ಬೆಳಗಾವಿ:ಹೌದು ಕರ್ನಾಟಕ ಸರ್ಕಾರದ ಅತ್ಯಂತ ತಳಮಟ್ಟದ ಪ್ರಮುಖ ಇಲಾಖೆಗಳಲ್ಲಿ ಸಣ್ಣ ನೀರಾವರಿ ಇಲಾಖೆ ಸಹ ಒಂದು. ಕೆರೆಗಳಲ್ಲಿ ನೀರು ಶೇಖರಣೆ ಹಾಗೂ ಭೂಮಿಯ ಅಂತರ್ಜಲ ಮಟ್ಟ ಏರಿಕೆ ಹಾಗೂ ರೈತಾಪಿ ವರ್ಗಕ್ಕೆ ಜೀವನಾಡಿಯಾಗಿ ಈ ಇಲಾಖೆ ತುಂಬಾನೇ ಶ್ರಮ ಪಟ್ಟು ಕೆಲಸ ಮಾಡುತ್ತದೆ. ಆದ್ರೇ ವಿಪರ್ಯಾಸ ಎಂದ್ರೆ ಇಂತಹ ಪ್ರಮುಖ ಇಲಾಖೆಯ ಉಪ ವಿಭಾಗಗಳ ಕಟ್ಟಡಗಳ ಪರಿಸ್ಥಿತಿ ನೋಡಿದ್ರೆ ಅಯ್ಯೋ ಪಾಪ ಅನ್ನಿಸುತ್ತೆ. ಉದಾಹರಣೆಗೆ. ಬೆಳಗಾವಿ ಜಿಲ್ಲೆಯ ಬೆಳಗಾವಿ ಉಪ ವಿಭಾಗದ ಕಚೇರಿಯ ಪ್ರಸ್ತುತ ದುಸ್ಥಿತಿ ನೋಡಿದ್ರೆ ಸಾಕು ತುಂಬಾನೇ ಬೇಜಾರಾಗುತ್ತೆ ಕಣ್ರೀ. ಈ ಕಚೇರಿಯ ಕಟ್ಟಡವು ತುಂಬಾನೇ ಹಳೆಯದ್ದಾಗಿದ್ದು, ಗೋಡೆಗಳು ಬಿರುಕು ಬಿಟ್ಟಿವೆ. ಪ್ರಸ್ತುತ ಮಳೆಗಾಲ್ಲಂತೂ ನೀರು ಸೋರುವುದು ಕಾಮನ್ ಆಗಿದೆ. ಇನ್ನೂ ಮೇಲ್ಚಾವಣಿಯು ತುಂಬಾನೇ ಹಾಳಾಗಿದ್ದು ಗಿಡಗಂಟಿಗಳು ಬೆಳೆದು ಪೊದೆ ಗಳಾಗಿವೆ. ಇಡೀ ಕಟ್ಟಡದ ಗೋಡೆಗಳನ್ನು ಗೆದ್ದಲು ಉಳುಗಳು ತಿನ್ನುತ್ತಿದ್ದು, ಒಳಗಡೆ ದಾಖಲೆಗಳಾಗಿ ಶೇಖರಣೆ ಮಾಡಿರೋ ಫೈಲ್ ಗಳು ಗೆದ್ದಲು ತಿನ್ನುತ್ತಿವೆ.
ಕಚೇರಿ ಪೀಠೋಪಕರಣಗಳು ತುಕ್ಕು ಹಿಡಿದು ಹಾಳಾಗುತ್ತಿವೆ. ಕಂಪ್ಯೂಟರ್ ಗಳ ಮೇಲೂ ಸಹ ಸಹ ಮಳೆ ಹನಿಗಳು ಸೋರಿ ಹಾಳಾಗಿವೆ. ಮೊದಲೇ ಡೆಂಗ್ಯೂ ಹಾವಳಿ ಜಾಸ್ತಿ. ಇಂತಹ ಸಂದರ್ಭದಲ್ಲಿ ಇಲ್ಲಿ ಸೊಳ್ಳೆಗಳ ಸಮುದ್ರವೇ ಇದೇ ಎಂದು ಹೇಳಬಹುದು, ಇಷ್ಟೆಲ್ಲಾ ಸಮಸ್ಯೆ ಇದ್ರೂ ಸಹ ಇಲ್ಲಿನ ಇಂಜಿನಿಯರ್ ಗಳು ಹಾಗೂ ಸಿಬ್ಬಂದಿಗಳು ಕರಾಬ್ ಆಗಿರೋ ಕಟ್ಟಡದಲ್ಲೇ ದಿನನಿತ್ಯ ಕೆಲಸ ಮಾಡಿಕೊಂಡು ತಮ್ಮ ಸಮಸ್ಯೆಗಳನ್ನು ಯಾರಿಗೂ ಹೇಳಿಕೊಳ್ಳದೇ ತಮ್ಮ ಪಾಡಿಗೆ ಉಳಿದು ಬಿಟ್ಟಿದ್ದಾರೆ. ಅಷ್ಟಕ್ಕೂ ಈ ಸಣ್ಣ ನೀರಾವರಿ ಇಲಾಖೆಯ ಬೆಳಗಾವಿ ಉಪ ವಿಭಾಗದ ಕಟ್ಟಡವು ಬೆಳಗಾವಿ, ಬೈಲಹೊಂಗಲ, ಕಿತ್ತೂರು, ಹುಕ್ಕೇರಿ, ಖಾನಾಪುರ ಕ್ಷೇತ್ರಗಳಿಗೆ ಸಂಬಂಧಪಡುವ ದೊಡ್ಡ ಉಪ ವಿಭಾಗ. ಆದ್ರೇ ತುಂಬಾನೇ ದುಸ್ಥಿತಿಯಲ್ಲಿರೋ ಶಿಥಿಲಗೊಂಡ ಕಟ್ಟಡದ ಕಾಯಕಲ್ಪಕ್ಕೆ ಯಾರು ಸಹ ಗಮನ ಹರಿಸಿಲ್ಲಾ, ಆದ್ದರಿಂದ 2 ದಿವಸಗಳ ಹಿಂದೆ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಭೇಟಿಕೊಟ್ಟು ಈ ಕಟ್ಟಡದ ದುಸ್ಥಿತಿ ಹಾಗೂ ಸಿಬ್ಬಂದಿಗಳ ಪರದಾಟದ ಬಗ್ಗೆ ಸಮಗ್ರವಾಗಿ ವರದಿ ತಯಾರಿಸಿ ಕರ್ನಾಟಕ ಸರ್ಕಾರದ ಸಣ್ಣ ನೀರಾವರಿ ಇಲಾಖೆ ಸಚಿವ ಬೋಸರಾಜು ಅವರಿಗೆ ಕರೆ ಮಾಡಿ ಈ ಕಟ್ಟಡದ ದುಸ್ಥಿತಿ ಬಗ್ಗೆ ಗಮನಕ್ಕೆ ತೆಗೆದುಕೊಂಡು ಬಂದು ಅಭಿಪ್ರಾಯ ಸಂಗ್ರಹ ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ. ಇನ್ನಾದ್ರೂ ಈ ಕರಾಬ್ ಆಗಿರೋ ಶಿಥಿಲಗೊಂಡ ಬೆಳಗಾವಿ ಸಣ್ಣ ನೀರಾವರಿ ಇಲಾಖೆ ಉಪ ವಿಭಾಗದ ಕಚೇರಿಯ ಕಟ್ಟಡಕ್ಕೆ ಅಭಿವೃದ್ಧಿ ಕಾಯಕಲ್ಪ ಸಿಗುವುದೇ ಎಂಬುದನ್ನು ಕಾದುನೋಡಬೇಕಿದೆ.
ವರದಿ:ಬಸವರಾಜು