Ad imageAd image

2028 ರವರೆಗೆ ಸಿದ್ದರಾಮಯ್ಯರೆ ಸಿಎಂ ಆಗಿರುತ್ತಾರೆ : ಎಂ. ಬಿ ಪಾಟೀಲ್ 

Bharath Vaibhav
2028 ರವರೆಗೆ ಸಿದ್ದರಾಮಯ್ಯರೆ ಸಿಎಂ ಆಗಿರುತ್ತಾರೆ : ಎಂ. ಬಿ ಪಾಟೀಲ್ 
MB PATIL
WhatsApp Group Join Now
Telegram Group Join Now

ಬೆಂಗಳೂರು : ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತು ಈಗಾಗಲೇ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರು ಬ್ರೇಕ್ ಫಾಸ್ಟ್ ಮೂಲಕ ಇತಿಶ್ರೀ ಹಾಡಿದ್ದು,ಇದೀಗ 2028 ರವರೆಗೆ ಸಿಎಂ ಸಿದ್ದರಾಮಯ್ಯರೆ ಸಿಎಂ ಆಗಿರುತ್ತಾರೆ ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.

ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಕೀಯ ಶಾಶ್ವತ ಅಲ್ಲ ಅನ್ನೋದು ಸತ್ಯ. ನಾನು ಕೂಡ ಹೇಳ್ತಿನಿ, ಯಾರಪ್ಪನ ಮನೆಯ ಆಸ್ತಿನು ಅಲ್ಲ. ಸಿಎಂ ಆಡಿರುವ ಮಾತು ಸತ್ಯವಿದೆ.

ಮನುಷ್ಯನೂ ಶಾಶ್ವತ ಅಲ್ಲ. ಶಾಶ್ವತವಾಗಿ ಇರ್ತವೆ ಅನ್ನೋದು ಭ್ರಮೆ, ಜನಾದೇಶವೇ ಅಂತಿಮ. ಅಧಿಕಾರ ಹಸ್ತಾಂತರ ಯಾವಾಗ ಎಂಬುವುದು ಪ್ರಶ್ನೆ ಇಲ್ಲ ಎಂದರು. 2028 ಚುನಾವಣೆ ಅಲ್ಲವೇ ಅಲ್ಲಿಯವರೆಗೆ ಈ ಮಾತು ಯಾಕೆ? ಎಂದು ಪ್ರಶ್ನಿಸಿದರು.

ಹೈಕಮಾಂಡ್ ಏನಾದರು ಹೇಳಿದೆಯಾ? ಈಗಾಗಲೇ ಸಿಎಂ & ಡಿಸಿಎಂ ಬ್ರೇಕ್ ಫಾಸ್ಟ್ ಮಾಡಿದ್ದರಲ್ಲ ಕೊಟ್ಟ ಮಾತು ಎಂಬ ಬಗ್ಗೆ ನನಗೆ ಗೊತ್ತಿಲ್ಲ. ಏನೇ ಇದ್ರೂ ಹೈಕಮಾಂಡ್ ನಾಯಕರು ತೀರ್ಮಾನ ಮಾಡ್ತಾರೆ ಜನವರಿ ನಂತರ ಸಿಎಂ ಕುರ್ಚಿ ಖಾಲಿ ಎಂಬುದು ಊಹೆ ಅಷ್ಟೆ. ಆ ರೀತಿ ಯಾವುದೇ ಬೆಳವಣಿಗೆ ಆಗೋದಿಲ್ಲ 2028 ರವರೆಗೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ ಎಂದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!