ಆರ್ ಎಸ್ ಎಸ್ ನವರು ಬ್ರಿಟಿಷರ ಜೊತೆಗೆ ಶಾಮೀಲಾಗಿದ್ದರು : ಎಂ. ಬಿ ಪಾಟೀಲ್

Bharath Vaibhav
ಆರ್ ಎಸ್ ಎಸ್ ನವರು ಬ್ರಿಟಿಷರ ಜೊತೆಗೆ ಶಾಮೀಲಾಗಿದ್ದರು : ಎಂ. ಬಿ ಪಾಟೀಲ್
MB PATIL
WhatsApp Group Join Now
Telegram Group Join Now

ವಿಜಯಪುರ : ರಾಜ್ಯದಲ್ಲಿ ಆರ್ ಎಸ್ ಎಸ್ ಪಥ ಸಂಚಲನ ಕುರಿತು ಈಗಾಗಲೇ ಭಾರಿ ಚರ್ಚೆಗೆ ಗ್ರಾಸವಾಗಿದ್ದು ಅದರಲ್ಲೂ ಚಿತ್ತಾಪುರದಲ್ಲಿ ಆರ್‌ಎಸ್‌ ಪಥ ಸಂಚಲನ ಕುರಿತು ಕಲ್ಬುರ್ಗಿ ಹೈಕೋರ್ಟ್ ಪೀಠದಲ್ಲಿ ವಿಚಾರಣೆ ನಡೆಯುತ್ತಿದೆ.

ಬೃಹತ್ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಅವರು ಆರ್ ಎಸ್ ಎಸ್ ನವರು ಬ್ರಿಟಿಷರ ಜೊತೆಗೆ ಶಾಮೀಲಾಗಿದ್ದರು ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ಆರ್ ಎಸ್ ಎಸ್ ನವರು ಬ್ರಿಟಿಷರ ಜೊತೆಗೆ ಶಾಮೀಲಾಗಿದ್ದರು. ಆರ್ ಎಸ್ ಎಸ್ ಸ್ವತಂತ್ರ ಹೋರಾಟದಲ್ಲಿ ಯಾಕೆ ಪಾಲ್ಗೊಂಡಿರಲಿಲ್ಲ? ಸ್ವತಂತ್ರ ಹೋರಾಟ ಎಂಬುವುದೇ ಒಂದು ದೊಡ್ಡ ಸುನಾಮಿ. ಯಾಕೆ ಆರ್ ಎಸ್ ಎಸ್ ಆ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ? ಇವರೆಲ್ಲ ದೇಶಭಕ್ತರಂತೆ, ಇವರಿಂದ ನಾವು ಕಲಿಯಬೇಕಾ? ಯಾರು ಸ್ವತಂತ್ರ ಹೋರಾಟದಲ್ಲಿ ಭಾಗವಹಿಸಿಲ್ಲವೋ ಅವರಿಂದ ನಾವು ಈಗ ಕಲಿಯಬೇಕಿದೆ ಎಂದು ಟಾಂಗ್ ನೀಡಿದರು.

ರಾಜ್ಯದಲ್ಲಿ ಆರ್ ಎಸ್ ಎಸ್ ಗೆ ಕಡಿವಾಣ ಹಾಕುವ ವಿಚಾರವಾಗಿ ಯಾವುದೇ ಕಾರ್ಯಕ್ರಮ ಇರಲಿ, ಅನುಮತಿ ಪಡೆಯಲೇಬೇಕು. ಇದರಲ್ಲಿ ಕೇವಲ ಆರ್‌ಎಸ್‌ಎಸ್ ಸಂಘಟನೆ ಅಂತ ಬರಲ್ಲ. ಆರ್ ಎಸ್ ಎಸ್ ಆಗಿರಲಿ ದಲಿತ ಸಂಘಟನೆ ಲಿಂಗಾಯತ ಸಂಘಟನೆ ಇತರೆ ಯಾವುದೇ ಸಂಘಟನೆ ಇದ್ದರೂ ಕೂಡ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಎಲ್ಲರೂ ಅನುಮತಿ ಪಡೆದು ಕಾರ್ಯಕ್ರಮ ಮಾಡಬೇಕು ಎಂದು ಸಚಿವ ಎಂಬಿ ಪಾಟೀಲ್ ತಿಳಿಸಿದರು .

 

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!