ಯರಗಟ್ಟಿ : ಸತ್ತಿಗೇರಿ ಏತ ನೀರಾವರಿ ಯೋಜನೆ ಕಾಮಗಾರಿಗೆ ಲೋಕೋಪಯೊಗಿ ಸಚಿವ ಸತೀಶ ಜಾರಕಿಹೊಳಿ ಭೂಮಿ ಪೂಜೆ ಸಮೀಪದ ಸತ್ತಿಗೇರಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಕರ್ನಾಟಕ ರಾಜ್ಯ ನೀರಾವರಿ ನಿಗಮದಡಿಯಲ್ಲಿ ಅಂದಾಜು ೫೪೬ ಕೋಟಿ ಮೊತ್ತದ ಏತ ನೀರಾವರಿ ಕಾಮಗಾರಿಗೆ ಸಚಿವ ಸತೀಶ ಜಾರಕಿಹೊಳಿ ಸೋಮವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಹಲವಾರು ವರ್ಷಗಳಿಂದ ಈ ಭಾಗದ ರೈತರು ನೀರಾವರಿ ಯೋಜನೆಗಳ ಬಗ್ಗೆ ಅತೀವ ಆಶೆಯನ್ನು ಹೊಂದಿದ್ದರು. ಅವರ ಆಶಯದಂತೆ ಇಂದು ಸತ್ತಿಗೇರಿ ಏತ ನೀರಾವರಿ ಯೋಜನೆಯ ಕಾಮಗಾರಿಗೆ ಭೂಮಿ ಪೂಜೆ ನೆರವೇರುವ ಮೂಲಕ ಅವರ ಕನಸು ಸಾಕಾರಗೊಳ್ಳುತ್ತಿದೆ ಎಂದರು.
ಬೆಳಗಾವಿ ಜಿಲ್ಲೆಯ ಸವದತ್ತಿ ವಿಧಾನಸಭಾ ಮತಕ್ಷೇತ್ರದ ಯರಗಟ್ಟಿ ತಾಲೂಕಿನ ೧೧ ಗ್ರಾಮಗಳ ೬೮೭೮.೦೦ ಹೆಕ್ಟರ್ (೧೭೦೦೦ ಎಕರೆ) ಜಮೀನುಗಳು ಎತ್ತರ ಪ್ರದೇಶದಲ್ಲಿರುವ ಹಿನ್ನಲೆಯಲ್ಲಿ ಘಟಪ್ರಭಾ ಯೋಜನೆ, ಮಲಪ್ರಭಾ ಯೋಜನೆ, ವೀರಭದ್ರೇಶ್ವರ ಏತ ನೀರಾವರಿ ಯೋಜನೆ ಹಾಗೂ ರಾಮೇಶ್ವರ ಏತ ನೀರಾವರಿ ಯೋಜನೆ ಈ ಎಲ್ಲ ಯೋಜನೆಗಳಲ್ಲಿ ಒಳಪಡದೇ ಸಂಪೂರ್ಣವಾಗಿ ನೀರಾವರಿ ಸೌಲಭ್ಯದಿಂದ ವಂಚಿತವಾಗಿರುತ್ತದೆ. ಈ ಹಿನ್ನಲೆಯಲ್ಲಿ ಸದರಿ ನೀರಾವರಿ ವಂಚಿತ ಜಮೀನುಗಳಲ್ಲಿ ನೀರಾವರಿ ಸೌಲಭ್ಯ ಒದಗಿಸಲು ಸತ್ತಿಗೇರಿ ಏತ ನೀರಾವರಿ ಯೋಜನೆಯನ್ನು ಸೃಜಿಸಿಸಲಾಗಿದೆ.
ಸತ್ತಿಗೇರಿ ಏತ ನೀರಾವರಿ ಯೋಜನೆಯು ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ತಳಕಟನಾಳ ಗ್ರಾಮದ ಘಟಪ್ರಭಾ ನದಿಯಿಂದ ಮಳೆಗಾಲದಲ್ಲಿ ಮುಂಗಾರು ಬೆಳೆಗಾಗಿ ೧.೦೦ ಟಿಎಂಸಿ ನೀರನ್ನು ಉಪಯೋಗಿಸಿಕೊಂಡು ಬೆಳಗಾವಿ ಜಿಲ್ಲೆಯ ಸವದತ್ತಿ ವಿಧಾನಸಭಾ ಮತಕ್ಷೇತ್ರದ ಯರಗಟ್ಟಿ, ತಾಲ್ಲೂಕಿನ ೧೧ ಗ್ರಾಮಗಳ ಒಟ್ಟು ಸುಮಾರು ೬೮೭೮.೦೦ ಹೆಕ್ಟರ್ ಜಮೀನಿಗೆ ನೀರಾವರಿ ಕಲ್ಪಿಸಲು ಯೋಜಿಸಲಾಗಿದೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನಂತರ ಶಾಸಕ ವಿಶ್ವಾಸ ವೈದ್ಯ ಮಾತನಾಡಿ ಸುಮಾರು ೨೫ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸತ್ತಿಗೇರಿ ಏತ ನೀರಾವರಿ ಯೋಜನೆಯು ಇಂದು ನಮ್ಮ ನಾಯಕರಾದ ಸತೀಶ ಜಾರಕಿಹೊಳಿ ಅವರಿಂದ ವಿದ್ಯಕ್ತವಾಗಿ ಚಾಲನೆಗೊಂಡಿರಿದು ಈ ಭಾಗದ ರೈತರ ಕನಸು ಸಕಾರಗೊಂಡಿದೆ ಹಾಗೂ ತಾಲೂಕಿನ ನನ್ನ ಮತಕ್ಷೇತ್ರದಲ್ಲಿ ಬರುವ ಎಲ್ಲಾ ಗ್ರಾಮಗಳು ಸಂಪೂರ್ಣ ನೀರಾವರಿಗೊಳಪಡುತ್ತಿರುವುದು ನನ್ನ ಸುದೈವವೇ ಸರಿ. ಮತಕ್ಷೇತ್ರದ ರೈತರಿಗೆ ಕೊಟ್ಟ ಮಾತುಗಳು ಭರವಸೆಯಾಗದೇ ಕೃತಿಯಾಗುತ್ತಿರುವುದು ನನ್ನ ಭಾಗ್ಯ. ತಮ್ಮೆಲ್ಲ ಪ್ರೇರಣೆ ಸಹಕಾರದಿಂದ ತಾಲೂಕಿನ ಪ್ರತಿ ಕ್ಷೇತ್ರವನ್ನು ಅಭಿವೃದ್ಧಿಗೊಳಿಸುವಲ್ಲಿ ಸಹಕಾರಿಯಾಗಿದೆ. ಮತ್ತು ಶೀಘ್ರದಲ್ಲಿ ಯರಗಟ್ಟಿ ತಾಲೂಕಿಗೆ ಬೇಕಾಗುವ ಎಲ್ಲಾ ಕಛೇರಿಗಳನ್ನು ಹಂತ ಹಂತವಾಗಿ ಪ್ರಾರಂಭಿಸಲಾಗುವುದು ಮತ್ತು ಶೀಘ್ರದಲ್ಲಿ ಸತ್ತಿಗೇರಿ ಗ್ರಾಮಕ್ಕ ಪ್ರಾಥಮಿಕ ಆರೋಗ್ಯ ಕೇಂದ್ರ ಪ್ರಾರಂಭಿಸಲಾಗುವುದು ಎಂದು ಹೇಳಿದರು.
ಈ ವೇಳೆ ಪೂಜ್ಯ ಭಾಗೋಜಿಕೊಪ್ಪದ ಡಾ. ಶಿವಲಿಂಗ ಮುರುಘರಾಜೇಂದ್ರ ಸ್ವಾಮೀಜಿ, ಸತ್ತಿಗೇರಿಯ ಪೂಜ್ಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕೊರಕೊಪ್ಪದ ರೇವಣ್ಣ ಸಿದ್ದೇಶ್ವರ ಶರಣರು, ಕಿತ್ತೂರ ಶಾಸಕ ಬಾಬಾಸಾಹೇಬ ಪಾಟೀಲ, ತಹಶೀಲ್ದಾರ ಎಂ. ವಿ. ಗುಂಡಪ್ಪಗೋಳ, ನೀರಾವರಿ ಅಧಿಕ್ಷಕ ಅಭಿಯಂತ್ರರರು ಮಹಾವೀರ ಗಣಿ, ನೀರಾವರಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತ್ರರು ರಘುರಾಮ ಎಸ್. ವ್ಹಿ., ಗ್ರಾ. ಪಂ. ಅಭಿವೃದ್ದಿ ಅಧಿಕಾರಿ ಎ. ಬಿ. ಬಂಗಾರಿ, ಶ್ರೀಮತಿ ದೀಪಾ ಸಂಗÀಪ್ಪನ್ನವರ, ಕೆಎಂಎಫ್ ನಿರ್ದೇಶಕ ಶಂಕರ ಇಟ್ನಾಳ, ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸವರ, ರವೀಂದ್ರ ಯಲಿಗಾರ, ಸವದತ್ತಿ ಎಪಿಎಂಸಿ ಅಧ್ಯಕ್ಷ ಚಂದ್ರು ಪೂಜೇರ, ಉಮೇಶ ಬಾಳಿ, ಬಂಗಾರೆಪ್ಪ ಹರಳಿ, ಪ್ರಕಾಶ ವಾಲಿ, ನಾಗಪ್ಪ ಕರಲಿಂಗಪ್ಪನ್ನವರ, ಬಸವರಾಜ ಬಿರಾದಾರಪಾಟೀಲ, ಪುಟ್ಟಪ್ಪ ಯಕ್ಕನ್ನವರ, ಬಸವರಾಜ ಹೊಸಮನಿ, ಕಲ್ಲಪ್ಪ ದಾಸಗಂಳಿ, ಲಕ್ಕಪ್ಪ ಮರಕುಂಬಿ, ನಿಂಗಪ್ಪ ಹೊನ್ನಕುಪ್ಪಿ, ಬನಪ್ಪಗೌಡ ಪಾಟೀಲ, ಪರಶುರಾಮ ಕೌಜಗೇರಿ, ಮುದಕಪ್ಪ ದಳವಾಯಿ, ರಾಜು ಸೋಮಣ್ಣವರ, ಮಲ್ಲಿಕಾರ್ಜುನ ಚಿಪಲಕಟ್ಟಿ, ನಿಂಗಪ್ಪ ನುಗ್ಗಾನಟ್ಟಿ, ಉಮೇಶ ಮಾಗುಂಡನವರ, ಮಲ್ಲಿಕಸಾಬ ಬಾಗವಾನ, ಶ್ರೀಶೈಲ ಸಂಗಪ್ಪನವರ, ಗೋಪಾಲ ದಳವಾಯಿ, ವಿಕ್ರಮ ಇಂಗಳೆ, ನಿಖಿಲ ಪಾಟೀಲ, ಲಕ್ಕಪ್ಪ ಸನ್ನಿಂಗನವರ ಸೇರಿದಂತೆ ಅನೇಕ ಕಾಂಗ್ರೇಸ್ ಇದ್ದರು
ವರದಿ :ಈರಣ್ಣಾ ಹೂಲ್ಲೂರ, ಯರಗಟ್ಟಿ