Ad imageAd image

ಲೆನ್ಸ್ ಕಾರ್ಟ್ ಸಂಸ್ಥೆಗೆ ಐದೇ ನಿಮಿಷದಲ್ಲಿ ಸ್ಪಂದಿಸಿದ ಸಚಿವ ಎಂಬಿ ಪಾಟೀಲ್

Bharath Vaibhav
ಲೆನ್ಸ್ ಕಾರ್ಟ್ ಸಂಸ್ಥೆಗೆ ಐದೇ ನಿಮಿಷದಲ್ಲಿ ಸ್ಪಂದಿಸಿದ ಸಚಿವ ಎಂಬಿ ಪಾಟೀಲ್
WhatsApp Group Join Now
Telegram Group Join Now

ಬೆಂಗಳೂರು: ರಾಜಧಾನಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 60 ಕಿ.ಮೀ. ಆಸುಪಾಸಿನಲ್ಲಿ ತಮ್ಮ ಉದ್ಯಮ ಘಟಕ ಸ್ಥಾಪಿಸಲು 25 ಎಕರೆ ಭೂಮಿ ಅಗತ್ಯವಿದೆ ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದ ಲೆನ್ಸ್ ಕಾರ್ಟ್  ಸಮೂಹದ ಮನವಿಗೆ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಅವರು ಕೇವಲ ಐದು ನಿಮಿಷಗಳಲ್ಲಿ ಸ್ಪಂದಿಸಿ, ಗಮನ ಸೆಳೆದಿದ್ದಾರೆ

ಲೆನ್ಸ್ ಕಾರ್ಟ್ ಉನ್ನತಾಧಿಕಾರಿ ಪಿಯೂಷ್ ಬನ್ಸಾಲ್  ಅವರು ‘ಎಕ್ಸ್’ನಲ್ಲಿ ತಮ್ಮ ಅಗತ್ಯದ ಬಗ್ಗೆ ಒಂದು ಪೋಸ್ಟ್ ಹಾಕಿದ್ದರು. ಅದರಲ್ಲಿ ಅವರು, ಯಾವುದಾದರೂ ಉದ್ಯಮ ಸಂಸ್ಥೆಗೆ ಜಮೀನು ಮಾರಾಟ ಮಾಡಲು ಆಸಕ್ತಿ ಇದ್ದರೆ ತಮಗೆ ಇ-ಮೇಲ್ ಕಳಿಸುವಂತೆ ಕೋರಿದ್ದರು.

ಇದನ್ನು ಗಮನಿಸಿದ ಸಚಿವರು ಕೂಡಲೇ ಕಾರ್ಯಪ್ರವೃತ್ತರಾಗಿ, ‘ಕೈಗಾರಿಕಾ ಇಲಾಖೆಯು ನಿಮ್ಮ ಬೆಂಬಲಕ್ಕಿದ್ದು, ನಿಮ್ಮ ಅಗತ್ಯಗಳನ್ನೆಲ್ಲ ಪೂರೈಸಲಿದೆ. ನಮ್ಮ ಅಧಿಕಾರಿಗಳು ತಕ್ಷಣವೇ ನಿಮ್ಮನ್ನು ಸಂಪರ್ಕಿಸಲಿದ್ದಾರೆ. ನೀವು ಇರಬೇಕಾದ ಜಾಗ ಕರ್ನಾಟಕ!’ ಎಂದು ಮರುಪೋಸ್ಟ್ ಮಾಡಿ, ಭರವಸೆ ನೀಡಿದ್ದಾರೆ. ಜೊತೆಗೆ ಅಧಿಕಾರಿಗಳಿಗೆ ಅವರು ಅಗತ್ಯ ಸೂಚನೆಗಳನ್ನು ಸಹ ಕೊಟ್ಟಿದ್ದಾರೆ. ಸಚಿವರ ಈ ನಡೆಗೆ ‘ಎಕ್ಸ್’ನಲ್ಲಿ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

https://x.com/MBPatil/status/1777581857871433764

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!