
ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲೂಕಿನ ತೊದಲಬಾಗಿಯ ಗ್ರಾಮದ ಪ್ರಾಥಮಿಕ ಕೃಷಿ
ಪತ್ತಿನ ಸಹಕಾರ ಸಂಘ {ಹೋಸದು}ರಲ್ಲಿ ಭಾರಿ ಅವ್ಯವಹಾರ ನಡೆದಿದೆ. ಹಿಂದಿನ ಅಧ್ಯಕ್ಷ ಮತ್ತು ಕಾರ್ಯದರ್ಶಿ ಸಂಬಂಧಿಕರು, ಸಿಬ್ಬಂದಿಗಳಿಗೆ ಲಕ್ಷ ಲಕ್ಷಗಟ್ಟಲೆ ಬೆಳೆ ಸಾಲ ನೀಡಿದ್ದಾರೆ.
ಬೇರೆ ರೈತರಿಗೆ ಮಾತ್ರ ಎಲ್ಲ ನಿಯಮಗಳನ್ನು ಕೇಳುವ ಮೂಲಕ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಅವ್ಯವಹಾರ ಮಾಡಿ ಸಹಕಾರ ಹಣ ಮತ್ತು ಸಂಘದ ಹಣ ದುರುಪಯೋಗ ಮಾಡಿದ್ದಾರೆ.

ನ್ಯಾಯ ಬದ್ಧವಾಗಿ ಕೆಲಸ ಮಾಡದೆ ನಿಯಮಬಾಹಿರವಾಗಿ ಕೆಲಸ ಮಾಡುತ್ತಾ ಸಾರ್ವಜನಿಕ ಸೇವಾ ಸ್ಥಾನದಲ್ಲಿದು ನಿಯಮ ಬಾಹಿರವಾಗಿ ಅಥವಾ ತಮ್ಮ ಆ ಸ್ಥಾನವನ್ನು ಉಪಯೋಗಿಸಿಕೊಂಡು ನಿಯಮಕ್ಕಿಂತ ಹೆಚ್ಚಿನ ಅಥವಾ ತಮಗೆ ಸಲ್ಲಬೇಕಾದುದಕ್ಕಿಂತ ಹೆಚ್ಚಿನ ಸೌಲಭ್ಯ ಪಡೆದುಕೊಂಡು ತಮ್ಮ ಅಧಿಕಾರವನ್ನು ನಿಯಮಕ್ಕೆ ವಿರುದ್ಧವಾಗಿ ಸ್ವಂತ ಉಪಯೋಗಕ್ಕೆ ಬಳಸಿಕೊಂಡಿದ್ದಾರೆಂದು ಎಂದು ಆರೋಪಿಸಿದ ಅಪ್ಪಾಸಿ ಬೋರಗಾಂವಕರ (ಸೂರ್ಯವಂಶಿ) ಆರೋಪಿಸಿದ್ದಾರೆ.
ವರದಿ: ಬಂದೇನವಾಜ ನದಾಫ




