ಮೊಳಕಾಲ್ಮೂರು :ಶನಿವಾರ ನಡೆಯುವ ವೀರಶೈವ ಲಿಂಗಾಯಿತ ಬೃಹತ್ ಸಮಾವೇಶ ಹಾಗೂ ಸೇವಾ ದೀಕ್ಷಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂ ಡಿ ಮಂಜುನಾಥ್
ಕೆಲವರ ಹಿತಾಸಕ್ತಿಗೆ ಒಡೆದು ಹೋದ ಸಮಾಜವನ್ನು ಒಗ್ಗೂಡಿಸಿ ಕೊಂಡು ನಮ್ಮ ಹಕ್ಕುಗಳನ್ನು ಪಡೆಯಲು ಹೋರಾಟ ಮಾಡಬೇಕಿದೆ ಎಂದು ಉದ್ಯಮಿಗಳು ಮತ್ತು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ತಾಲೂಕು ಅಧ್ಯಕ್ಷರಾದ ಎಂ ಡಿ ಮಂಜುನಾಥ್ ರವರು ತಿಳಿಸಿದರು.

ಪಟ್ಟಣದಲ್ಲಿ ಗುರುವಾರ ಪತ್ರಿಕಾ ಭವನದಲ್ಲಿ ಪತ್ರಕರ್ತರೊಂದಿಗೆ ಅವರು ಮಾತನಾಡಿದರು, ಈ ಸಭೆಗೆ 4 ರಿಂದ 5000 ಜನ ಸೇರುವ ನಿರೀಕ್ಷೆಯಿದ್ದು. ಈ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ತಾಲೂಕಿನಾದ್ಯಂತ ಇರುವ ಎಲ್ಲಾ ವೀರಶೈವ ಲಿಂಗಾಯಿತ ಮುಖಂಡರು ಮತ್ತು ಕಾರ್ಯಕರ್ತರು ಎಲ್ಲರೂ ಸೇರಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು,
ಕಾರ್ಯಕ್ರಮದ ಉದ್ದೇಶವಾಗಿ ನಮ್ಮ ಬೇಡಿಕೆಗಳಾದ, ವೀರಶೈವ ಲಿಂಗಾಯತರೆಲ್ಲರೂ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಆರ್ಥಿಕವಾಗಿ ಹಿಂದುಳಿದವರಿದ್ದಾರೆ ಆದ್ದರಿಂದ ವೀರಶೈವ ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡಲು ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು.

ಅದೇ ರೀತಿ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಸಮರ್ಪಕವಾಗಿ ಅನುದಾನ ನೀಡಬೇಕು ಆರ್ಥಿಕವಾಗಿ ತೋಷಿತವಾಗಿರುವ ಸಮುದಾಯದ ಫಲಾನುಭವಿಗಳಿಗೆ ಆರ್ಥಿಕ ಚೇತರಿಕೆಗಾಗಿ ನೀಡಬೇಕು. ಪ್ರತಿ ತಾಲೂಕು ಗೊಂದು ವೀರಶೈವ ಸಮುದಾಯದ ಭವನ ನಿರ್ಮಿಸಿ ಕೊಡಬೇಕು.ಸ್ವಯಂ ಉದ್ಯೋಗ ಸೃಷ್ಟಿಗೆ ಸರ್ಕಾರವು ಯುವ ಜನರಿಗೆ ಮತ್ತು ಮಹಿಳೆಯರಿಗೆ ಆರ್ಥಿಕ ನೆರವು ನೀಡಬೇಕು.
ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಮತ್ತು ವಿದ್ಯಾರ್ಥಿಗಳಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಒದಗಿಸಬೇಕು.ಇದೇ ತರ ಇನ್ನೂ ಅನೇಕ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ನಮ್ಮ ಬೇಡಿಕೆಗಳನ್ನು ಈಡೇರಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ ಎಂದು ಸುದ್ದಿಗಾರರೊಂದಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭದ ಉಪಾಧ್ಯಕ್ಷರಾದ ನುಂಕೇಶ್ ಗೌಡ, ನಿಕಟ ಪೂರ್ವ ಅಧ್ಯಕ್ಷರಾದ ರವಿಕುಮಾರ್, ಜಿಲ್ಲಾ ನಿರ್ದೇಶಕರಾದ ವಿನಯ್ ಕುಮಾರ್, ನಿಕಟಪೂರ್ವ ಕಾರ್ಯದರ್ಶಿ ಗೌಡ್ರು, ನಿರ್ದೇಶಕರಾದ ಕೊಂಡ್ಲಹಳ್ಳಿ ಚಂದ್ರಣ್ಣ, ಮೊಗಲಹಳ್ಳಿ ವಿಜಯಕುಮಾರ್, ಅಪ್ಪಿ ಮಲ್ಲಿ ಮಾಜಿ ಪಟ್ಟಣ ಪಂಚಾಯಿತಿ ಅಧ್ಯಕ್ಷರು,ಇನ್ನು ಹಲವರು ಉಪಸ್ಥಿತರಿದ್ದರು..
ವರದಿ: ಪಿಎಂ ಗಂಗಾಧರ




