
ಬೆಂಗಳೂರು: ಧೀಮಂತ ನಾಯಕ ಶಂಕರ್ ಗೌಡ ಪಾಟೀಲ್, ಚಿಂತಕರು ಹಾಗೂ ಬೆಂಗಳೂರು ಜಿಲ್ಲಾ ಅಧ್ಯಕ್ಷರಾದ ಡಾ.ಸಂಗನ ಬಸಪ್ಪ ಬಿರಾದಾರ್, ಹಿರಿಯ ಮುಖಂಡ ಎಂ ಹೆಚ್ ಪಾಟೀಲ್ ಮತ್ತು ರಾಜ್ಯಾಧ್ಯಕ್ಷ ಹನುಮಂತಪ್ಪ ಮೇಡೆಗಾರ್ ಇವರುಗಳ ನೇತೃತ್ವದಲ್ಲಿ ಕ್ಷೇತ್ರದ ಬನಶಂಕರಿ ಹೋಟೆಲ್ ಆವರಣದಲ್ಲಿ ಉತ್ತರ ಕರ್ನಾಟಕ ಜಾನಪದ ಪರಿಷತ್ತಿನ ಸರ್ವ ಸದಸ್ಯರ ಸಭೆ ಆಯೋಜಿಸಲಾಗಿತ್ತು.

ಸಭೆಯಲ್ಲಿ ಸಂಘ ಅಭಿವೃದ್ಧಿಗೆ ಎಲ್ಲರೂ ಒತ್ತು ನೀಡ ಬೇಕು ಪ್ರತಿಯೋಬ್ಬರು ಸದಸ್ಯ ಅಭಿಯಾನದಲ್ಲಿ ಭಾಗವಹಿಸಿ ಉತ್ತರ ಕರ್ನಾಟಕ ಜಾನಪದ ಪರಿಹರಿಸಬೇಕು ಎಂದು ಡಾ. ಬಿರಾದಾರ್ ಸಲಹೆ ನೀಡಿದರು.
ರಾಜ್ಯಾಧ್ಯಕ್ಷ ಹನುಮಂತಪ್ಪ ಮೇಡೆಗಾರ್ ಅವರ ಸರ್ವರಿಗೂ ಸ್ವಾಗತಿಸಿದರು. ಪ್ರದಾನ ಕಾರ್ಯದರ್ಶಿ ಅಂಬಣ್ಣ ಮುಡಬಿ ನಿರೂಪಣೆ ಮಾಡಿದರು. ಇದೆ ವೇಳೆ ಹಿರಿಯ ಮುಖಂಡ ಎಂ. ಹೆಚ್. ಪಾಟೀಲ್ ಅವರಿಗೆ ಗೌರವಾಧ್ಯಕ್ಷ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಶಂಕರ್ ಗೌಡ ಪಾಟೀಲ್, ಡಾ. ಬಿರಾದಾರ್, ಹನುಮಂತಪ್ಪ ಮೇಡೆಗಾರ್ ಸೇರಿದಂತೆ ಮುಂತಾದವರು ಪಾಟೀಲ್ ಅವರಿಗೆ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕು, ಜಿಲ್ಲಾ ಪದಾಧಿಕಾರಿಗಳು ಸದಸ್ಯರು ಮುಂತಾದವರು ಉಪಸ್ಥಿತರಿದರೆಂದು ರಾಜ್ಯ ಮಾಧ್ಯಮ ವಿಭಾಗದ ರಾಜ್ಯಾಧ್ಯಕ್ಷ ಅಯ್ಯಣ್ಣ ಮಾಸ್ಟರ್ ಬಿ ವಿ ನ್ಯೂಸ್-5 ಚಾನಲ್ ಗೆ ತಿಳಿಸಿದ್ದಾರೆ.
ವರದಿ: ಅಯ್ಯಣ್ಣ ಮಾಸ್ಟರ್




