——————————-ಧಾರವಾಡ ಜಿಲ್ಲಾ ಗರಗ ಠಾಣಾ ವ್ಯಾಪ್ತಿಯ ತೇಗೂರ ಗ್ರಾಮದ
——————–ಭಾರತ ಪ್ಯಾಲೇಸ್ ಹೋಟೆಲ್ ಹತ್ತಿರ ಅಕ್ರಮವಾಗಿ ಸ್ಪಿರೀಟ್ ಕ್ಯಾನಗಳ ಸಾಗಾಟ
ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಿವಾನಂದ ಕಟಗಿ, ಧಾರವಾಡ ಗ್ರಾಮೀಣ ಉಪ ವಿಭಾಗ ಪೊಲೀಸ್ ಉಪ ಅಧೀಕ್ಷಕ ವಿನೋಧ ಮುಕ್ತಧಾರ ಅವರ ಮಾರ್ಗದರ್ಶನದಲ್ಲಿ ಗರಗ ವೃತ್ತ ಸಿಪಿಐ ಶಿವಯೋಗಿ ಲೋಹಾರ ಅವರ ನೇತೃತ್ವದಲ್ಲಿ ಗರಗ ಪೊಲೀಸ್ ಠಾಣೆಯ ಪಿಎಸ್‍ಐ ಸಿದ್ರಾಮಪ್ಪ ಉನ್ನದ ಅವರು ತಮ್ಮ ಸಿಬ್ಬಂದಿಯೊಂದಿಗೆ ದಾಳಿ ಕೈಕೊಂಡು 35 ಲೀಟರ್ ಸ್ಪಿರೀಟ್ ತುಂಬಿದ 844 ಕ್ಯಾನಗಳನ್ನು ಅ:ಕಿ: 34,44,800, ಎರಡು ವಾಹನಗಳನ್ನು ಅ:ಕಿ: 36,00,000 ವಶಪಡಿಸಿಕೊಂಡಿದ್ದಾರೆ. ಈ ಪೊಲೀಸ್ ಇಲಾಖೆಯ ಕಾರ್ಯ ವೈಖರಿ ಮೆಚ್ಚುಗೆ ಪಡುವಂತದ್ದಾಗಿದೆ.
ವರದಿ: ವಿನಾಯಕ ಗುಡ್ಡದಕೇರಿ




