Ad imageAd image

ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷರಾಗಿ ಎಂ.ಡಿ ಮಂಜುನಾಥ್ ಅವಿರೋಧವಾಗಿ ಆಯ್ಕೆ

Bharath Vaibhav
ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷರಾಗಿ ಎಂ.ಡಿ ಮಂಜುನಾಥ್ ಅವಿರೋಧವಾಗಿ ಆಯ್ಕೆ
WhatsApp Group Join Now
Telegram Group Join Now

ಮೊಳಕಾಲ್ಮುರು:-ಅಖಿಲ ಭಾರತ ವೀರಶೈವ ಮಹಾಸಭಾದ ತಾಲ್ಲೂಕು ಘಟಕಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ತಾಲ್ಲೂಕಿನ ರಾಂಪುರದ ಡಿ.ಕೆ. ಆರ್. ಗ್ರೂಪ್ ಮಾಲೀಕ ಎಂ.ಡಿ. ಮಂಜುನಾಥ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

ಪಟ್ಟಣದ ಸೊಸೈಟಿ ಭವನದ ಆವರಣದಲ್ಲಿ ಆಯ್ಕೆ ಸಭೆ ನಡೆಯಿತು. ಜುಲೈ 4 ರಿಂದ
ಆಯ್ಕೆಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಜುಲೈ 21ರಂದು ಮಹಾಸಭಾದ
ರಾಜ್ಯ ಸಮಿತಿಗೆ ಚುನಾವಣೆ  ನಡೆಯುತ್ತಿರುವ ಕಾರಣ ತಾಲ್ಲೂಕು ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ. ಮುಂದಿನ 5 ವರ್ಷಕ್ಕೆ ಈ ಸಮಿತಿ ಅಸ್ಥಿತ್ವದಲ್ಲಿ
ಇರಲಿದೆ ಎಂದು ಚುನಾವಣಾಧಿ- ಕಾರಿಯಾಗಿ ಕಾರ್ಯ ನಿರ್ವಹಿಸಿದ ಶಿಕ್ಷಕ ಬಿ.ಎಸ್.ಮಂಜುನಾಥ್ ತಿಳಿಸಿದರು.

ಈ ಸಂದರ್ಭದಲ್ಲಿ ನೂರಾರು ಅಭಿಮಾನಿಗಳು ಮಂಗಳವಾರ ಸಿಹಿತಿನಿಸಿ ಅವರನ್ನು ಸನ್ಮಾನಿಸಲಾಯಿತು.ಇದೇ ವೇಳೆನಿರ್ದೇಶಕರಾಗಿ,ವಿ.ವೇದಾವತಿ,ಸಿ.ರಂಜಿತಾ,ಎ.ಮಂಜುಳಾ,ಎ.ಟಿ.ಗುರುಶಾಂತಮ್ಮ, ಕೆ.ಸುನಂದಾ,ಪಿ.ಶ್ರುತಿ, ಆರ್.ಕೆ.ಗೌರಮ್ಮ ಸೇರಿದಂತೆ ಹಲವರು ತಾಲೂಕು ಘಟಕಕ್ಕೆ ಆಯ್ಕೆಯಾಗಿದ್ದಾರೆ.

ವರದಿ:- ಪಿಎಂ ಗಂಗಾಧರ

 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!