ಗೋಕಾಕ : ಪಟ್ಟಣದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕೂಡ ಸಾರ್ವಜನಿಕ ಗಣೇಶ ಉತ್ಸವ ಮಂಡಲ ಗೋಕಾಕ ನೇತೃತ್ವದಲ್ಲಿ ಹನುಮ ಜಯಂತಿಯನ್ನು ವಿಜೃಂಭಣೆಯಿಂದ ನೆರವೇರಿತು.
ಕೊಳವಿ ಹನುಮಾನ ದೇವಸ್ಥಾನದ ಹತ್ತಿರ ಹನುಮ ಉತ್ಸವಮೂರ್ತಿ, ಆಂಜನೇಯ ವಿಗ್ರಹಗಳಿಗೆ ಸದಾನಂದ ಕಲಾಲ ಬಸವರಾಜ ಕಲ್ಯಾಣ ಶೆಟ್ಟಿ,ಆನಂದ ಪಾಟೀಲ, ಸಂಜು ಚಿಪ್ಪಲಕಟ್ಟಿ ಇವರು ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.
ವಾಲಿಬಾಲ ಅಸೋಸಿಯೆಷನ್ ಆಪ್ ಕರ್ನಾಟಕ ಉಪಾದಕ್ಷರಾದ ಸರ್ವೊತ್ತಮ ಜಾರಕಿಹೋಳಿ ಇವರು ಹನುಮಾನ ರೂಪಕಕ್ಕೆ ಪುಷ್ಪಾರ್ಚನೆ ಮಾಡಿ ಸರ್ವರಿಗೂ ಹನುಮಾನ ಜಯಂತಿಯ ಶುಭಾಶಯ ಕೋರಿದರು.
ಇನ್ನು ಕೇಸರಿ ಶಾಲು ಹಾಕಿಕೊಂಡು, ಕೈಯಲ್ಲಿ ಹನುಮ ಧ್ವಜ ಹಿಡಿದ ಭಕ್ತರು, ಹಣೆಯ ಮೇಲೆ ಕೆಸರಿ ತಿಲಕ ಹಚ್ವಿಕೊಂಡು ಮೆರವಣಿಯುದ್ದಕ್ಕೂ ‘ಜೈ ಶ್ರೀರಾಮ್, ಹನುಮಾನ್ ಕೀ ಜೈ’ ಎಂದು ಘೋಷಣೆ ಕೂಗುತ್ತಾ, ವಾದ್ಯ, ತಮಟೆ, ನಗರಿ ಸದ್ದಿಗೆ ಕುಣಿದು ಕುಪ್ಪಳಿಸಿದರು.
ಮೆರವಣಿಗೆ ಆರಂಭವಾಗುತ್ತಿದ್ದಂತೆ ಪರಸ್ಥಳಗಳಿಂದ ತಂಡೋಪತಂಡವಾಗಿ ನೂರಾರು ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದರು. ಮಹಡಿ ಮೇಲೆ ನಿಂತು ಪಟ್ಟಣದ ನಾಗರಿಕರು ಮೆರವಣಿಗೆಯನ್ನು ಕಣ್ತುಂಬಿಕೊಂಡರು. ದಾರಿಯುದ್ದಕ್ಕೂ ಹನುಮನಿಗೆ ಪೂಜೆ ಸಲ್ಲಿಸಿದರು.
ಮೆರವಣಿಗೆಯಲ್ಲಿ ನರಸಿಂಹ, ರಾವಣ, ರಾಮದೂತ ಹನುಮಾನ, ನರಸಾಸುರ, ರಾವಣ ಸಂಹಾರ, ವೀರಗಾಸೆ, ರೂಪಕಗಳು ಗಮನಸೆಳೆದವು ಭಾವಚಿತ್ರ ಹಿಡಿದು ಅಭಿಮಾನ ಮೆರೆದರು.
ಮೆರವಣಿಗೆಯು ಕೊಳವಿ ಹನುಮಾನ ದೇವಸ್ಥಾನದಿಂದ ಹೊರಟು ಗೊಂಬಿ ಗುಡಿ,ಅಪ್ಸರಾ ಕೂಟ ,ಸಂಗೋಳ್ಳಿ ರಾಯಣ್ಣ ವೃತ್ತ ಬಸ್ ನಿಲ್ದಾಣ, ನಂತರ ಹನುಮ ದೇವಸ್ಥಾನಕ್ಕೆ ಆಗಮಿಸಿತು. ನಂತರ ಮಹಾ ಮಂಗಳಾರತಿ ಮಾಡಿ ಪ್ರಸಾದ ನೀಡಿದರು.
ಇನ್ನು ಯಾವುದೆ ತರಹದ ಅಹಿತಕರ ಘಟನೆ ನಡೆಯದಂತೆ ಗೋಕಾಕ ಸಿ,ಪಿ,ಆಯ್, ಸುರೇಶಬಾಬು, ನಗರ ಪಿ,ಎಸ್,ಐ, ಕೆ,ವಾಲಿಕಾರ, ಗ್ರಾಮೀಣ ಪಿ,ಎಸ್,ಐ, ಕಿರಣ ಮೊಹಿತೆಯವರು ಬಂದೊ ಮಾಡಿ ನಿಗಾವಹಿಸಿದ್ದರು..
ಮನೋಹರ ಮೇಗೇರಿ