Ad imageAd image

ಮಿನಿ ವಿಧಾನಸೌಧಗಳು ಇನ್ನು ಪ್ರಜಾ ಸೌಧ : ಡಿ. ಕೆ ಶಿವಕುಮಾರ್ ಘೋಷಣೆ 

Bharath Vaibhav
ಮಿನಿ ವಿಧಾನಸೌಧಗಳು ಇನ್ನು ಪ್ರಜಾ ಸೌಧ : ಡಿ. ಕೆ ಶಿವಕುಮಾರ್ ಘೋಷಣೆ 
DKS
WhatsApp Group Join Now
Telegram Group Join Now

ಕಲಬುರ್ಗಿ: ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿ ಇರುವಂತ ಮಿನಿ ವಿಧಾನಸೌಧಗಳ ಹೆಸರನ್ನು ಪ್ರಜಾ ಸೌಧ ಎಂಬುದಾಗಿ ಮರುನಾಮಕರಣ ಮಾಡಲಾಗುತ್ತಿರುವುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಘೋಷಣೆ ಮಾಡಿದರು.

ಕಲಬುರ್ಗಿಯಲ್ಲಿ ನಡೆದಂತ ಕಲ್ಯಾಣ ಕರ್ನಾಟಕ ಭಾಗದಲ್ಲಿನ ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಸರಿ ಮಾಡಿದಂತ ಎಲ್ಲಾ ಅಧಿಕಾರಿ, ನೌಕರರು, ಸಿಬ್ಬಂದಿಗಳಿಗೆ ಸನ್ಮಾನ ಮಾಡಲಾಗುತ್ತದೆ. ಕೂಡಲಸಂಗಮದಿಂದ ಎಲ್ಲಾ ಪ್ರವಾಸಿ ಕ್ಷೇತ್ರಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದರು.

ರಾಜ್ಯದ ತಾಲ್ಲೂಕು ಕೇಂದ್ರಗಳಲ್ಲಿ ಮಿನಿ ವಿಧಾನಸೌಧಗಳನ್ನು ನಿರ್ಮಿಸಲಾಗಿದೆ. ಇನ್ನೂ ಕೆಲವು ತಾಲ್ಲೂಕುಗಳಲ್ಲಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.

ಇನ್ನೂ ಕೆಲವು ಕಡೆ ಮಾಡಲಿದ್ದೇವೆ. ಇವುಗಳ ಹೆಸರನ್ನು ಮಿನಿ ವಿಧಾನಸೌಧ ಎನ್ನುವ ಬದಲಾಗಿ ಪ್ರಜಾ ಸೌಧ ಎಂಬುದಾಗಿ ಮರು ನಾಮಕರಣ ಮಾಡುವಂತ ನಿರ್ಧಾರವನ್ನು ಇಂದಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದು ಘೋಷಿಸಿದರು.

 

 

 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!