ತುಮಕೂರು:ಜೆಡಿಎಸ್ ಪಕ್ಷದ ಸದಸ್ಯತ್ವವನ್ನು ಮಿಸ್‌ಕಾಲ್ ನೀಡುವುದರ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ನೊಂದಾಯಿಸಿಕೊಳ್ಳಿ ಎಂದು ಜೆಡಿಎಸ್ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ
ತುಮಕೂರು ಜಿಲ್ಲೆಯ ಪಾವಗಡ ತಾಲೂಕು ಪಾವಗಡ ಪಟ್ಟಣದ ದಿನಾಂಕ,17/06/25 ಮಂಗಳವಾರ ಆಂಜನೇಯ ಶೆಟ್ಟಿ ಕಲ್ಯಾಣ ಮಂಟಪದ ಆವರಣದಲ್ಲಿ ಮಂಗಳವಾರ ಜಾತ್ಯತೀತ ಜನತಾದಳ ಪಕ್ಷದ ವತಿಯಿಂದ ಜನರೊಂದಿಗೆ ಜನತಾದಳ ಎಂಬ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಂಡಿದ್ದ ಜೆಡಿಎಸ್ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಮಾತನಾಡಿ, ಪಾವಗಡ ವಿಧಾನಸಭಾ ಕ್ಷೇತ್ರವು ಒಂದು ಮೀಸಲು ಕ್ಷೇತ್ರವಾಗಿದೆ. ಇಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯ ಹೆಚ್ಚಿನ ಸಂಖ್ಯೆಯನ್ನು ಹೊಂದಿದೆ.

ಈ ರಾಜ್ಯದ ಮುಖ್ಯಮಂತ್ರಿಗಳು ವಾಲ್ಮೀಕಿ ನಿಗಮಕ್ಕೆ ಮೀಸಲಿಟ್ಟ ಅನುದಾನವನ್ನು ಪಕ್ಕದ ರಾಜ್ಯದ ತೆಲಂಗಾಣದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಬಳಸಿಕೊಂಡು ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ. ಎಂದು ತಿಳಿಸಿ ನಂತರ ಪಕ್ಷ ಬಲಪಡಿಸುವುದರ ಮೂಲಕ ಜೆಡಿಎಸ್ ಪಕ್ಷದ ಸದಸ್ಯತ್ವವನ್ನು ಪಡೆಯಲು 9964002028 ಈ ಸಂಖ್ಯೆಗೆ ಮಿಸ್ ಕಾಲ್ ನೀಡುವುದರ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ನೊಂದಾಯಿಸಿಕೊಳ್ಳಿ ಎಂದು ಹೇಳುತ್ತಾರೆ.
ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಕೆ ಎಂ ತಿಮ್ಮರಾಯಪ್ಪ ಮಾತನಾಡಿ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕಾಲದಲ್ಲಿ ಪಾವಗಡ ತಾಲೂಕಿಗೆ ಹೆಚ್ಚಿನ ಅನುದಾನ ನೀಡಿದ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿ 10 ಪ್ರೌಢ ಶಾಲೆಗಳನ್ನು ಬಸ್ ಡಿಪೋ ಸ್ಥಾಪನೆ ಮಾಡಲಾಯಿತು ಎಂದು ತಿಳಿಸಿದರು.
ಈ ವೇಳೆಯಲ್ಲಿ ಜಿಲ್ಲಾಧ್ಯಕ್ಷ ಆರ್‌ಸಿ ಅಂಜನಪ್ಪ, ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ, ತಾಲ್ಲೂಕು ಅಧ್ಯಕ್ಷ ಎನ್.ಎ. ಈರಣ್ಣ ರಾಜ್ಯ ಹಿಂದುಳಿದ ವರ್ಗದ ಸಮಿತಿ ಅಧ್ಯಕ್ಷ ಬಲರಾಮರೆಡ್ಡಿ, ಗೌರವಾಧ್ಯಕ್ಷ ರಾಜಶೇಖರಪ್ಪ, ಪ್ರಧಾನ ಕಾರ್ಯದರ್ಶಿ ಸೊಗಡು ವೆಂಕಟೇಶ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರುಗಳರಾದ. ಚನ್ನಮಲ್ಲಯ್ಯ. ಕೊಡಗುಡ್ಡ ಅಂಜನಪ್ಪ. ಕೊತ್ತೂರು ನಾಗೇಶ್, ಕೆಂಚಗನಹಳ್ಳಿ ಗೋವಿಂದಪ್ಪ, ಎಸ್ ಕೆ ರೆಡ್ಡಿ. ಮಂಜುನಾಥ್ ಚೌದರಿ. ರವೀಂದ್ರ ರೆಡ್ಡಿ ಬಿಕೆಹಳ್ಳಿ. ರೈತ ಘಟಕದ. ಗಂಗಾಧರ ನಾಯ್ಡು ಮಂಜುನಾಥ್ ಬೋರ್ ವೆಲ್. ಸುರೇಂದ್ರ ತಿರುಮಣಿ. ಮನು ಮಹೇಶ್. ಮಣಿ ಗುಟ್ಟಹಳ್ಳಿ. ಗೋಪಾಲ ಆ ಬಂಡೆ. ಮುತ್ಯಾಲಪ್ಪ.ವಲ್ಲೂರು ನರಸಿಂಹ ವಲ್ಲೂರ್ ಇನ್ನೂ ಮುಂತಾದ ಪಕ್ಷದ ಮುಖಂಡರುಗಳು ಹಾಗೂ ಕಾರ್ಯಕರ್ತರು ಹಾಜರಿದ್ದರು.
ವರದಿ:ಶಿವಾನಂದ




