ಕಲಘಟಗಿ : ದಶಕಗಳು ಕಳೆದರೂ ಜನರು ವಾಸಮಾಡುವ ಜಾಗೆ ಅನಧಿಕೃತವಾಗಿದ್ದವು ಸರ್ಕಾರ ಅವುಗಳ ಗುರುತಿಸಿ ಕಂದಾಯ ಹಾಗೂ ಗ್ರಾಮ ಪಂಚಾಯತಿಯಿಂದ ಅಧಿಕೃತವಾಗಿ ಪಲಾನುಭವಿಗಳಿಗೆ ಆಸ್ತಿಗೆ ಇ-ಸ್ವತ್ತು ಮಾಡಿಸಿ ಪಟ್ಟಾಧಿಕಾರ ಒದಗಿಸಿ ನೆಮ್ಮದಿಯಾಗಿ ಬದುಕಲು ಅವಕಾಶ ಕಲ್ಪಿಸಿಕೊಟ್ಟಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು.

ಜಿಲ್ಲಾ,ಪಂಚಾಯತಿ, ತಾಲ್ಲೂಕ ಪಂಚಾಯತಿ ಹಾಗೂ ಗ್ರಾಮ ಪಂಚಾಯತಿ ಆಶ್ರಯದಲ್ಲಿ ಬುಧವಾರ ತಾಲ್ಲೂಕಿನ ತಾವರಗೇರಿ ಗ್ರಾಮದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಂದ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಹಾಗೂ ವಾಲ್ಮೀಕಿ ಭವನ, ಯುವಕ ಮಂಡಳಗಳ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಸುಮಾರು 5 ಸಾವಿರ, ರಾಜ್ಯದಲ್ಲಿ ಒಂದೇ ಬಾರಿಗೆ 11 ಸಾವಿರ ಅನಧಿಕೃತ ಮನೆಗಳಿಗೆ ಅಧಿಕೃತ ಪಟ್ಟಾ ನೀಡಿ ನಮ್ಮ ಸರ್ಕಾರ ರೈತರಿಗೆ, ಬಡ ಕೂಲಿ ಕಾರ್ಮಿಕರಿಗೆ ಆಶ್ರಯವಾಗಿದೆ ಎಂದರು.
ತಾವರಗೇರಿ ಗ್ರಾಮದಲ್ಲಿ 118 ಜನರಿಗೆ ಇ – ಸ್ವತ್ತುಗೊಳ್ಳಿಸಿ ಪಟ್ಟಾ ನೀಡಲಾಗಿದೆ ಇದರಿಂದ ಆಸ್ತಿಯ ಮೇಲೆ ಸಾಲ ಸೌಲಭ್ಯ ಪಡೆಯಬಹುದು ಎಂದರು.

ದೇಶದ ವ್ಯವಸ್ಥೆಗೆ ಗ್ರಾಮ,ಪಟ್ಟಣ, ನಗರಗಳಲ್ಲಿ ಅಂಗನವಾಡಿ,ಆಶಾ ಕಾರ್ಯಕರ್ತೆಯರು,ಸಹಾಯಕಿಯರು ಮಕ್ಕಳಿಂದ ಹಿಡಿದು ಗರ್ಭಿಣಿ ಮಹಿಳೆಯರ ಪ್ರತಿ ಹಂತದಲ್ಲಿ ಅವರ ಕಷ್ಟ ಸುಖ ಆಲಿಸುತ್ತಾರೆ ಅವರ ಪಾತ್ರ ಬಹಳ ಮುಖ್ಯವಾಗಿದೆ. ಸರ್ಕಾರ ಯಾವುದೇ ಕೆಲಸ ನೀಡಿದರು ಮನೆ ಮನೆಗೆ ತೆರಳಿ ಕೆಲಸ ನಿರ್ವಹಿಸಿ ಗ್ರಾಮಗಳ ಅಭಿವೃದ್ಧಿಗೆ ಕೂಡಾ ಶ್ರಮಿಸುತ್ತಿದ್ದಾರೆ ಅವರ ಕಾರ್ಯ ಮೆಚ್ಚುವಂತಹದು ಎಂದರು.
ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ
ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಗಳ ಪ್ರಾತ್ಯಕ್ಷಿಕೆ, ಪಶುಸಂಗೋಪನಾ ಇಲಾಖೆಯಿಂದ ಮೃತ ಜಾನುವಾರ ರೈತರಿಗೆ ಸಹಾಯಧನ, ಹೆಣ್ಣು ಮಗುವಿನ ಪಾಲಕರಿಗೆ ಭಾಗ್ಯಲಕ್ಷ್ಮಿ ಯೋಜನೆಯಡಿ ಪಾಸ ಬುಕ್, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್ ಟ್ಯಾಪ್ ವಿತರಿಸಿದರು.
ಗ್ರಾಮದ ಸಿದ್ದಾರೂಢ ಮಠದ ನಿರ್ಗುಣಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಸ್. ಆರ್ ಪಾಟೀಲ, ತಹಸೀಲ್ದಾರ ಬಸವರಾಜ ಬೆಣ್ಣಿ ಶಿರೂರ,ತಾಲ್ಲೂಕ ಪಂಚಾಯತಿ ಇಓ ಪರಶುರಾಮ ಸಾವಂತ, ಸಿಪಿಐ ಶ್ರೀಶೈಲ್ ಕೌಜಲಗಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಮುರಳ್ಳಿ, ಮುಖಂಡರಾದ ನರೇಶ ಮಲೆನಾಡು, ಬಾಬು ಅಂಚಟಗೇರಿ, ಮಾದೇವಪ್ಪ ಲಕ್ಕಪ್ಪನವರ,ಕೆ. ಬಿ ಗುಡಿಹಾಳ, ಹರಿಶಂಕರ ಮಠದ,ಸೋಮಶೇಖರ್ ಬೆನ್ನೂರ್, ಬಾಳು ಖಾನಾಪುರ, ಪಿಡಿಓ ಪುಂಡಲೀಕ ಯಲ್ಲಾರಿ, ಬಸಯ್ಯ ಹಿರೇಮಠ, ಬಸವರಾಜ ಕೆಲಗೇರಿ ಇದ್ದರು.




