ಬೆಂಗಳೂರು: ಮೀಸಲಾತಿ ಹೋರಾಟ (Protest) ರಾಜಕೀಯ ಆಗ್ತಿದೆ. ಕಾಂಗ್ರೆಸ್ (Congress) ಬಿಜೆಪಿ (BJP) ಎನ್ನೋದು ಹೋರಾಟದಲ್ಲಿ ಬರಬಾರದು. ಬಿಜೆಪಿಯವರಿಗೆ ಈ ಪ್ರೀತಿ ಮೊದಲೇ ಯಾಕಿರಲಿಲ್ಲ. ಅವರ ಸರ್ಕಾರ ಇದ್ದಾಗ 24ಮೀಸಲಾತಿ ಯಾಕೆ ಕೊಡಲಿಲ್ಲ. ಆಗ ಮೀಸಲಾತಿ ಕೂಡದೇ ಈಗ ಮೂಗಿಗೆ ತುಪ್ಪ ಸವರೋ ಕೆಲಸ ಮಾಡ್ತಿದ್ದಾರೆ ಎಂದು ಸಚಿವ ಲಕ್ಷ್ಮೀ ಹೆಬ್ಬಾಳ್ವರ್ (Lakshmi Hebbalkar) ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಿಎಂ ಸಮಯ ಕೂಟಿದರು. ಪಂಚಮಸಾಲಿ ಮೀಸಲಾತಿ ಹೋರಾಟ ಕುರಿತು ಪ್ರತಿಕ್ರಿಯೆ ನೀಡಿರುವ ಲಕ್ಷ್ಮೀ ಹೆಬ್ಬಾಳ್ಳ, ಕಾನೂನನ್ನ ಯಾರೂ ಕೈಗೆ ತೆಗೆದುಕೊಳ್ಳಬಾರದು. ಸ್ವಾಮೀಜಿಗಳಿಗೆ ಸಿಎಂ ಸಮಯ ಕೊಟ್ಟಿದ್ರು. ನಾನೇ ಹೋಗಿ ಕರೆದು ಬಂದಿದೆ. 10 ಜನರನ್ನ ಕರೆದು ಕೊಂಡು ಬರೋದಕ್ಕೆ ಸಿಎಂ ಹೇಳಿದರು. ಮೀಸಲಾತಿ ಹೋರಾಟ ರಾಜಕೀಯ ಆಗಬಾರದು ಎಂದು ಅವರು ಹೇಳಿದ್ದಾರೆ.