Ad imageAd image

ಗ್ರಾಮೀಣ ದಸರಾ ಉತ್ಸಾಹಕ್ಕೆ ಚಾಲನೆ ನೀಡಿದ: ಸಚಿವ ಶರಣಬಸಪ್ಪ ದರ್ಶನಾಪುರ

Bharath Vaibhav
ಗ್ರಾಮೀಣ ದಸರಾ ಉತ್ಸಾಹಕ್ಕೆ ಚಾಲನೆ ನೀಡಿದ: ಸಚಿವ ಶರಣಬಸಪ್ಪ ದರ್ಶನಾಪುರ
WhatsApp Group Join Now
Telegram Group Join Now

ಸಿಂಧನೂರು : ಸೆ.23 ಸಿದ್ದಪರ್ವತ ಅಂಬಾ ಮಠದಲ್ಲಿ ಸಿಂಧನೂರು ದಸರಾ ಉತ್ಸವ ಸಮಿತಿ ಆಯೋಜಿಸಿರುವ ಗ್ರಾಮೀಣ ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಚಿವ ಶರಣಬಸಪ್ಪ ದರ್ಶನಾಪುರ, ಬಳಿಕ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ ವಿಜಯನಗರ ಅರಸರ ಕಾಲದಲ್ಲಿ ದಸರಾ ಉತ್ಸವ ಆರಂಭಗೊಂಡಿದ್ದು ಸಿಂಧನೂರು ತಾಲೂಕಿನಲ್ಲಿ ಮೈಸೂರು ದಸರಾ ಮಾದರಿಯ 11 ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಈ ಭಾಗದ ಸಂಸ್ಕೃತಿಗೆ ಬೆಲೆ ನೀಡದಂತಾಗಿದೆ ಅಂಬಾದೇವಸ್ಥಾನಕ್ಕೆ 400 ವರ್ಷಗಳ ಇತಿಹಾಸವಿದೆ ದೇಶಾದ್ಯಂತ ಭಕ್ತ ಸಮೂಹ ಒಂದಿದೆ
ನಮ್ಮ ಸಾಮಾಜಿಕ ಪರಿಕಲ್ಪನೆ ಬದಲಾಗಲೇಬೇಕು. ಎಲ್ಲರೂ ಶಿಕ್ಷಣ ಪಡೆಯಬೇಕು ರೈತರು ಕೃಷಿಯಲ್ಲಿ ತಂತ್ರಜ್ಞಾನ ಬಳಸಬೇಕು ಗ್ರಾಮೀಣ ಕಲೆ ಉಳಿಯಬೇಕು ಆರೋಗ್ಯ ಕಾಯ್ದುಕೊಳ್ಳಬೇಕು. ಗಿಡ ಮರ ಹೆಚ್ಚು ಹೆಚ್ಚು ಬೆಳೆಸಬೇಕು.

ಈ ನಿಟ್ಟಿನಲ್ಲಿ ಯೋಚಿಸಿಯೇ ನಾವು ಗ್ರಾಮೀಣ ದಸರಾ, ರೈತ ದಸರಾ, ಆರೋಗ್ಯ ದಸರಾ, ಶಿಕ್ಷಣ ದಸರಾ, ಹಸಿರು ದಸರಾ ಎಂದು ವಿನೂತನ ರೀತಿಯಲ್ಲಿ ದಸರಾ ಉತ್ಸವ ಆಯೋಜನೆ ಮಾಡಿದ್ದೇವೆ
ಸಿಂಧನೂರ ದಸರಾ ಉತ್ಸವವು ಎರಡನೇ ವರ್ಷಕ್ಕೆ ಕಾಲಿರಿಸಿ ಅದ್ದೂರಿಯಾಗಿ ನಡೆಯುತ್ತಿದೆ.

ಮೊದಲನೇ ವರ್ಷ ದಸರಾ ಕಾರ್ಯಕ್ರಮವು ಯಶಸ್ಸು ಕಂಡ ಬಳಿಕ ತಾಲೂಕಿನ ಎಲ್ಲ ಭಾಗದ ಜನರು ಸೇರಿ ಗ್ರಾಮೀಣ ಪ್ರದೇಶದ ಜೊತೆಗೆ ಸಿಂಧನೂರ ಸಿಟಿಯಲ್ಲಿ ದಸರಾ ಆಚರಣೆ ಆಗಬೇಕು ಎಂದು ನಿರ್ಧರಿಸಿ ಈ ಬಾರಿ ಗ್ರಾಮೀಣ ದಸರಾ ಎಂದು ಐದು ದಿನಗಳ ಕಾಲ ಗ್ರಾಮಗಳಲ್ಲಿ ಕೂಡ ದಸರಾ ಕಾರ್ಯಕ್ರಮ ಮಾಡುತ್ತಿದ್ದೇವೆ. ಸಿಂಧನೂರ ಸೇರಿದಂತೆ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಉತ್ಸವದ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳ ವೀಕ್ಷಣೆ‌ ಮಾಡಬೇಕು ಎಂದು ಸಮಾರಂಭದ ಮೂಲಕ ಮನವಿ ಮಾಡಿದರು. ಬಸವರಾಜ ಅಂಗಡಿ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ಕೊಪ್ಪಳ ಸಂಸದ ರಾಜಶೇಖರ್ ಹಿಟ್ನಾಳ್. ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್. ವಿಧಾನ ಪರಿಷತ್ ಸದಸ್ಯ ಎ.ವಸಂತ್ ಕುಮಾರ್. ಮಾಜಿ ಸಂಸದ ಕೆ. ವಿರುಪಾಕ್ಷಪ್ಪ. ಜೆಡಿಎಸ್ ತಾಲೂಕ ಅಧ್ಯಕ್ಷ ಬಸವರಾಜ ನಾಡಗೌಡ. ತಾಸಿಲ್ದಾರ್ ಅರುಣ್ ಎಚ್. ದೇಸಾಯಿ. ತಾ
ಪಂ ಈಒ. ಚಂದ್ರಶೇಖರ್. ಅಂಬ ದೇವಸ್ಥಾನ ಸಮಿತಿ ಅಧ್ಯಕ್ಷ ರಂಗನಗೌಡ ಗೊರೆಬಾಳ. ದಸರಾ ಉತ್ಸವ ಪ್ರ. ಕಾರ್ಯದರ್ಶಿ ಎಸ್. ದೇವೇಂದ್ರ ಗೌಡ. ಸೇರಿದಂತೆ ಇನ್ನು ಅನೇಕ ಇದ್ದರು

ವರದಿ : ಬಸವರಾಜ ಬುಕ್ಕನಹಟ್ಟಿ. 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!