Ad imageAd image

ಮಾರ್ಗರೇಟ್‌ ಆಳ್ವಾ ಭೇಟಿಯಾದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Bharath Vaibhav
ಮಾರ್ಗರೇಟ್‌ ಆಳ್ವಾ ಭೇಟಿಯಾದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್
WhatsApp Group Join Now
Telegram Group Join Now

ಬೆಂಗಳೂರು: -ತಮ್ಮ ರಾಜಕೀಯ ಪ್ರವೇಶಕ್ಕೆ ಪ್ರೇರಕರಾದ ಮಾಜಿ ರಾಜ್ಯಪಾಲರು ಹಾಗೂ ಕೇಂದ್ರದ ಮಾಜಿ ಸಚಿವರು ಆದ ಮಾರ್ಗರೇಟ್ ಆಳ್ವ ಅವರನ್ನು


ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶುಕ್ರವಾರ ಬೆಂಗಳೂರಿನ ಡಾಲರ್ಸ್ ಕಾಲೋನಿಯ
ನಿವಾಸದಲ್ಲಿ ಸೌಹಾರ್ದಯುತವಾಗಿ ಭೇಟಿ ಮಾಡಿದರು.

ತಮ್ಮ ರಾಜಕೀಯ ಮಾರ್ಗದರ್ಶಕರೂ ಆಗಿರುವ ಮಾರ್ಗರೆಟ್ ಆಳ್ವಾ ಜೊತೆ ಕೆಲಕಾಲ ಚರ್ಚಿಸಿದ ಸಚಿವರು, ಹಿಂದಿನ ರಾಜಕೀಯ ಘಟನೆಗಳ ಮೆಲುಕು ಹಾಕಿದರು.

ಅಲ್ಲದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ಯೋಜನೆಗಳ ಬಗ್ಗೆಯೂ ಮಾಹಿತಿ ನೀಡಿ, ಚರ್ಚಿಸಿದರು.
ಇಲಾಖೆಯ ಯೋಜನೆಗಳಿಗೆ ಸಂಬಂಧಿಸಿದಂತೆ ಆಳ್ವಾ ಕೆಲವು ಸಲಹೆ ನೀಡಿದರು.

ವರದಿ :-ಪ್ರತೀಕ ಚಿಟಗಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!