ಮೈಸೂರು : ಗಾಯಾಳುವನ್ನು ಆಸ್ಪತ್ರೆಗೆ ಸೇರಿಸುವ ನೆಪದಲ್ಲಿ ಹಣ ಟ್ರಾನ್ಸ್ಫರ್ ಮಾಡಿಕೊಂಡಿದ್ದ ವ್ಯಕ್ತಿಗಳು ಮೈಸೂರು ಪೊಲೀಸರ ಅತಿಥಿಯಾಗಿದ್ದಾರೆ.
ಅಪಘಾತವಾಗಿ ಬಿದಿದ್ದ ವ್ಯಕ್ತಿಯ ಮೊಬೈಲ್‌ನಿಂದ 80,000 ಸಾವಿರ ರೂ. ಹಣ ಕದ್ದಿದ್ದ ಆರೋಪಿಗಳು ಎಸ್ಕೇಪ್ ಆಗಿದ್ದರು.ಆರೋಪಿಗಳ ಬೆನ್ನತ್ತಿದ ಪೊಲೀಸರು ರಮೇಶ್ ಹಾಗೂ ಮನು ಎಂಬಾತನನ್ನು ಬಂಧಿಸಿದ್ದಾರೆ.
ಮೈಸೂರು ತಾಲೂಕಿನ ಕಡಕೊಳದ ಬಳಿ ಡಿ.19 ರಂದು ಗಣೇಶ್ ಎಂಬುವರು ಫ್ಯಾಕ್ಟರಿಯಲ್ಲಿ ಕೆಲಸ ಮುಗಿಸಿ ಮಧ್ಯರಾತ್ರಿ ಮನೆಗೆ ಬರುವಾಗ ಅಪಘಾತವಾಗಿತ್ತು. ಆಸ್ಪತ್ರೆಗೆ ಸೇರಿಸುವ ನೆಪದಲ್ಲಿ ಬಂದ ರಮೇಶ ಮತ್ತು ಮನು, ಗಣೇಶ್ ಮೊಬೈಲ್ ತೆಗೆದುಕೊಂಡು UPI ಮೂಲಕ 80 ಸಾವಿರ ರೂ. ಹಣ ವರ್ಗಾವಣೆ ಮಾಡಿಕೊಂಡು ಆಸ್ಪತ್ರೆಗೆ ಸೇರಿಸದೇ ಪರಾರಿ ಆಗಿದ್ದರು.
ಹಣ ಹೋಗಿರುವ ಬಗ್ಗೆ ಗಣೇಶ್ ಸಹೋದರ ದೂರು ದಾಖಲಿಸಿದ್ದರು. ಹಣ ವರ್ಗಾವಣೆ ಮಾಹಿತಿಗ ಸಂಗ್ರಹಿಸಿ ಮೈಸೂರಿನ ಮಹದೇವಪುರದ ನಿವಾಸಿಗಳಾದ ರಮೇಶ ಮತ್ತು ಮನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಬಂಧಿತರಿಂದ 80 ಸಾವಿರ ಹಣ ಹಾಗೂ ಎರಡು ಮೊಬೈಲ್ ವಶಕ್ಕೆ ಪಡೆಯಲಾಗಿದೆ.




