ರಾಯಚೂರು : ರಾಯಚೂರಿನಲ್ಲಿ KSRTC ಸೇರಿ 40 ಕ್ಕೂ ಹೆಚ್ಚು ಬಸ್ ಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ ದರೋಡೆಗೆ ಯತ್ನಿಸಿದ ಘಟನೆ ನಡೆದಿದೆ.
ಬೀದರ್ ನಿಂದ ಬಳ್ಳಾರಿಗೆ ಹೋಗುವ ಮಾರ್ಗದ ಮಧ್ಯೆ ಸುಮಾರು 20 ಕ್ಕೂ ಜನರಿದ್ದ ಗುಂಪು 20 ಸಾರಿಗೆ ಬಸ್, 20 ಖಾಸಗಿ ಬಸ್ ಗಳ ಗಾಜಿನ ಮೇಲೆ ಕಲ್ಲು ತೂರಾಟ ನಡೆಸಿದೆ.
ರಾತ್ರಿ ವೇಳೆ ಟೆಂಪೋ, ಲಾರಿ, ಕಾರು ಸೇರಿದಂತೆ ಸಿಕ್ಕ ಸಿಕ್ಕ ವಾಹನಗಳ ಮೇಲೆ ಕಲ್ಲು ತೂರಲಾಗಿದೆ. ದುಷ್ಕರ್ಮಿಗಳ ಗುಂಪು ಕಲ್ಲು ತೂರಿ ಚಿನ್ನಾಭರಣ, ಹಣ ದರೋಡೆ ಮಾಡಲು ಯತ್ನಿಸಿತ್ತು ಎನ್ನಲಾಗಿದೆ.
ಆದರೆ ಯಾವ ವಾಹನಗಳು ಕೂಡ ವಾಹನ ನಿಲ್ಲಿಸದೇ ತೆರಳಿದ್ದರಿಂದ ದರೋಡೆಕೋರರ ಯತ್ನ ವಿಫಲವಾಗಿದೆ. ಘಟನೆ ಕುರಿತು ಪೊಲೀಸರಿಗೆ ಕೂಡ ಸುದ್ದಿ ಮುಟ್ಟಿಸಲಾಗಿದೆ.