Ad imageAd image

ಸಚಿವೆ ಹೆಬ್ಬಾಳ್ಕರ್ ,ಬಿಜೆಪಿ ವಿರುದ್ಧ ವಾಗ್ದಾಳಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತದಿಂದ ರಾಮದುರ್ಗ ಪಟ್ಟಣದಲ್ಲಿ ಬೃಹತ್ ಕಾಂಗ್ರೆಸ್ ಬೈಕ ರ‍್ಯಾಲಿ .

Bharath Vaibhav
ಸಚಿವೆ ಹೆಬ್ಬಾಳ್ಕರ್ ,ಬಿಜೆಪಿ ವಿರುದ್ಧ ವಾಗ್ದಾಳಿ  ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತದಿಂದ ರಾಮದುರ್ಗ ಪಟ್ಟಣದಲ್ಲಿ ಬೃಹತ್ ಕಾಂಗ್ರೆಸ್ ಬೈಕ ರ‍್ಯಾಲಿ .
WhatsApp Group Join Now
Telegram Group Join Now

ರಾಮದುರ್ಗ :-  ಬೆಳಗಾವಿ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ ಬೃಹತ್ ಬೈಕ್ ರ‍್ಯಾಲಿ ಮೂಲಕ ರಾಮದುರ್ಗ ಪಟ್ಟಣದಲ್ಲಿ ಮತ ಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಹೂ ಮಳೆ ಸುರಿಸಿ ಸಂಭ್ರಮಿಸಿದರು.

ಪಟ್ಟಣದ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ವೃತ್‌ದಿಂದ ರಾಯಣ್ಣ ಮೂರ್ತಿಗೆ ಮೃಣಾಲ ಹೆಬ್ಬಾಳಕರ ಹೂಮಾಲೆ ಹಾಕಿದರು. ನೂರಾರು ಯುವಕರು ಬೈಕ್ ಏರಿ ಕಾಂಗ್ರೆಸ್ ಪಕ್ಷದ ಧ್ವಜ ಕಟ್ಟಿಕೊಂಡು ಹೊರಟು ತೆರೆದ ವಾಹನದಲ್ಲಿ ಮೃಣಾಲ ಹೆಬ್ಬಾಳಕರ ಜೊತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಹಾಗೂ ಸರ್ಕಾರದ ಮುಖ್ಯಸಚೇತಕ ಅಶೋಕ ಪಟ್ಟಣ, ಮಹಿಳಾ ಕಾಂಗ್ರೆಸ್‌ನ ರಾಜ್ಯ ಕಾರ್ಯದರ್ಶಿ ಮಂಜುಳಾ ದೇವರಡ್ಡಿ, ಪ್ರದೀಪ ಪಟ್ಟಣ ಬೈಕ್ ರ‍್ಯಾಲಿಗೆ ಮೆರಗು ತಂದರು.

ಸಂಗೊಳ್ಳಿ ರಾಯಣ್ಣ ವೃತ್‌ದಿಂದ ಹೊರಟ ಬೈಕ್ ರ‍್ಯಾಲಿ ಬಸವ ಮಾರ್ಗದ ಮೂಲಕ ಹುತಾತ್ಮ ವೃತ್‌ದಿಂದ ಅಂಬೇಡ್ಕರ ಮಾರ್ಗದ ಮುಖಾಂತರ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಕೇಂದ್ರ ಗ್ರಂಥಾಲಯದ ವರೆಗೆ ನಡೆಯಿತು.

ರಸ್ತೆಯುದ್ದಕ್ಕೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮೃಣಾಲ ಹೆಬ್ಬಾಳಕರ ಮತ್ತು ಕಾಂಗ್ರೆಸ್ ನಾಯಕರಿಗೆ ಜೈಘೋಷ ಹಾಕುವದು ಕಂಡು ಚುನಾವಣೆಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಯಿತು.ಬಹಿರಂಗ ಮತಯಾಚನೆ ಸಭೆಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಶಾಸಕ,ಲಕ್ಷಮನ್ ಸವದಿ, ಶಾಸಕ, ಅಶೋಕ್ ಪಟ್ಟಣ ಮಾತನಾಡಿದರು.

ವರದಿ:- ಮಂಜುನಾಥ ಕಲಾದಗಿ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!