Ad imageAd image

ಕಾಗಿಣ ನದಿಯಲ್ಲಿ ಕೊಚ್ಚಿಕೊಂಡು ಕಾಣೆಯಾದ ರಾಜು ಕುಟುಂಬಕ್ಕೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ ಸಾಂತ್ವಾನ.

Bharath Vaibhav
ಕಾಗಿಣ ನದಿಯಲ್ಲಿ ಕೊಚ್ಚಿಕೊಂಡು ಕಾಣೆಯಾದ ರಾಜು ಕುಟುಂಬಕ್ಕೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ ಸಾಂತ್ವಾನ.
WhatsApp Group Join Now
Telegram Group Join Now

ಸೇಡಂ:- ತಾಲೂಕಿನ ಸಂಗಾವಿ ಟಿ ಗ್ರಾಮದ ಕಾಗಿಣಾ ನದಿಯಲ್ಲಿ ಕೊಚ್ಚಿಕೊಂಡು ಕಾಣೆಯಾದ ರಾಜು ನಾಮವಾರ ಕುಟುಂಬ ಸದಸ್ಯರನ್ನು ಭೇಟಿಯಾಗಿ, ಧೈರ್ಯ ತುಂಬಿದರು.

ಎರಡು ದಿನಗಳಿಂದ ಸುರಿದ ಭಾರಿ ಮಳೆಗೆ ಕಾಗಿಣಾ‌ ತುಂಬಿ ಹರಿದಿದ್ದು, ಕುರಕುಂಟಾ ಮೂಲದ ರಾಜು ನಾಮವಾರ (40) ಎಂಬುವವರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವುದು ನಿಜಕ್ಕೂ ಆಘಾತದ ಸಂಗತಿಯಾಗಿದೆ.

ಕಾಣೆಯಾದ ರಾಜು ಅವರ ತಾಯಿಯವರಿಗೆ ಹಾಗೂ ಕುಟುಂಬಸ್ಥರಿಗೆ ಧೈರ್ಯ ತಿಳಿಸಿ, ಕೂಡಲೇ ಅಧಿಕಾರಿಗಳು ಮತ್ತಷ್ಟು ಕಾರ್ಯೋನ್ಮುಖರಾಗುವಂತೆ ಸಚಿವರು ಸೂಚಿಸಿದರು

ಈ ಸಂದರ್ಭದಲ್ಲಿ ಅವರ ನೋವಿಗೆ ಧ್ವನಿಯಾಗಿ, ಕುಟುಂಬದ ಜೊತೆ ಸರ್ಕಾರ ಹಾಗೂ ತಾಲೂಕಾಡಳಿತ ಇದೆ ಎಂದು ಸಾಂತ್ವನ ಹೇಳಿದರು.ತದನಂತರ ಪಟ್ಟಣದ ದೊಡ್ಡ ಅಗಸಿಯಲ್ಲಿ ಮಳೆಯಿಂದ ಮನೆಯ ಗೋಡೆ ಕುಸಿದಿದ್ದು, ಮನೆಯ ಕುಟುಂಬಸ್ಥರನ್ನು ಭೇಟಿಯಾಗಿ ಧೈರ್ಯ‌ ಹೇಳಿದರು.

ಹಾನಿಯಾದ ಮನೆಗೆ ಪರಿಹಾರ ಒದಗಿಸುವಂತೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿ ಮಳೆ ಹಾನಿಯಿಂದ ಸೇಡಂ ಪಟ್ಟಣದ ದೊಡ್ಡ ಅಗಸಿ, ಸಣ್ಣ ಅಗಸಿ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಮಳೆ‌ ನೀರು ನುಗ್ಗಿದ್ದು ಕೂಡಲೆ ಪರಿಶೀಲಿಸಿ ವರದಿ ಸಲ್ಲಿಸಿ, ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಇದರಿಂದ ಶಾಸಕರು ಕಾಣೆಯಾಗಿದ್ದಾರೆ ಎಂಬುದಕ್ಕೆ ಪಾಟೀಲರು ಸರಿಯಾದ ಉತ್ತರ ನೀಡಿದಂತಾಗಿದೆ.

ವರದಿ ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!