Ad imageAd image

ಎಫ್‌ಆರ್‌ಪಿ ದರ ಮರುಪರಿಶೀಲನೆಗೆ ಸಚಿವ ತಿಮ್ಮಾಪೂರ ಒತ್ತಾಯ 

Bharath Vaibhav
ಎಫ್‌ಆರ್‌ಪಿ ದರ ಮರುಪರಿಶೀಲನೆಗೆ ಸಚಿವ ತಿಮ್ಮಾಪೂರ ಒತ್ತಾಯ 
WhatsApp Group Join Now
Telegram Group Join Now

ಬಾಗಲಕೋಟೆ: ಕಬ್ಬು ಬೆಳೆಗಾರರಿಗೆ ಮಾರಕವಾಗಿರುವ ಎಫ್‌ಆರ್‌ಪಿ ಬೆಲೆ ನಿಗದಿ ಮರುಪರಿಶೀಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರ ಒತ್ತಾಯಿಸಿದ್ದಾರೆ‌.

ಶೇ9.5 ಇಳುವರಿಗೆ ಇದ್ದ ಎಫ್‌ಆರ್‌ಪಿ ನಿಗದಿಯನ್ನು ಶೇ10.25ರಷ್ಟಕ್ಕೆ ಹೆಚ್ಚಿಸಿರುವುದು ಅವೈಜ್ಞಾನಿಕವಾಗಿದ್ದು, ರೈತರ ಹಿತಾಸಕ್ತಿ ಮಾರಕವಾಗಿದೆ.

ಇದರಿಂದ ಕಬ್ಬು ಬೆಳೆಗಾರರಿಗೆ ಅನ್ಯಾಯವಾಗುತ್ತಿದೆ. ಕೂಡಲೇ ಹಿಂದಿನ ಇಳುವರಿಯನ್ನೇ ಪರಿಗಣಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದ್ದಾರೆ.

ಎಥೆನಾಲ್ ಕೋಟಾ ಹಂಚಿಕೆಯಲ್ಲೂ ಗಮನಾರ್ಹ ವ್ಯತ್ಯಾಸವಿದೆ‌. ಮಹಾರಾಷ್ಟ್ರ ರಾಜ್ಯಕ್ಕೆ ಶೇ12.4 ಮತ್ತು ಉತ್ತರ ಪ್ರದೇಶ ರಾಜ್ಯಕ್ಕೆ ಶೇ15.3 ರಷ್ಟಿದೆ, ಕರ್ನಾಟಕಕ್ಕೆ ಶೇ11.1ರಷ್ಟಿದ್ದು, ಬೇರೆ ರಾಜ್ಯಗಳಿಗೆ ಹೆಚ್ಚಿದ್ದು, ಕರ್ನಾಟಕಕ್ಕೆ ಕಡಿಮೆ ಇದೆ. ಈ ವ್ಯತ್ಯಾಸವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!