ಬೆಳಗಾವಿ : ಹಲಗಾ ಗ್ರಾಮದಲ್ಲಿ ನಡೆಯುತ್ತಿರುವ ಶ್ರೀ ಮಹಾಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವದಲ್ಲಿ ಶನಿವಾರ ಸಂಜೆ ಪಾಲ್ಗೊಂಡ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ದೇವಿಗೆ ಉಡಿ ತುಂಬಿ, ನಾಡಿನ ಸುಭೀಕ್ಷೆಗಾಗಿ ಪ್ರಾರ್ಥನೆ ಸಲ್ಲಿಸಿದರು.
ಈ ಜಾತ್ರೆಯು ಗ್ರಾಮಸ್ಥರಿಗೆ ಹಾಗೂ ಭಕ್ತರಿಗೆ ಸಮೃದ್ಧಿ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ನೀಡಲಿ ಎಂದು ಅವರು ಹಾರೈಸಿದರು.
ಕಾರ್ಯಕ್ರಮದಲ್ಲಿ ಲಕ್ಷ್ಮೀ ಗಜಪತಿ, ರೇಖಾತಾಯಿ, ಡಾಕಲು ಬಿಳಗೋಜಿ, ಲಕ್ಷ್ಮೀ ಸಂತಾಜಿ, ರೂಪಾ ಸುತಾರ್, ಕಲ್ಪನಾ ಹನಮಂತಾಚೆ, ಬಾಳು ದೇಸೂರಕರ್, ಮನು ಬೆಳಗಾಂವ್ಕರ್ ಮುಂತಾದವರು ಉಪಸ್ಥಿತರಿದ್ದರು.
ವರದಿ: ಪ್ರತೀಕ ಚಿಟಗಿ