ಬೆಳಗಾವಿ : ಬಿಜೆಪಿ ನಾಯಕರ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹಿಂದುಳಿದ ಆಯೋಗದ ಅಧ್ಯಕ್ಷ, ಸದಸ್ಯ ನೇಮಕ ಮಾಡಿದ್ದು ಕುಮಾರಸ್ವಾಮಿ, ಯಡಿಯೂರಪ್ಪ, ಬೊಮ್ಮಾಯಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುಳಿದ ಸದಸ್ಯರನ್ನು ನೇಮಕ ಮಾಡಿದ್ದು ಬಿಜೆಪಿ ಸರಕಾರ. ಜಾತಿ ಗಣತಿಯನ್ನು ಅಧ್ಯಯನ ಮಾಡಿದ್ದು ಬಿಜೆಪಿಯ ಬೊಮ್ಮಾಯಿ, ಯಡಿಯೂರಪ್ಪ ವರದಿ ತಿರಸ್ಕಾರ ಮಾಡಬಹುದಿತ್ತು. ಬರೀ ಅವೈಜ್ಞಾನಿಕ ಎನ್ನುತ್ತಾರೆ. ಲೋಪದೋಷ ಇದ್ದರೆ ಒಪ್ಪಿಕೊಳ್ಳೊಣ. ಎಲ್ಲಿ ಲೋಪವಾಗಿದೆ ಎಂದು ಸ್ಪಷ್ಟವಾಗಿಲ್ಲ ಎಂದರು.
ಬಿಜೆಪಿ ನಾಯಕರು ದಿಕ್ಕು ತಪ್ಪಿಸುವ ಯತ್ನ ಮಾಡ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ಜನಪ್ರಿಯ ಯೋಜನೆಗಳನ್ನು ಹಾಗೂ ಬಡವರ ಕಲ್ಯಾಣಗಳನ್ನು ಸಹಿಸದೆ ಸುಖಾಸುಮ್ಮನೆ ಆರೋಪ ಮಾಡ್ತಿದ್ದಾರೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಕಿಡಿಕಾರಿ ದ್ದಾರೆ.