Ad imageAd image

ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು, ಹಣ್ಣು ವಿತರಣೆ

Bharath Vaibhav
ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು, ಹಣ್ಣು ವಿತರಣೆ
WhatsApp Group Join Now
Telegram Group Join Now

ಪ್ರಧಾನಿ ನರೇಂದ್ರ ಮೋದಿಜಿ ಅವರ ಹುಟ್ಟು ಹಬ್ಬದ ಸಂಭ್ರಮ

ಮೊಳಕಾಲ್ಮುರು : ಜಗ ಮೆಚ್ಚಿದ ನಾಯಕ ನರೇಂದ್ರ ಮೋದಿಜಿ ಅವರ 75ನೇ ಹುಟ್ಟು ಹಬ್ಬದ ಪ್ರಯುಕ್ತ ದೇವಸ್ಥಾನದಲ್ಲಿ ದೀರ್ಘಾಯು ಕೋರಿ ಪೂಜೆ ಸಲ್ಲಿಸಲಾಯಿತು ಎಂದು ನಿಕಟ ಪೂರ್ವ ಮಂಡಲ ಅಧ್ಯಕ್ಷರಾದ ಡಾ.ಪಿ.ಎಂ ಮಂಜುನಾಥ್ ರವರು ತಿಳಿಸಿದರು.

ಪಟ್ಟಣದಲ್ಲಿ ಬುಧವಾರ ನರೇಂದ್ರ ಮೋದಿಜಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಮಾರ್ಕಂಡೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು ಹಣ್ಣು ವಿತರಣೆ ಮಾಡಿ ಅವರು ಮಾತಾಡಿದರು.

ಭಾರತೀಯ ಜನತಾ ಪಾರ್ಟಿಯಿಂದ ನರೇಂದ್ರ ಮೋದಿಯವರು 11 ವರ್ಷಗಳ ಕಾಲ ಆಡಳಿತ ನಡೆಸುತ್ತಾ ಬಂದಿದ್ದಾರೆ, ಈ ಅವಧಿಯಲ್ಲಿ ಅವರು ಒಂದು ದಿನ ಕೂಡ ಭ್ರಷ್ಟಾಚಾರ ನಡೆಸೆ ಇಲ್ಲ, ನರೇಂದ್ರ ಮೋದಿಯವರು ಎಲ್ಲಾ ಜನಾಂಗದವರಿಗೆ ನ್ಯಾಯ ಒದಗಿಸಿದ್ದಾರೆ, ಸರ್ವವ್ಯಾಪಿ ಸರ್ವಸ್ಪರ್ಸಿ ಆದಂತಹ ಸರ್ಕಾರವನ್ನು ನಡೆಸುತ್ತಾ ಬಂದಿದ್ದಾರೆ ಆ ದೇವರು ಅವರಿಗೆ ಇನ್ನಷ್ಟು ದಿನ ಒಳ್ಳೆಯ ಸರ್ಕಾರ ನೀಡಲು ಅವರಿಗೆ ಆಯುಷ್ಯ ಆರೋಗ್ಯ ಕೊಡಲಿ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಶ್ರೀರಾಮ ರೆಡ್ಡಿ ಮಾತನಾಡಿ, ನರೇಂದ್ರ ಮೋದಿಜಿ ಅವರ ಆಡಳಿತವನ್ನು ಇಡೀ ವಿಶ್ವವೇ ಮೆಚ್ಚಿಕೊಂಡಿದೆ, ಎಲ್ಲಾ ದೇಶಗಳು ಈಗ ಭಾರತದತ್ತ ತಿರುಗಿ ನೋಡುವಂತಹ ಕೆಲಸ ಮಾಡುತ್ತಿದ್ದಾರೆ, ಆದ್ದರಿಂದ ನಾವು ಅವರು ಸೇವಕರಾಗಿ ಕೆಲಸ ಮಾಡುತ್ತಿದ್ದಾರೆ 75ನೇ ವರ್ಷದ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸುತ್ತಿದ್ದೇವೆ, ಸೇವಾ ಪಾಕ್ಷಿಕ ಎಂದು ಸುಮಾರು 15 ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು..

ಸುಮಾರು 140 ಕೋಟಿ ಭಾರತೀಯರಿಗೆ ತಲುಪುವಂತಹ ಕೆಲಸ ಮಾಡುತ್ತಿದ್ದಾರೆ, ಅವರಿಗೆ ಆರೋಗ್ಯ ಐಶ್ವರ್ಯ ಕೊಡಲಿ ಎಂದು ಆ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಲೀಲಾವತಿ ಸಿದ್ದಣ್ಣ, ಉಪಾಧ್ಯಕ್ಷರಾದ ಎಂ ಎನ್ ಮಂಜಣ್ಣ, ಸದಸ್ಯರುಗಳಾದ ಭೀಮಣ್ಣ ಪೃಥ್ವಿರಾಜ್ ಪ್ರಧಾನ ಕಾರ್ಯದರ್ಶಿ ಪ್ರಭಾಕರ್, ಮುಖಂಡರಾದ ಡಿ ಎಂ ಈಶ್ವರಪ್ಪ, ದೇವಸಮುದ್ರ ಚಂದ್ರು, ಕಿರಣ್ ಗಾಯಕ್ವಾಡ್ ರಮೇಶ್ ದಳವಾಯಿ, ಹೇಮಂತ್ ಕುಮಾರ್ ಚಂದ್ರು ದರ್ಶನ್ ನಾಗರಾಜ್ ರಾಮಾಂಜನಿ ಇನ್ನು ಹಲವರು ಉಪಸ್ಥಿತರಿದ್ದರು.

ವರದಿ: ಪಿಎಂ ಗಂಗಾಧರ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!