ಜೋಯಿಡಾ : ತಾಲೂಕಿನ ಸಮಗ್ರ ಅಭಿವೃದ್ಧಿ ಭಾಗವಾಗಿ ನಿರ್ದಿಷ್ಟ ಹಕ್ಕೊತ್ತಾಯಗಳ ಆಧಾರದಲ್ಲಿ ಶಾಸಕರಾದ ಆರ್.ವಿ. ದೇಶಪಾಂಡೆಯವರ ಅಧ್ಯಕ್ಷತೆಯಲ್ಲಿ ಇಂದು ದಿ. ೨೦-೧೨-೨೦೨೫ ರಂದು ಹಳಿಯಾಳದಲ್ಲಿ ಸಭೆ ನಡೆಯಿತು. ಕರ್ನಾಟಕ ಪ್ರಾಂತ ರೈತ ಸಂಘದ ಪಾದಯಾತ್ರೆ ಹೋರಾಟದಲ್ಲಿ ಮುಂದಿಟ್ಟ ಎಲ್ಲಾ ಪ್ರಮುಖ ಬೇಡಿಕೆಗಳು ನೈಜವಾಗಿದ್ದು ಅವುಗಳನ್ನು ಈಡೇರಿಸಲು ಎಲ್ಲಾ ಇಲಾಖೆಗಳು ಚರ್ಚಿಸಿ ಒಪ್ಪಿಕೊಂಡಿದ್ದು ಇದೊಂದು ಯಶಸ್ವಿ ಸಭೆಯಾಗಿದೆ.
ತಾಲೂಕು ಕೇಂದ್ರದಿಂದ ಬಹುದೂರದಲ್ಲಿರುವ ಗ್ರಾಮೀಣ ಭಾಗದ ಡಿಗ್ಗಿಯಿಂದ ಆರಂಭವಾಗುವ ಉಳವಿ ರಸ್ತೆ ನಿರ್ಮಾಣ, ಕಾರ್ಟೋಳಿಯಿಂದ ೭ ಕಿಮಿ ಖಾನಗಾಂವ್ ಕ್ರಾಸ್ ತನಕದ ರಸ್ತೆ, ಸೇತುವೆ, ಕುಂಡಲ, ಕಾರ್ಟೋಳಿ, ಸುಳಗೇರಿ ಹಾಗೂ ವಾಗೇಲಿ ಒಳಗೊಂಡು ೪ ಬಸ್ ವ್ಯವಸ್ಥೆ, ರೇಷನ್ ಗೆ ನ್ಯಾಯ ಬೆಲೆ ಖಾಯಂ ಅಂಗಡಿ ಹಾಗೂ ಸಂಚಾರಿ ನ್ಯಾಯ ಬೆಲೆ ಅಂಗಡಿ, ಶಾಲೆ ಅಂಗನವಾಡಿ ಕಟ್ಟಡ, ವನ್ಯ ಜೀವಿ ವಿಭಾಗದ ಕಿರುಕುಳ ತಪ್ಪಿಸಿ ವಿದ್ಯುತ್ ಸೌಕರ್ಯ ಒದಗಿಸುವಿಕೆ, ಸಿಸೈ ತೆರಾಳಿ ದೂದಮಳಾ ಮಾರ್ಗದ ರಸ್ತೆ ಸೇತುವೆ ದುರಸ್ತಿ, ದೈನಂದಿನ ಅಗತ್ಯ ಔಷಧಗಳು, ಸಮುದಾಯ ಆರೋಗ್ಯ ಸಹಾಯಕರ ಕೊಡುವುದು, ಜೋಯಿಡಾದ ಭಾಗವಾಗಿರುವ ಸುಳಗೇರಿ ಮತ್ತು ಕಾರವಾರದ ಭಾಗವಾದ ಲಾಂಡೆ ಬಗ್ಗೆ ಪರಸ್ಪರ ಕೊಡುಕೊಳ್ಳುವಿಕೆ ಹೀಗೆ ಕೂಡಲೇ ಈಡೇರಿಸಿ ಒಪ್ಪಿಕೊಂಡಿದ್ದಾರೆ. ಉಳಿದಂತೆ, ಜೋಯಿಡಾ ತಾಲೂಕಿನಲ್ಲಿ ಜನೋಪಯೋಗಿಯಾಗಿ ಆಗಲೇಬೇಕಾದ ಕೆಲಸಗಳ ಜಾರಿಗೆ ವಿಶೇಷ ಪ್ಯಾಕೇಜ್ ತಯಾರಿ, ಉಳವಿಗೆ ಪ್ರಾಧಿಕಾರ ರಚನೆ, ಪ್ರವಾಸೋದ್ಯಮ, ಆಸ್ಪತ್ರೆ, ಹಕ್ಕೊತ್ತಾಯಗಳನ್ನು ಹಂತಹಂತವಾಗಿ ಈಡೇರಿಸಲು ಚರ್ಚಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷರಾದ ಪ್ರೇಮಾನಂದ ವೆಳಿಪ, ಕಾರ್ಯದರ್ಶಿ ರಾಜೇಶ ಗಾವಡಾ, ಜಿಲ್ಲಾ ಕಾರ್ಯದರ್ಶಿ ಶ್ಯಾಮನಾಥ ನಾಯ್ಕ, ಸಿಐಟಿಯು ಜಿಲ್ಲಾ ಉಪಾಧ್ಯಕ್ಷರಾದ ಯಮುನಾ ಗಾಂವ್ಕರ್, ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಲೀಂ ಸಯ್ಯದ್, ಜಯಶ್ರೀ ಹಿರೇಕರ್, ದಯಾನಂದ ನಾಯ್ಕ, ದತ್ತಾ ವೆಳಿಪ್, ವಿಕಾಸ ವೆಳಿಪ್, ಯಶವಂತ ವೆಳಿಪ್, ಸಂತೋಷ ವೆಳಿಪ್, ಚಂದ್ರು ಸಾವಂತ, ಮಾದೇವ ಸಾವಂತ, ಸುಭಾಷ ಮಿರಾಸಿ, ಡಿಗ್ಗಿ, ಗಣಪತಿ ವೆಳಿಪ, ದೇವಿದಾಸ ವೆಳಿಪ, ಸುರೇಶ ವೆಳಿಪ, ಗಜಾನನ ವೆಳಿಪ, ನಿರ್ಮಲಾ, ಸುಲಕ್ಷಾ,ಕಮಲಿ ವೆಳಿಪ ಕುಂಡಲ, ಹನುಮಂತ ಸಿಂಧೋಗಿ ಮತ್ತು
ಸಂಘಟನೆಯ ಇತರರು ಹಾಜರಿದ್ದರು.
ತಹಸಿಲ್ದಾರರು, ಜಿಪಂ ತಾಪಂ, ಆರೋಗ್ಯ ಇಲಾಖೆ, ಪಿಡಬ್ಲುಡಿ, ಅರಣ್ಯ ಇಲಾಖೆ, ಸಮಾಜಕಲ್ಯಾಣ ಇಲಾಖೆ, ಸಾರಿಗೆ ವ್ಯವಸ್ಥಾಪಕರು ಹೀಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.




