Ad imageAd image

ವಿರುಪಾಕ್ಷಲಿಂಗ ಸಮಾಧಿಮಟ್ಟಕ್ಕೆ ಸಚಿವರಾದ ಸತಿ ಜಾರಕಿಹೊಳಿ ಇವರ ಭೇಟಿ.

Bharath Vaibhav
ವಿರುಪಾಕ್ಷಲಿಂಗ ಸಮಾಧಿಮಟ್ಟಕ್ಕೆ ಸಚಿವರಾದ ಸತಿ ಜಾರಕಿಹೊಳಿ ಇವರ ಭೇಟಿ.
WhatsApp Group Join Now
Telegram Group Join Now

ನಿಪ್ಪಾಣಿ:-ಜಿಲ್ಲಾ ಉಸ್ತುವರಿ ಹಾಗೂ ಲೋಕೋಪಯೋಗಿ ಇಲಾಖೆ ಸಚಿವ ಶ್ರೀ ಸತೀಶ ಜಾರಕಿಹೊಳಿ ಇಂದು ಬೆಳಗಾವಿ ಜಿಲ್ಲೆಯ ನಿಪ್ಪಾಣಿಯ ಶ್ರೀ ವಿರೂಪಾಕ್ಷಲಿಂಗ ಸಮಾಧಿ ಮಠಕ್ಕೆ ಭೇಟಿ ನೀಡಿದರು.

ಈ ಸಂದರ್ಭ ಶ್ರೀ ವಿರೂಪಾಕ್ಷಲಿಂಗ ಸಮಾಧಿ ಮಠದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ ದೇವರಿಗೆ ಆರತಿ ನೆರವೇರಿತು , ಶ್ರೀ ಪರಮಪೂಜ್ಯ ಪ್ರಾಣಲಿಂಗ ಮಹಾಸ್ವಾಮೀಜಿಯವರು ವಿವಿಧ ಬೇಡಿಕೆಗಳ ಈಡೇರಿಕೆಗೆ ಸಚಿವ ಜಾರಕಿಹೊಳಿಯವರನ್ನು ಒತ್ತಾಯಿಸಿದರು.

ಸಮಾಧಿ ಮಠ ಅಭಿವೃದ್ದಿ ಕೆಲಸಗಳ ಬಗ್ಗೆ ಹಾಗೂ ಗೋಶಾಲೆಯ ಆಧುನೀಕರಣ ಕಟ್ಟಡ ಕಾಮಗಾರಿಗಳ ಬಗ್ಗೆ, ಅನಾಥ ಮಕ್ಕಳ ವಸತಿ ಗೃಹ ಸೇರಿದಂತೆ ಇತರ ಕೆಲಸ ಕಾರ್ಯಗಳ ಬಗ್ಗೆ ಚರ್ಚೆಯನ್ನು ಮಾಡಿದರು.

ಈ ಸಂದರ್ಭದಲ್ಲಿ ಉದ್ಯಮಿಗಳಾದ ಸುರೇಶ ಶೆಟ್ಟಿ, ರಾಜ್ ಶೇಖರ್ ವಾಳವೆ, ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ, ಕಾಂಗ್ರೇಸ್ ಪಕ್ಷದ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ,ಕಾಂಗ್ರೆಸ್ ಪಕ್ಷದ ಮುಖಂಡರಾದ ಪಂಕಜ ಪಾಟೀಲ,ರಾಜಂದ್ರ ಪವಾರ, ರಾಜೇಶ ಕದಮ, ಪ್ರತೀಕ ಶಾ, ಮಹಾದೇವ ಕೌಲಾಪುರೆ, ಹಾಗೂ ಟ್ರಸ್ಟ್‌ವತಿಯಿಂದ ಮನವಿ ಸಲ್ಲಿಸಲಾಯಿತು. ಶ್ರೀ ವಿರೂಪಾಕ್ಷಲಿಂಗ ಸಮಾಧಿ ಮಠದ ಭಕ್ತರು ಉಪಸ್ಥಿತರಿದ್ದರು.

ವರದಿ :-ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!