Ad imageAd image

ಕಟ್ಟಡ ಕಾರ್ಮಿಕರ ವೈದ್ಯಕೀಯ ವೆಚ್ಚ 5 ಲಕ್ಷ ರೂ.ಗೆ ಹೆಚ್ಚಳ 

Bharath Vaibhav
ಕಟ್ಟಡ ಕಾರ್ಮಿಕರ ವೈದ್ಯಕೀಯ ವೆಚ್ಚ 5 ಲಕ್ಷ ರೂ.ಗೆ ಹೆಚ್ಚಳ 
SANTOSH LAD
WhatsApp Group Join Now
Telegram Group Join Now

ಬೆಂಗಳೂರು: ಕಟ್ಟಡ ಕಾರ್ಮಿಕರ ವೈದ್ಯಕೀಯ ವೆಚ್ಚವನ್ನು ಹೆಚ್ಚಳ ಮಾಡಲಾಗಿದೆ. ಕಟ್ಟಡ ಕಾರ್ಮಿಕರು ಕ್ಯಾನ್ಸರ್, ಹೃದ್ರೋಗ ಚಿಕಿತ್ಸೆ ಪಡೆಯಲು ವೈದ್ಯಕೀಯ ವೆಚ್ಚ ಸಹಾಯಧನವನ್ನು 2 ಲಕ್ಷ ರೂಪಾಯಿಯಿಂದ 5 ಲಕ್ಷ ರೂ.ಗೆ ಹೆಚ್ಚಳ ಮಾಡಲು ಕಾರ್ಮಿಕ ಮಂಡಳಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ವಿಕಾಸಸೌಧದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

ಆಯುಷ್ಮಾನ್ ಯೋಜನೆಯ 5 ಲಕ್ಷ ರೂಪಾಯಿವರೆಗೆ ಪ್ರಯೋಜನ ಪಡೆಯುವ ಕಾರ್ಮಿಕರಿಗೆ ಎರಡು ಲಕ್ಷ ರೂಪಾಯಿ ಟಾಪ್‌ಅಪ್ ನೆರವು ನೀಡಲು ಸಭೆ ಅನುಮೋದನೆ ನೀಡಿದೆ.

ಧಾರವಾಡ, ಬೆಂಗಳೂರಿನಲ್ಲಿ ಸ್ಕಿಲ್ ಇಂಟರ್ನ್ಯಾಷನಲ್ ವಿವಿ ಸ್ಥಾಪಿಸುವ ಬಗ್ಗೆ ವಿಸ್ತೃತ ಯೋಜನಾ ವರದಿ ತಯಾರಿಸಲು ಸಭೆ ಒಪ್ಪಿಗೆ ಸೂಚಿಸಿದೆ. ಧಾರವಾಡದಲ್ಲಿ ಸರ್ಕಾರ ನೀಡಿದ ಆರು ಎಕರೆ ಜಮೀನಿನಲ್ಲಿ ಸುಮಾರು 200 ಕೋಟಿ ರೂಪಾಯಿ ವೆಚ್ಚದಲ್ಲಿ ಕಾರ್ಮಿಕರ ಗುಂಪು ಮನೆ ನಿರ್ಮಿಸಲು ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!