ಸೇಡಂ: ತಾಲೂಕಿನ ಚಂದಾಪುರ ಗ್ರಾಮದಲ್ಲಿನ ಸರಕಾರಿ ಪ್ರೌಢ ಶಾಲೆಗೆ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ದಿ ಸಚಿವರಾದ ಡಾ.ಶರಣಪ್ರಕಾಶ ಪಾಟೀಲರು ಭೇಟಿ ನೀಡಿ, ಅಲ್ಲಿನ ವ್ಯವಸ್ಥೆ ಹಾಗು ಶಾಲಾ ಮಕ್ಕಳ ಶೈಕ್ಷಣಿಕ ಪ್ರಗತಿ ಬಗ್ಗೆ ಪರಿಶೀಲನೆ ನಡೆಸಿದರು.

ಶಾಲಾ ಕೋಣೆಗಳ ಗಮನ ಹರಿಸಿ, ಬೇಕಾದ ಮೇಲ್ವಿಚಾರಣೆ ಮಾಡುವಂತೆ ಕುರಿತು ಅಧಿಕಾರಿಗಳಿಗೆ ತಿಳಿಸಿದರು, ಜೊತೆಗೆ ಶಾಲೆಯ ಫಲಿತಾಂಶ ಹೆಚ್ಚಿಸಲು ಶ್ರಮವಹಿಸಿ ಎಂದು ಶಿಕ್ಷಕರಿಗೆ ಸೂಚಿಸಿದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿಯಿಂದ ಅನುದಾನ ಜೊತೆಗೆ ಯೋಜನೆಗಳನ್ನು ಜಾರಿಗೆಗೊಳಿಸಲಾಗುತ್ತಿದ್ದು, ಮಕ್ಕಳ ದಾಖಲಾತಿ ಹಾಗೂ ಫಲಿತಾಂಶ ಪ್ರಗತಿ ಹೊಂದುವಲ್ಲಿ ಶಿಕ್ಷಣ ಇಲಾಖೆ ಗಮನ ಹರಿಸಿ ಎಂದು ಸಚಿವರು ಕಟ್ಟುನಿಟ್ಟಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮಕ್ಕಳೊಂದಿಗೆ ಸಚಿವರು ಕೆಲ ಹೊತ್ತು ಸಮಾಲೋಚನೆ ನಡೆಸಿದರು.

ವರದಿ :ವೆಂಕಟಪ್ಪ ಕೆ ಸುಗ್ಗಾಲ್




