Ad imageAd image

ಭಾಲ್ಕಿಯಲ್ಲಿ 10 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಸಚಿವ ಖಂಡೆ ಚಾಲನೆ

Bharath Vaibhav
ಭಾಲ್ಕಿಯಲ್ಲಿ 10 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಸಚಿವ ಖಂಡೆ ಚಾಲನೆ
WhatsApp Group Join Now
Telegram Group Join Now

ಪಟ್ಟಣದ ನಾಗರಿಕರಿಗೆ ಸಚಿವರಿಂದ ಹೊಸ ವರ್ಷದ ಉಡುಗೊರೆ| ಪಟ್ಟಣವನ್ನು ಕಲ್ಯಾಣ ಕರ್ನಾಟಕದಲ್ಲಿಯೇ ಮಾದರಿ ನಗರವನ್ನಾಗಿ ಮಾಡುವ ಗುರಿ

ಭಾಲ್ಕಿ: ತಾಲೂಕು ಸೇರಿದಂತೆ ಭಾಲ್ಕಿ ಪಟ್ಟಣವನ್ನು ಕಲ್ಯಾಣ ಕರ್ನಾಟಕದಲ್ಲಿಯೇ ಮಾದರಿ ನಗರವನ್ನಾಗಿ ಮಾಡುವ ಗುರಿ ನಮ್ಮದಾಗಿದೆ ಎಂದು ಕ್ಷೇತ್ರದ ಶಾಸಕರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.


ಪಟ್ಟಣದ ಗುರುಕಾಲೋನಿಯ ಮಹಾದೇವ ಮಂದಿರದಲ್ಲಿ ಬುಧವಾರ ನಡೆದ ಭಾಲ್ಕಿ ಪಟ್ಟಣದ ೧೦ ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಗುರು ಕಾಲೋನಿಯ ಮಹಾದೇವ ಮಂದಿರದ ತೋಟದ ಕಾಂಪೌಡ್ ಗೋಡೆಗಾಗಿ ೧೦ ಲಕ್ಷ ರೂ. ಸೇರಿದಂತೆ ಪಕ್ಕದ ರಸ್ತೆಗಳಿಗಾಗಿ ೨೫ ಲಕ್ಷ ರೂ. ಅನುದಾನ ನೀಡಲಾಗಿದೆ. ಲೆಕ್ಚರ್ ಕಾಲೋನಿ, ಗುರುಕಾಲೋನಿಗಳು ಜಿಲ್ಲೆಯಲ್ಲಿಯೇ ಮಾದರಿ ಕಾಲೋನಿಗಳಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕಾಮಗಾರಿಗಳನ್ನು ಮಾಡಲಾಗುತ್ತಿದ ಎಂದರು. ನಂತರ ೨೦೨೪-೨೫ನೇ ಸಾಲಿನ ವಿಶೇಷ ಯೋಜನೆಯ ಅಡಿಯಲ್ಲಿ ೧.೪೫ ಕೋಟಿ ರೂ. ವೆಚ್ಚದಲ್ಲಿ ವಾರ್ಡ ಸಂಖೆ ೧ ರಿಂದ ೯ ರಲ್ಲಿ ಕಾಂಕ್ರಿಟ್ ಚರಂಡಿ, ರಸ್ತೆ ನಿರ್ಮಾಣ, ೨ ಕೋಟಿ ರೂ. ವೆಚ್ಚದಲ್ಲಿ ವಾಡ್ ಸಂ.೧೦,೧೧,೧೨,೧೩,೧೪ ರಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು. ನಂತರ ವಾಡ್ ಸಂಖೆ ೧೫,೧೬,೧೭,೧೮ ರಲ್ಲಿ ೪೦ ಲಕ್ಷ ರೂ. ಸಿಸಿ ರಸ್ತೆ, ಚರಂಡಿ ನಿರ್ಮಾಣ ಮತ್ತು ವಾರ್ಡ ಸಂಖೆ ೧೯,೨೦,೨೧ ರಲ್ಲಿ ೧.೩೦ ಕೊಟಿ ರೂ. ವೆಚ್ಚದಲ್ಲಿ ಸಿ.ಸಿ.ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಒಟ್ಟಿನಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುವ ಮೂಲಕ ಸ್ವಕ್ಷೇತ್ರ ಭಾಲ್ಕಿಗೆ ಸಚಿವ ಈಶ್ವರ ಖಂಡ್ರೆ ನೂತನ ವರ್ಷದ ಉಡುಗೊರೆ ನೀಡಿದಂತಾಗಿದೆ.


ಈ ಸಂದರ್ಭದಲ್ಲಿ ಪ್ರಮುಖರಾದ ಅರಣ್ಯ ನಿಗಮದ ಉಪಾಧ್ಯಕ್ಷ ಹಣಮಂತರಾವ ಚವ್ಹಾಣ, ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಕಾರಬಾರಿ, ಪುರಸಭೆ ಅಧ್ಯಕ್ಷೆ ಶಶಿಕಲಾ ಸಿಂಧನಕೆರೆ, ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ವಂಕೆ, ರಾಹುಲ ಪೂಜಾರಿ, ಸಹಾಯಕ ಆಯುಕ್ತ ಪ್ರಕಾಶ ಕುದರಿ, ಓಣಿಯ ಪ್ರಮುಖರಾದ ನ್ಯಾಯವಾದಿ ಉಮಾಕಾಂತ ವಾರದ, ರಮೇಶ ಗೊನ್ನಾಳೆ, ಬಾಲರಾಜ ಕುಂಬಾರ, ಬಸವರಾಜ ಕುರುಬಖೇಳಗೆ, ಅಶೋಕ ಬಾವುಗೆ, ಮಂಗಲಾ ಟೀಚರ, ಪುರಸಭೆ ಉಪಾಧ್ಯಕ್ಷ ವಿಜಯಕುಮಾರ ರಾಜಭವನ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಯರಾಜ ದಾಬಶೆಟ್ಟಿ ಉಪಸ್ತಿತರಿದ್ದರು. ಉಮಾಕಾಂತ ವಾರದ ಸ್ವಾಗತಿಸಿದರು. ದೀಪಕ ಥಮಕೆ ನಿರೂಪಿಸಿದರು. ಸಿದ್ರಾಮಯ್ಯಾ ಸ್ವಾಮಿ ವಂದಿಸಿದರು.

ವರದಿ : ಸಂತೋಷ ಬಿಜಿ ಪಾಟೀಲ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!