ಮೂರು ಟ್ರ್ಯಾಕ್ಟರ್ ಗೆ ಚಾಲನೆ ನೀಡಿದ ಸಚಿವ ಬೋಸರಾಜು
ಪುರಸಭೆಯೊಂದಿಗೆ ಕೈಜೋಡಿಸಿ ಎಂದ ಸಚಿವ ಬೋಸರಾಜು
ಮಾನ್ವಿ ಪುರಸಭೆಯ ಅನುದಾನದಲ್ಲಿ ಟ್ರ್ಯಾಕ್ಟರ್ ಖರೀದಿ
ಮಾನ್ವಿ: ಪುರಸಭೆ ಕಾರ್ಯಾಲಯದಲ್ಲಿ 15 ನೇ ಹಣಕಾಸು ಯೋಜನೆಯಡಿ ಪಟ್ಟಣದಾದ್ಯಂತ ತ್ಯಾಜ್ಯ ವಿಲೇವಾರಿಗಾಗಿ 30 ಲಕ್ಷ ರೂಗಳಲ್ಲಿ ಖರೀದಿಸಿದ ಮೂರು ಟ್ಯಾಕ್ಟರ್ ಗಳನ್ನ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವ ಎನ್ ಎಸ್ ಬೋಸರಾಜು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಸಚಿವರು ಮಾನ್ವಿ ಪಟ್ಟಣದ ಸಂಪೂರ್ಣ ಸ್ವಚ್ಛತೆಗಾಗಿ ಪುರಸಭೆಯೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕು. ಸ್ವಚ್ಛ ಮತ್ತು ಸುಂದರ ನಗರಕ್ಕಾಗಿ ಪ್ರಾಮಾಣಿಕವಾಗಿ ಪುರಸಭೆ ಸಿಬ್ಬಂದಿ ಪ್ರಯತ್ನಿಸಬೇಕಾಗಿದೆ ಎಂದರು.
ಪಟ್ಟಣದಾದ್ಯಂತ ತ್ಯಾಜ್ಯ ವಿಲೇವಾರಿಗಾಗಿ ಮೂರು ಟ್ಯಾಕ್ಟರ್ ಗಳನ್ನ ಬಿಡುಗಡೆ ಮಾಡಲಾಗಿದ್ದು, ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಹಾಕದೆ ತ್ಯಾಜ್ಯ ವಿಲೇವಾರಿ ವಾಹನಗಳ ಉಪಯೋಗಿಸಿದಾಗ ಸ್ವಚ್ಛವಾಗಿರಲು ಸಾಧ್ಯ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.