Ad imageAd image

ಪಟ್ಟಣ ಪಂಚಾಯಿತಿಯಲ್ಲಿ ಪೌರಕಾರ್ಮಿಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಣೆ..

Bharath Vaibhav
ಪಟ್ಟಣ ಪಂಚಾಯಿತಿಯಲ್ಲಿ ಪೌರಕಾರ್ಮಿಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಣೆ..
WhatsApp Group Join Now
Telegram Group Join Now

ಮೊಳಕಾಲ್ಮೂರು:-ದುರ್ವಾಸನೆಯನ್ನು ತಾವು ಕುಡಿದು ಸುವಾಸನೆಯನ್ನು ಕೊಡುವವರೇ ಪೌರಕಾರ್ಮಿಕರು ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಲೀಲಾವತಿ ಸಿದ್ದಣ್ಣ ರವರು ತಿಳಿಸಿದರು.

ಪಟ್ಟಣದಲ್ಲಿ ಸೋಮವಾರ ಪೌರಕಾರ್ಮಿಕರ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇಡೀ ಸಮಾಜವನ್ನು ಸ್ವಚ್ಛಗೊಳಿಸಿ ಸುಂದರ ಸಮಾಜವನ್ನು ನಿರ್ಮಿಸುವ ಕೆಲಸ ಪೌರಕಾರ್ಮಿಕರದು ಅವರ ಯಾವುದೇ ಕಷ್ಟಗಳಿರಲಿ ನಾನು ಅವರಿಗೆ ಸ್ಪಂದಿಸುತ್ತೇನೆ ಎಂದರು.

ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ನಾಮನಿರ್ದೇಶನ ಸದಸ್ಯರಾದ ಪ್ರಕಾಶ್ ಮಾತನಾಡಿ ಪೌರಕಾರ್ಮಿಕರು ಸ್ವಚ್ಛಗೊಳಿಸುವ ಡಾಕ್ಟರ್ ಇದ್ದಹಾಗೆ ಕಾಯಿಲೆ ಬಂದ ಮೇಲೆ ನಾವು ಡಾಕ್ಟರ್ ಬಳಿ ಹೋಗಿ ತಪಸ್ಸು ಮಾಡಿಸಿಕೊಳ್ಳುತ್ತೇವೆ ಆದರೆ ಪೌರಕಾರ್ಮಿಕರು ಕಾಯಿಲೆ ಬರುವ ಹಾಗೆ ನೋಡಿಕೊಳ್ಳುತ್ತಾರೆ ಎಂದರು. ಯಾವುದೇ ಬ್ಯಾಕ್ಟೀರಿಯಾ ಹರಡುದಂತೆ ಸೊಳ್ಳೆಗಳು ಉತ್ಪತ್ತಿಯಾಗದಂತೆ ರೋಗ ಹರಡದಂತೆ ತಡೆಗಟ್ಟುವ ನಿಜವಾದ ಡಾಕ್ಟರ್ ಯಾರಾದರೂ ಇದ್ದರೆ ಅದು ಪೌರಕಾರ್ಮಿಕರು ಎಂದರು.

ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಪಾಲಯ ಮಾತನಾಡಿ ಈ ಹಿಂದೆ ಎರಡು ಬಾರಿ ಪೌರಕಾರ್ಮಿಕರ ದಿನಾಚರಣೆ ಆಚರಣೆ ಮಾಡಬೇಕು ಎಂದು ಇತ್ತು ಇತ್ತೀಚಿನ ದಿನಗಳಲ್ಲಿ ಸರ್ಕಾರ ಆದೇಶ ಹೊರಡಿಸಿ ಸೆಪ್ಟೆಂಬರ್ 23ರಂದು ಪೌರಕಾರ್ಮಿಕರ ದಿನಾಚರಣೆಯನ್ನು ಆಚರಣೆ ಮಾಡಬೇಕು ಎಂದಿದ್ದರು. ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡುತ್ತೇವೆ ವರ್ಷಕ್ಕೆ ಒಂದು ಬಾರಿ ಸಂಪೂರ್ಣ ಆರೋಗ್ಯ ತಪಾಸಣೆ ಮಾಡುತ್ತೇವೆ. ಸರ್ಕಾರದ ವತಿಯಿಂದ ಗೃಹ ಭಾಗ್ಯ ಯೋಜನೆಯು ಕೂಡ ಇದೆ ಇನ್ನು ಅನೇಕ ಸರ್ಕಾರ ಯೋಜನೆಗಳನ್ನು ಸದುಪಯೋಗ ಪಡೆದುಕೊಂಡು ಸ್ವಾಸ್ಥ ಸಮಾಜ ನಿರ್ಮಾಣ ಮಾಡಬೇಕು ಎಂದು ಪೌರಕಾರ್ಮಿಕರಿಗೆ ತಿಳಿಸಿದರು.

ಅದೇ ರೀತಿ ಪಟ್ಟಣ ಪಂಚಾಯತಿ ಉಪಾಧ್ಯಕ್ಷರಾದ ತಿಪ್ಪೇಸ್ವಾಮಿ ಮಾತನಾಡಿ ಸುಮಾರು ದಿನಗಳಿಂದ ಸೇಫ್ಟಿ ಪರ್ಪಸ್ ಗ್ಲೌಸ್ ರನ್ ಬೂಟ್ಸ್ ಫೇಸ್ ಮಾಸ್ಕ್ ಇನ್ನು ಅನೇಕ ಮುಂಜಾಗ್ರತಾ ಸಾಮಗ್ರಿಗಳನ್ನು ನೀಡಬೇಕು ಎಂದು ಮನವಿ ಮಾಡಿದರು. ದಯವಿಟ್ಟು ನಿವೇಶನ ಕ್ಕೋಸ್ಕರ ಹಣವನ್ನು ನಿಗದಿ ಮಾಡಿದ್ದೆವು ಆ ಹಣದಲ್ಲಿ ಪೌರಕಾರ್ಮಿಕರ ಗೋಸ್ಕರ ಅಂತ ಹಂತವಾಗಿ ಮನೆ ನಿರ್ಮಾಣ ಮಾಡಬೇಕು ಎಂದರು. ನಮ್ಮ ದೇಶಕ್ಕೆ ರಾಜ್ಯಕ್ಕೆ ನಿಜವಾದ ಹೀರೋಗಳು ಯಾರಾದರೂ ಇದ್ದರೆ ಅದು ಪೌರಕಾರ್ಮಿಕರು ಎಂದರು.

ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಲಕ್ಷ್ಮಣ್ ಟಿಟಿ ರವಿಕುಮಾರ್ ರೂಪ ವಿನಯ್ ಕುಮಾರ್ ಹೊಬೇದುಲ್ಲಾ, ಅಬ್ದುಲ್ಲ ಪೌರಕಾರ್ಮಿಕರ ದಿನಾಚರಣೆಯ ಮಹತ್ವವನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯರಾದ ಭಾಗ್ಯಮ್ಮ ಭೀಮಣ್ಣ, ಎಮ್ ಎನ್ ಮಂಜಣ್ಣ ಶುಭ ಪೃಥ್ವಿರಾಜ್ ದೇವದಾಸ್ ಸಿಬ್ಬಂದಿಗಳಾದ ಶ್ರೀನಿವಾಸ್ ಕೃಷ್ಣಪ್ಪ ಮರಿಸ್ವಾಮಿ ಪೆನ್ನು ಒಬ್ಳಿ, ಪವನ್ ಪೌರಕಾರ್ಮಿಕರಾದ ಸಿದ್ದಪ್ಪ ಹನುಮಂತಪ್ಪ ಓಬಮ್ಮ ಮಲ್ಲಕ್ಕ ಗಂಗಮ್ಮ ಮಲ್ಲಮ್ಮ ನಾಗರಾಜ ಚಂದ್ರಪ್ಪ ತಿಮ್ಮಕ್ಕ ಇನ್ನು ಹಲವಾರು ಉಪಸ್ಥಿತರಿದ್ದರು.

ವರದಿ :-ಪಿಎಂ ಗಂಗಾಧರ

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!