ಹುಕ್ಕೇರಿ: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತ ನಾರಿ ಮನೆಯರು ಇಂದು ಹುಕ್ಕೇರಿ ಪ್ರವಾಸಿ ಮಂದಿರದಿಂದ ಮೈಕ್ರೋ ಫೈನಾನ್ಸ್ ವಿರುದ್ಧ ದಿಕ್ಕಾರ ಕೂಗುತ್ತಾ ತಾಲೂಕ ದಂಡಾಧಿಕಾರಿಗಳ ಕಚೇರಿ ಅವರಿಗೆ ಪಾದಯಾತ್ರೆ ಮಾಡಿ ಮನವಿ ಪತ್ರ ಸಲ್ಲಿಸಿದರು.
ಬಡತನದಲ್ಲಿ ನಾವು ನೊಂದು ಬೆಂದು ಬದುಕುವುದೇ ಕಷ್ಟಕರ ಸಂಗತಿಯಾಗಿದೆ ಮೈಕ್ರೋ ಫೈನಾನ್ಸ್ ಗಳಂತ ಸಾಲ ಪಡೆದು ನಮ್ಮ ಜೀವನ ಸರ್ವನಾಶವಾಗುತ್ತಿದೆ ಫೈನಾನ್ಸ್ ಕಂಪನಿಯ ಅಧಿಕಾರಿಗಳು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಾರೆ ನಿಮ್ಮ ಹತ್ತಿರ ತುಂಬಲು ದುಡ್ಡು ಇಲ್ಲವೇ ನೂರು ರೂಪಾಯಿ ಕೊಡುತ್ತೇವೆ ವಿಷ ಕುಡಿದು ಸಾಯಿರಿ ನಿಮ್ಮ ಸಾಲ ಮನ್ನಾ ಆಗುತ್ತದೆ ಎಂದು ನೇರವಾಗಿ ಮಾತನಾಡುತ್ತಾರೆ.
ಯಾವುದೇ ರೀತಿ ಕಾಲಾವಕಾಶ ನೀಡದೆ ರಾತ್ರಿಯಾದರೂ ಕೂಡ ಮನೆಯಲ್ಲಿ ಕುಳಿತುಕೊಂಡು ಗಲಾಟೆ ಮಾಡುತ್ತಾರೆ ಎಂದು ಮಹಿಳೆಯರು ಬಲವಾಗಿ ಆಪಾದನೆ ಮಾಡಿದ್ದಾರೆ.
ಕಳೆದ ತಿಂಗಳಲ್ಲಿ ಮಹಿಳೆಯರನ್ನು ಮನೆಯಿಂದ ಹೊರಗಡೆ ಬಿಡದ ಮೈಕ್ರೋ ಫೈನಾನ್ಸ್ ಅಧಿಕಾರಿಗಳಿಗೆ ಡಾ ರವಿ ಬಿ ಕಾಂಬಳೆ ತರಾಟೆಗೆ ತೆಗೆದುಕೊಂಡಾಗ ಫರಾರಿ ಆದ ಅಧಿಕಾರಿಗಳು ಇಂತಹ ಹಲವಾರು ಘಟನೆಗಳು ನಡೆದಿದ್ದಾವೆ.
ಈಗ ನಮ್ಮನ್ನು ಈ ಸಂಕಷ್ಟದಿಂದ ಪಾರು ಮಾಡಿ ಎಂದು ನೊಂದ ಮಹಿಳೆಯರು ಮತ್ತು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕೂಲಿ ಕಾರ್ಮಿಕರ ಹಿತಾಸಕ್ತಿ ಸಂಘ ವತಿಯಿಂದ ತಾಲೂಕ ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ವರದಿ: ಶಿವಾಜಿ ಎನ್ ಬಾಲೆಶಗೋಳ