ಸೇಡಂ: ತಾಲೂಕಿನ ಮೆದಕ್ ಗ್ರಾಮ ಪಂಚಾಯಿತಿಯನ್ನು ಇದೆ ಜನವರಿ 20ರಂದು ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಗುವುದು ಎಂದು ಅಂಬೇಡ್ಕರ್ ಯುವಕರ ಸಂಘ ಅಧ್ಯಕ್ಷರಾದ ಸಾಬಪ್ಪ ಅಬ್ಬಗಳ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಈ ಪ್ರತಿಭಟನೆಗೆ ಮುಖ್ಯ ಕಾರಣ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹರಿಜನವಾಡ ಸಿಲಾರಕೋಟ್ ನಲ್ಲಿ ಸುಮಾರು ದಿನಗಳಿಂದ ಶೌಚಾಲಯ ಕೊರತೆಯಿದ್ದು.
ಶೌಚಾಲಯ ನಿರ್ಮಾಣಕ್ಕೆ ಮನವಿ ಮಾಡಿದರು ಇವತ್ತು ನಾಳೆ ಎಂದು ಸಮಯ ವ್ಯರ್ಥ ಮಾಡುತ್ತಿದ್ದಾರೆ ಪಂಚಾಯಿತಿ ಅಧಿಕಾರಿಗಳು ರಾಮಪ್ಪ ಅವರು ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿಲಾರಕೋಟ್ ನಲ್ಲಿ ಎಸ್ಡಿಎಂಸಿ ಬದಲಾವಣೆ ಕುರಿತು ಶಾಲೆ ಕಡೆಯಿಂದ ಪತ್ರ ಸಲ್ಲಿಸಿದರು ಯಾವುದೇ ಮಾಹಿತಿ ನೀಡದೆ ಮೌನವಾಗಿದ್ದಾರೆ, ಅಷ್ಟೇ ಅಲ್ಲದೆ ಅಲ್ಲಿನ ಶಾಲೆಯಲ್ಲಿ ಅಡಿಗೆ ಸಹಾಯಕಿಯರ ನೇಮಕಾತಿಯಲ್ಲಿ ಅವ್ಯವಹಾರ ಮಾಡಲಾಗಿದೆ ಮತ್ತು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿ ಮುಂದಿನ ರಸ್ತೆಯು ಸಂಪೂರ್ಣ ಹದಗೆಟ್ಟು ಸಾರ್ವಜನಿಕರಿಗೆ ಅತಿಯಾದ ತೊಂದರೆಯಾಗಿದೆ ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಅದಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವುದು ನಮಗೆ ಬೇಸರವಾಗಿದೆ ಆದ ಕಾರಣ ಜನವರಿ 20ರಂದು ಪಂಚಾಯತ್ ಮುತ್ತಿಗೆ ಹಾಕಿ ತಾಲೂಕು ಪಂಚಾಯತ್ ಅಧಿಕಾರಿಗಳು ಬರುವವರೆಗೆ ಅನಿರ್ದಿಷ್ಟ ಹೋರಾಟ ಮಾಡಲಾಗುವುದು ಎಂದು ಸಾಬಪ್ಪ ಅವರು ಹೇಳಿದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




