Ad imageAd image
- Advertisement -  - Advertisement -  - Advertisement - 

ಸಿಎಂ ಆದರೇ ನಾನೇ ಆಗುವುದು : ಎಂ. ಬಿ ಪಾಟೀಲ್ 

Bharath Vaibhav
ಸಿಎಂ ಆದರೇ ನಾನೇ ಆಗುವುದು : ಎಂ. ಬಿ ಪಾಟೀಲ್ 
MB PATIL
WhatsApp Group Join Now
Telegram Group Join Now

ಬೆಂಗಳೂರು : ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಸಂಕಷ್ಟಕ್ಕೆ ಸಿಲುಕಿದ ಮೊದಲ ದಿನದಿಂದಲೂ ರಾಜ್ಯದ ಸಿಎಂ ಬದಲಾವಣೆ ವಿಚಾರ ಮುನ್ನೆಲೆಗೆ ಬಂದಿದೆ.

ಸಿಎಂ ಕುರ್ಚಿಗಾಗಿ ಕಾಂಗ್ರೆಸ್​​​​ ಸಚಿವರಲ್ಲಿ ಲಾಬಿ ನಡೆಯುತ್ತಿರುವುದು ಮಾತ್ರವಲ್ಲ, ಹಲವು ಸಚಿವರು ನೇರವಾಗಿ ತಾವೂ ಸಿಎಂ ಸ್ಥಾನದ ಆಕಾಂಕ್ಷಿ ಎಂದು ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ.

ಇದೀಗ ಸಿದ್ದರಾಮಯ್ಯ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಸಚಿವ ಎಂ.ಬಿ.ಪಾಟೀಲ್​​​​​,​​​​ ಒಂದಲ್ಲ ಒಂದು ದಿನ ನಾನೂ ಸಿಎಂ ಆಗುವೆ ಎಂದು ಹೇಳಿದ್ದಾರೆ. ಸಿಎಂ ಬದಲಾವಣೆ ವಿಚಾರದ ಕುರಿತು ಬೆಂಗಳೂರಲ್ಲಿ ಪ್ರತಿಕ್ರಿಯೆ ನೀಡಿ, ಸಿಎಂ ಆಗಲು ಸೀನಿಯಾರಿಟಿ ಬೇಕಿಲ್ಲ. ವಿಜಯಪುರದಿಂದ ಸಿಎಂ ಆದರೆ ನಾನೇ ಆಗುವುದು. ಜೆಡಿಎಸ್​​​​​ ತೊರೆದು ಇತ್ತೀಚೆಗೆ ಕಾಂಗ್ರೆಸ್​​ಗೆ ಬಂದಿರುವ ಶಿವಾನಂದ ಪಾಟೀಲ್​​ ಸಿಎಂ ಆಗಲು ಸಾಧ್ಯವೇ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.

ಸದ್ಯಕ್ಕೆ ಕಾಂಗ್ರೆಸ್​ನಲ್ಲಿ ಸಿಎಂ ಬದಲಾವಣೆ ವಿಚಾರ ಇಲ್ಲ. ಈ ಅವಧಿ ಸಂಪೂರ್ಣ ಹಾಗೂ ಮುಂದೆಯೂ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಇರುತ್ತಾರೆ. ಮುಂದೊಂದು ದಿನ ತಾವೂ ಸಿಎಂ ಆಗುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮುಡಾದಲ್ಲಿ ಸಿಎಂ ಪಾತ್ರ ಏನಿದೆ ಎಂದು ಪ್ರಶ್ನಿಸಿರುವ ಪಾಟೀಲ್, ಸೈಟ್​ ಹಂಚಿಕೆ ಬಿಜೆಪಿ ಅಧಿಕಾರದ ಅವಧಿಯಲ್ಲಿ ಆಗಿದೆ. ನಾವೂ ಕಾನೂನು ಹೋರಾಟ ಮುಂದುವರಿಸುತ್ತೇವೆ ಎಂದಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!