Ad imageAd image

ಸಚಿವೆ ಲಕ್ಸ್ಮಿ ಹೆಬ್ಬಾಳ್ಕರ್ ಮೇಡಂ ಅವರೇ ನೋಡ್ರಿ ನಿಮ್ಮ ಕ್ಷೇತ್ರದ ಸೂಳೆಭಾವಿ ಬಸ್ ನಿಲ್ದಾಣದ ದುಸ್ಥಿತಿಯನ್ನ

Bharath Vaibhav
ಸಚಿವೆ ಲಕ್ಸ್ಮಿ ಹೆಬ್ಬಾಳ್ಕರ್ ಮೇಡಂ ಅವರೇ ನೋಡ್ರಿ ನಿಮ್ಮ ಕ್ಷೇತ್ರದ ಸೂಳೆಭಾವಿ ಬಸ್ ನಿಲ್ದಾಣದ ದುಸ್ಥಿತಿಯನ್ನ
WhatsApp Group Join Now
Telegram Group Join Now

ಬೆಳಗಾವಿ: ಹೌದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಐತಿಹಾಸಿಕ ಸ್ಥಳ ಸೂಳೆಬಾವಿ ಗ್ರಾಮದಲ್ಲಿ ಕ್ಷೇತ್ರದ ಶಾಸಕರಾದ ಲಕ್ಸ್ಮಿ ಹೆಬ್ಬಾಳ್ಕರ್ ರವರ ವಿಶೇಷ ಪ್ರಯತ್ನದಿಂದ ಸೂಳೆಬಾವಿ ಹಾಗೂ ಸುತ್ತ ಮುತ್ತಲ ಗ್ರಾಮದವರಿಗೆ ಅನುಕೂಲವಾಗುವಂತೆ ಅಂದಾಜು ಅರ್ಧ ಕೋಟಿ ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಾಣ, ಮೂತ್ರಾಲಯ ನಿರ್ಮಾಣ ಹಾಗೂ ಸುತ್ತಲೂ ಆವರಣ ತಡೆಗೋಡೆ ನಿರ್ಮಾಣ ಮಾಡುವುದಕ್ಕೆ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಕಾಮಗಾರಿ ಇಂಜಿನಿಯರಿಂಗ್ ವಿಭಾಗದ ಅಡಿಯಲ್ಲಿ ಇಂಜಿನಿಯರ್ ಗಳು ಕಾಮಗಾರಿ ಮುಗಿಸಿ ಕೈ ತೊಳೆದುಕೊಂಡು ಬಿಟ್ಟಿದ್ದಾರೆ.

ಆದ್ರೆ ನಂತರ ಬಹುಶಃ ಭಾಗಶಃ ಈ ಕಡೆ ತಿರುಗಿಯೂ ನೋಡೇ ಇಲ್ಲವಂತೆ, ಇನ್ನೂ ಇಲ್ಲಿ ಸೂಕ್ತ ನಿರ್ವಹಣೆ ಇಲ್ಲದೇ ಇರುವ ಮೂತ್ರಾಲಯ, ಅದರ ಹೆಣ್ಣು ಮಕ್ಕಳ ಮೂತ್ರಾಲಯವು ಸಹ ತಗ್ಗು ಪ್ರದೇಶದಲ್ಲೇ ಇರುವುದರಿಂದ ಇದರ ಮೇಲೆ ಮೇಲ್ಛಾವಣಿ ಇಲ್ಲದೇ ಇರುವ ಕಾರಣ ಓಪನ್ ಆಗಿ ಇದೆ.

ಇದರಿಂದ ದಿನನಿತ್ಯ ಹೆಣ್ಣುಮಕ್ಕಳು ಮುಜುಗರದಲ್ಲಿಯೇ ಹೋಗುವ ಪರಿಸ್ಥಿತಿ ಇದೆ. ಇನ್ನೊಂದು ಕಡೆ ಈ ಬಸ್ ನಿಲ್ದಾಣಕ್ಕೆ ಸುತ್ತಲೂ ನಿರ್ಮಾಣ ಮಾಡಿರುವ ತಡೆ ಗೋಡೆಯು ಬಸ್ ನಿಲ್ದಾಣದ ಹಿಂಬಾಗದಲ್ಲಿಯೇ ಕುಸಿದು ಹೋಗಿರುವುದು, ಇದರಿಂದ ಬಸ್ ನಿಲ್ದಾಣದ ಮುಖ್ಯ ಕಟ್ಟಡಕ್ಕೆ ಹಾನಿ ಯಾಗುವ ಪರಿಸ್ಥಿತಿ ಇರುವುದು, ಇದರ ಜೊತೆಗೆ ನಿಲ್ದಾಣದಲ್ಲಿ ಗಿಡ ಗಂಟೆಗಳು ಬೆಳೆದು ಸೂಕ್ತ ನಿರ್ವಹಣೆ ಮತ್ತು ಸ್ವಚ್ಛತೆ ಇಲ್ಲದಿರುವುದು ಹಾಗೂ ಬರೀ ಮೂತ್ರಾಲಯ ನಿರ್ಮಾಣ ಮಾಡಿದ್ದಾರೆ.

ಆದ್ರೆ ಶೌಚಾಲಯ ಇಲ್ಲದೇ ಇರುವ ಕಾರಣ ಪ್ರಯಾಣಿಕರಿಗೆ ಹಾಗೂ ಬಸ್ ಸಿಬ್ಬಂದಿಗಳಿಗೆ ತುಂಬಾ ತೊಂದರೆಯಾಗುತ್ತಿರುವುದು, ಹಾಗೂ ಬಸ್ ಗಳು ನಿಲ್ದಾಣಕ್ಕೆ ಪ್ರವೇಶ ಮಾಡುವಾಗ ಹಾಗೂ ನಿರ್ಗಮಿಸುವ ಸ್ಥಳ ಹಾಳಾಗಿರುವುದು ಹೀಗೇ ಹತ್ತು ಹಲವಾರು ಸಮಸ್ಯೆಗಳಿಂದ ಈ ಬಸ್ ನಿಲ್ದಾಣ ಬಳಲುತ್ತಿರುವ ಹಿನ್ನೆಲೆ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಸ್ಥಳೀಯರ ಮನವಿ ಮೇರೆಗೆ ಈ ಸೂಳೆಬಾವಿ ಬಸ್ ನಿಲ್ದಾಣಕ್ಕೆ ಭೇಟಿಕೊಟ್ಟು ಸಮಗ್ರವಾಗಿ ವರದಿ ತಯಾರಿಸಿ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಅಧ್ಯಕ್ಷ ರಾಜು ಕಾಗೆ ಹಾಗೂ ಅಭಿಯಂತರರು ಆದ ದಿನೇಶ್ ಕುಮಾರ್ ಅವರ ಗಮನಕ್ಕೆ ತೆಗೆದುಕೊಂಡು ಬಂದು ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ. ಇನ್ನಾದರೂ ಈ ಸೂಳೆಬಾವಿ ಬಸ್ ನಿಲ್ದಾಣಕ್ಕೆ ಕಾಯಕಲ್ಪ ಸಿಗುವುದೇ ಎಂಬುದನ್ನು ಕಾದುನೋಡಬೇಕಿದೆ.

ವರದಿ: ಬಸವರಾಜು

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!