Ad imageAd image

ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿರುವ ಬಾಬಾಸಾಹೇಬರ ನೆನಪುಗಳು

Bharath Vaibhav
ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿರುವ ಬಾಬಾಸಾಹೇಬರ ನೆನಪುಗಳು
WhatsApp Group Join Now
Telegram Group Join Now

ಚಿಕ್ಕೋಡಿ : ಬಾಬಾಸಾಹೇಬರ ಯುಗದಲ್ಲಿ ಜೀವಿಸಿದ್ದವರು ಇಂದಿನ ಪೀಳಿಗೆಯವರಿಗಿಂತ ಹೆಚ್ಚು ಭಾಗ್ಯಶಾಲಿಗಳು. ಜೀವನದಲ್ಲಿ ಅವರ ಜೊತೆ ಜೊತೆಯಾದವರು ಅವರ ಬದುಕಿನ ದಾರಿಯಲ್ಲಿ ಅವರ ಸಂಪರ್ಕಕ್ಕೆ ಬಂದು ಅವರಿಂದ ಪ್ರೇರೇಪಿತರಾಗಿ ತಮ್ಮ ಬದುಕಿನ ದಾರಿಯನ್ನು ಬದಳಿಸಿಕೊಂಡವರು. ಅವರನ್ನು ಹತ್ತಿರದಿಂದ ಕಂಡವರು ನಿಜವಾಗಿಯೂ ಅದೃಷ್ಟವಂತರು. ಇಂಥವರ ಅನುಭವಗಳನ್ನು ಹೇಳುವ ಮೂಲಕ ಮುಂದಿನ ಪೀಳಿಗೆಗೆ ರವಾಣಿಸುವುದು.ಎಲ್ಲರ ಹೊಣೆಗಾರಿಕೆಯಾಗಿದೆ.

ಇದಕ್ಕೆಂದೇ ಬಾಬಾಸಾಹೇಬರ ಕುರುತು ಇತಿಹಾಸದಲ್ಲಿ ಹುದುಗಿ ಹೋಗಿರುವ ಹಲವು ವಿಷಯಗಳ ಕುರಿತು.ಬೆಳಕಿಗೆ ತಂದು ಅದನ್ನು ದಾಖಲಿಸಬೇಕಾಗಿದೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಐಗಳಿಯಲ್ಲಿ ನೆಲೆಗೊಂಡಿದ್ದ ಗೌರಬಾಯಿ ಮತ್ತು ಯಲ್ಲವ್ವ ದುರ್ಗಪ್ಪ ಕಾಂಬಳೆ ಯವರು,ಐಗಳಿ ಗ್ರಾಮಕ್ಕೂ ಬಾಬಾಸಾಹೇಬರಿಗೂ ಸಂಬಂಧಿಸಿದ ಘಟನೆಯನ್ನು ಹೀಗೆ ತಿಳಿಸುತ್ತಾರೆ, 1947-48 ರ ಸುಮಾರಿಗೆ ಬಾಬಾಸಾಹೇಬರು ಒಂದು ಕೇಸ್ ವಿಚಾರವಾಗಿ ಬಿಜಾಪುರಕ್ಕೆ ಬಂದಾಗ ಗ್ರಾಮಸ್ಥರು ಹೋಗಿ ಅಂಬೇಡ್ಕರ್ ಅವರನ್ನು ಕರಕೊಂಡು ಬಂದಾಗ ಗೌರಬಾಯಿ ಮತ್ತು ಯಲ್ಲವ್ವ ದುರ್ಗಪ್ಪ ಕಾಂಬಳೆಯವರು ಆರತಿ ಬೆಳಗಿ ಅವರನ್ನ ಸ್ವಾಗತಿಸಿ ತುಂಬಾ ಹತ್ತಿರದಿಂದ ನೋಡಿದ್ದ ನೆನಪುಗಳು.

ಆಗ ಅಂಬೇಡ್ಕರ್ ರವರು ಒಂದು ಒಂದೂವರೆ ಘಂಟೆಗಳ ಕಾಲ ಐಗಳಿ ಗ್ರಾಮದ ಸಮುದಾಯ ಭವನದಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ದಲಿತ ಮುಖಂಡರ ಜೊತೆ ಚರ್ಚಿಸಿದ್ದರು, ಅವತ್ತು ಬಾಬಾಸಾಹೇಬರು ಬಂದು ಹೋದ ಸವಿನೆನಪಿಗೆ ಇಂದಿಗೂ ಅವರ ಆದರ್ಶ ಗಳ ಪಾಲನೆ, ಹಲವು ಸಾಮಾಜಿಕ ಕಾರ್ಯಗಳು ಐಗಳಿ ಗ್ರಾಮದಲ್ಲಿ ಇನ್ನುಕೂಡ ಜೀವಂತವಾಗಿವೆ.

ವಿಶೇಷ ಎಂದರೆ ಈ ಹಿಂದೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಐಗಳಿ ಗ್ರಾಮಕ್ಕೆ ಆಗಮಿಸಿದಾಗ ಆರತಿ ಬೆಳಗಿಸಿ ಸ್ವಾಗತಿಸಿದ ಶತಾಯುಷಿ ಯಲ್ಲವ್ವ ದುರ್ಗಪ್ಪ ಕಾಂಬಳೆ ಇವರು ಡಿಸೆಂಬರ್ 6 2024 ರಂದು ನಿಧನರಾಗಿದ್ದಾರೆ.ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಪರಿನಿರ್ವಾಣ ಹೊಂದಿದ ದಿನದಂದೇ ಇವರು ಕೂಡ ನಿರ್ವಾಣ ಹೊಂದಿದ್ದಾರೆ. ಇವರು ಅಂಬೇಡ್ಕರ್ ಅವರ ಬಗ್ಗೆ ಅಪಾರ ಗೌರವ ಹೊಂದಿದ್ದರು.ಅವರದೆ ಎನ್ನಲಾದ ಹಳೆಯ ವಿಡಿಯೋ ಬಾಬಾಸಾಹೇಬರು ಬಂದ ಹೋದ ನೆನಪುಗಳನ್ನ ಮರುಕಳಿಸುವಂತಿದೆ.

ವರದಿ :ಅಜಯ ಕಾಂಬಳೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!