Ad imageAd image

ಕಾಂಗ್ರೆಸ್ ಗೆ ಜನಪರ ಯೋಜನೆ; ಬಿಜೆಪಿಗೆ ಅದಾನಿ, ಅಂಬಾನಿಯ ಚಿಂತೆ- ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಿಡಿ

Bharath Vaibhav
ಕಾಂಗ್ರೆಸ್ ಗೆ ಜನಪರ ಯೋಜನೆ; ಬಿಜೆಪಿಗೆ ಅದಾನಿ, ಅಂಬಾನಿಯ ಚಿಂತೆ- ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಿಡಿ
WhatsApp Group Join Now
Telegram Group Join Now

ಬೆಳಗಾವಿ : “ ಕಾಂಗ್ರೆಸ್ ಪಕ್ಷ ಜನಪರವಾದ ಯೋಜನೆಗಳನ್ನ ಕೊಡುತ್ತೆ; ಆದರೆ, ಬಿಜೆಪಿ ಬರೀ ಅದಾನಿ, ಅಂಬಾನಿಯವರ ಬಗ್ಗೆ ವಿಚಾರ ಮಾಡುತ್ತೆ ” ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳ್ಕರ್ ಕಿಡಿಕಾರಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಭಾಳ್ಕರ್ ಪರ ಬೆಳಗಾವಿ ನಗರದ ವಿವಿಧೆಡೆ ಶುಕ್ರವಾರ ಸಂಜೆ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಚಿವರು, “ ಕಾಂಗ್ರೆಸ್ಸಿನವರು ಹೃದಯದಿಂದ ಜನರ ಕೆಲಸ ಮಾಡುತ್ತೆ; ಆದರೆ, ಬಿಜೆಪಿಯವರು ಬರೀ ತಲೆಯಿಂದ ಕೆಲಸ ಮಾಡುತ್ತಾರೆ. ಅವರು ಬರೀ ಏಮೋಷನಲ್ ವಿಚಾರ ಮಾತನಾಡುತ್ತಾರೆ; ಕಾಂಗ್ರೆಸ್ ಪಕ್ಷ ಜನರ ಜೀವನ ಕಟ್ಟುವ ವಿಚಾರವಾಗಿ ಮಾತನಾಡುತ್ತೆ ” ಎಂದರು.
ನೆಹರು ನಗರದಲ್ಲಿ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ಸಂಘದ ಸಭೆ, ಸದಾಶಿವ ನಗರ, ಅಂಬೇಡ್ಕರ್ ನಗರ, ಶಿವಬಸವ ನಗರ, ರಾಮತೀರ್ಥ ನಗರ, ಕಣಬರ್ಗಿ ಮೊದಲಾದ ಪ್ರದೇಶದಲ್ಲಿ ಪ್ರಚಾರ ನಡೆಯಿತು.

ರಾಜ್ಯದಲ್ಲಿ ನಮ್ಮ ಜನಪರವಾದ ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮೀಯಂತಹ ಜನೋಪಯೋಗಿ ಯೋಜನೆಯನ್ನು ಜಾರಿಗೆ ತಂದಿದೆ. ಇಡೀ ದೇಶದಲ್ಲಿ ಯಾವುದಾದರೂ ರಾಜ್ಯದಲ್ಲಿ ಇಂತಹ ಜನಪರವಾದ ಯೋಜನೆಯನ್ನು ಜನರಿಗೆ ಕೊಟ್ಟಿದ್ದಾರಾ..? ಎಂದ ಸಚಿವರು, ಗೃಹಲಕ್ಷ್ಮೀ ಯೋಜನೆಗೆಂದು ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಹನ್ನೆರೆಡು ನೂರು ಕೋಟಿ ರೂಪಾಯಿ ತಿಂಗಳಿಗೆ ಕೊಡುತ್ತಿದ್ದೇವೆ; ಬೇರೆ ಯಾರು ಕೊಡುತ್ತಿದ್ದಾರೆ..? ಯಾವ ಸರ್ಕಾರ ಕೊಟ್ಟಿದೆ ಎಂದು ಪ್ರಶ್ನಿಸಿದರು.

ರಸ್ತೆ ಮಾಡಬಹುದು; ಗಟಾರ ಮಾಡಬಹುದು; ಆದರೆ, ಗೃಹಲಕ್ಷ್ಮೀಯಂತಹ ಜನೋಪಯೋಗಿ ಆಗುವಂತಹ ಯೋಜನೆಗಳನ್ನ ಏಕೆ ಕೊಡಬೇಕು..? ಜನರೇನು ಈ ಯೋಜನೆಗಳನ್ನ ಕೇಳಿದ್ರಾ..? ಕೊರೊನಾ ನಂತರ ಜನರ ಜೀವನ ಬಹಳ ಕಷ್ಟಕ್ಕೆ ಸಿಲುಕಿತ್ತು. ಹಾಗಾಗಿ ಸ್ವಲ್ಪವಾದರೂ ನೆಮ್ಮದಿ ಸಿಗಲಿ ಎಂದು ಇಂತಹ ಯೋಜನೆ ತಂದೆವು. ಮೋದಿ ಸರ್ಕಾರ ಕಳೆದ 10 ವರ್ಷಗಳಲ್ಲಿ ಇಂತಹ ಜನಪರ ಯೋಜನೆಯನ್ನ ಜಾರಿಗೆ ತರಲೇ ಇಲ್ಲ ಎಂದು ಕಿಡಿಕಾರಿದರು.


ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ; ಗ್ಯಾಸ್, ಪೆಟ್ರೋಲ್ ಬೆಲೆ ಮೂರುಪಟ್ಟು ಹೆಚ್ಚಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಪೆಟ್ರೋಲ್, ಗ್ಯಾಸ್ ಬೆಲೆ ಬಹಳ ಜಾಸ್ತಿ ಮಾಡಿದ್ದಾರೆಂದು ಬಿಜೆಪಿಯವರು ಹೇಳುತ್ತಿದ್ದರು; ಆದರೆ, ಅವರೀಗ ಮಾಡಿರುವುದೇನು..? ಎಂದು ಪ್ರಶ್ನಿಸಿದ ಸಚಿವರು, ವರ್ಷಕ್ಕೆ ಎರಡು ಕೋಟಿ ಜಾಬ್ ಕೊಡುತ್ತೇವೆಂದು ಮೋದಿಯವರು ಹೇಳಿದ್ದರು. ಆದರೆ ಈಗ ಎಷ್ಟು ಜಾಬ್ ಕೊಟ್ಟಿದ್ದಾರೆ; ಬಿಜೆಪಿಯವರು ಹೇಳುವುದೆಲ್ಲ ಬರೀ ಸುಳ್ಳು ಎಂದು ಲೇವಡಿ ಮಾಡಿದರು.
ಈ ಬಾರಿ ಮೃಣಾಲ ಹೆಬ್ಬಾಳಕರ್ ಅವರಿಗೆ ಮತ ನೀಡಿ ಆರಿಸಿ ತರಬೇಕು ಎಂದು ಸಚಿವರು ವಿನಂತಿಸಿದರು.

ವರದಿ ಪ್ರತೀಕ ಚಿಟಗಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!