ಸೇಡಂ:ಕೋವಿಡ್ ಸಮಯದಲ್ಲಿ ಆಗಿನ ಬಿಜೆಪಿ ಸಿಎಂ ಲೂಟಿ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದಾಗ ಅದನ್ನೂ BJP Karnataka ಅವರು ರಾಜೀನಾಮೆ ಕೊಡಿಸಿದ್ರಾ?
ಸಿಎಂ ಯಡಿಯೂರಪ್ಪ ಅವರು ಆಗಿದ್ದಾಗ ಅವರ ಸುಪುತ್ರ ಹಾಗು ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೆಂದ್ರ ಅವರು ಚೆಕ್ ,RTGS ಮೂಲಕ ಲಂಚ ಪಡೆದಾಗ ಅದು ಸುದ್ದಿಯಾದಾಗ ಬಿಜೆಪಿ ಅವರು ರಾಜಿನಾಮೆ ಕೊಡಿ ಅಂತ ಯಡಿಯೂರಪ್ಪಾ ಅವರಿಗೆ ಹೇಳಿದ್ರಾ?
ಚುನಾವಣಾ ಬಾಂಡ್ ಅಲ್ಲಿ ಲೂಟಿ ಆಗಿದೆ ಅಂತ ಬೆಂಗಳೂರು ಅಲ್ಲಿ ನೇರವಾಗಿ ಕೇಂದ್ರ ಸರ್ಕಾರ ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಇತರರ ಮೇಲೆ ಎಫ್ಐಆರ್ ಆದಾಗ ನೈತಿಕತೆ ಕಾರಣಕ್ಕೆ ಅವರನ್ನು ರಾಜಿನಾಮೆ ಕೊಡಿ ಅಂದ್ರಾ ಬಿಜೆಪಿ ನಾಯಕರು?
ಪ್ರಲ್ಹಾದ ಜೋಶಿ ಅವರ ಸ್ವಂತ ಸಹೋದರ ಎಂಪಿ ಟಿಕೇಟ್ ಕೊಡಿಸ್ತೀನಿ ಅಂತಾ ಕೋಟ್ಯಂತರ ರುಪಾಯಿ ಹಣ ಪಡೆದು ವಂಚಿಸಿದ್ದು ಅದು ಎಫ್ಐಆರ್ ಆದಾಗ ರಾಜಿನಾಮೆ ಕೊಡಬೇಕಿತ್ತು ಜೋಷಿ ಅವರು. ಅಗ ಬಿಜೆಪಿ ಅವರಿಗೆ ಜೋಷಿ ಅವರು ರಾಜಿನಾಮೆ ಕೊಡಿ ಅಂದರಾ?
ಈಗ ಗುತ್ತಿಗೆದಾರ ವ್ಯಕ್ತಿ ರಾಜು ಅನ್ನುವವರ ಜೊತೆ ಪ್ರಿಯಾಂಕ್ ಖರ್ಗೆ ಅವರ ಹತ್ತಿರ ಕರೆದುಕೊಂಡು ಹೋಗಿದರು. ಅವರು CE ಅವರಿಗೆ ಕೆಲಸ ಇದೆ ಅಂದಿದ್ದಕ್ಕೆ ಫೋನ್ ಮಾಡಿದ್ರು ಅಂತ ಹೇಳಿರೋದಕ್ಕೆ ರಾಜಿನಾಮೆ ಕೊಡಿ ಅನ್ನುವ ಬಿಜೆಪಿ ನಾಯಕರೆ, ಮೊದಲು ಒಂದು ಕೆಲಸ ಮಾಡಿ, ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ವಿಧಾನಸಭಾ ಮತಕ್ಷೇತ್ರದ ಬಿಜೆಪಿಯ ನಾಲವಾರ ಮಂಡಲದ ನಿಮ್ಮದೇ ಪಕ್ಷವಾದ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಆದ ನಂದಾರೆಡ್ಡಿ ಅವರಲ್ಲಿರುವ ಪ್ರಬುದ್ಧತೆ ಬೆಳೆಸಿಕೊಳ್ಳಿ. ಅವರ ಹೇಳಿಕೆಯ ಅಂಶಗಳನ್ನು ಮತ್ತೆ ಮತ್ತೆ ಓದಿ. ಅಂತವರಿಂದ ಕಲಿಯಿರಿ.
ಕೊನೆಯದಾಗಿ, ನಿಮ್ಮ ತಟ್ಟೆಯಲ್ಲಿ ಬಿದ್ದಿರುವ ಬೃಹತ್ ಗಾತ್ರದ ಹೆಗ್ಗಣ ನೋಡಿ ಆಮೇಲೆ ಬೇರೆಯವರ ತಟ್ಟೆಯಲ್ಲಿ ಬಿದ್ದಿರುವ ನೊಣದ ರೆಕ್ಕೆ ನೋಡಿ. ಗುತ್ತಿಗೆದಾರ ಆತ್ಮಹತ್ಯಾ ಮಾಡಿಕೊಂಡಿರೋದು ವಿಷಾದನೀಯ ಸಂಗತಿ. ಅದರ ಬಗ್ಗೆ ಸಮಗ್ರ ತನಿಖೆ ಆಗಲಿ ಮತ್ತು ತಪ್ಪಿಸ್ತರು ಯಾರೇ ಇದ್ದರೂ ಶಿಕ್ಷೆ ಆಗಲಿ ಅಂತಾ ಖುದ್ದು ಸಚಿವರೇ ಹೇಳಿದ್ದಾರೆ. ಇನ್ನೇನು ಬೇಕು? ಬಿಜೆಪಿ ನಾಯಕರು ಬೀದಿ ಡೊಂಬರಾಟ ಮಾಡುವುದು ನಿಲ್ಲಿಸಿ. ಜನರಿಗೆ ಸತ್ಯ ಗೊತ್ತಿದೆ. ಇಂಥ ಕಾರಣಕ್ಕೆ ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರಾದ ಪ್ರಿಯಾಂಕ ಖರ್ಗೆ ಅವರು ರಾಜೀನಾಮೆ ಕೊಡುವ ಅಗತ್ಯವೂ ಇಲ್ಲ ಎಂದು ಹೇಳಲು ಇಷ್ಟ ಪಡುತ್ತೇನೆ ಎಂದು ಮಹಿಮುದ ಮದನಾ, ಸೋನಿಯಾ ಗಾಂಧಿ ಬ್ರಿಗೇಡ್ ಆಲ್ ಇಂಡಿಯಾ ರಾಜ್ಯ ಕಾರ್ಯಧ್ಯಕ್ಷರು, ಹಾಗೂ 5 ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಸದಸ್ಯರು ಸೇಡಂ ರವರು ಪತ್ರಿಕಾ ಪ್ರಕಟಣೆಯಲ್ಲಿ ವ್ಯಕ್ತಪಡಿಸಿದ್ದಾರೆ.
ವರದಿ :ವೆಂಕಟಪ್ಪ ಕೆ ಸುಗ್ಗಾಲ್