ಬೆಂಗಳೂರು : ಅಭಿಮಾನಿಗಳ ಪಾಲಿನ ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ರಿಗೆ ಆರೋಗ್ಯ ಸಮಸ್ಯೆ ಉಂಟಾಗಿರುವ ಕಾರಣ ಚಿಕಿತ್ಸೆಗಾಗಿ ಅಮೆರಿಕಾಗೆ ತೆರಳಬೇಕಿದ್ದು ಇಂದು ವಿದೇಶಕ್ಕೆ ಹೊರಟಿದ್ದಾರೆ.ಹೀಗೆ ಹೊರಡುವ ಮುನ್ನ ಮಾತನಾಡಿದ ಶಿವಣ್ಣ ಭಾವುಕರಾಗಿದ್ದಾರೆ.
ಈ ಬಗ್ಗೆ ಮಾತನಾಡಿದ ಶಿವಣ್ಣ, ಸಮಸ್ಯೆಗಳು ಎಲ್ಲರಿಗೂ ಇದ್ದೇ ಇದೆ. ಆ ಬಗ್ಗೆ ಮಾತನಾಡುವಾಗ ನಾವು ಕೂಡ ಸ್ವಲ್ಪ ಸಹಜವಾಗಿಯೇ ಎಮೋಷನಲ್ ಆಗುತ್ತೇವೆ. ನಾವು ಹೊರಡುವ ಮುನ್ನ ಇಲ್ಲಿ ಪರೀಕ್ಷೆ ಮಾಡಿಸಿದಾಗ ಎಲ್ಲವೂ ಸರಿಯಿದೆ.ಆದರೂ ಒಂದು ಆತಂಕ ಇದ್ದೇ ಇರುತ್ತದೆ ಎಂದಿದ್ದಾರೆ.
ಡಿಸೆಂಬರ್ 24ರಂದು ಸರ್ಜರಿ ನಡೆಯಲಿದ್ದು, ಸುಮಾರು 35 ದಿನ ಮನೆಯಿಂದ, ಭಾರತದಿಂದ ಹೊರಗೆ ಇರಬೇಕಾಗಿ ಬಂದಿರುವುದು ಬೇಸರದ ಸಂಗತಿ. ನಾನು ಆತ್ಮವಿಶ್ವಾಸದಿಂದ ಇದ್ದೇನೆ.ಎಲ್ಲರ ಹಾರೈಕೆ ಇದೆ.
ಅಭಿಮಾನಿಗಳು ಮತ್ತು ಮಾಧ್ಯಮದವರು ಕಾಳಜಿ ತೋರಿಸಿದ್ದಾರೆ ಎಂದು ಹೇಳಿದ್ದಾರೆ.ನನಗೆ ಆರೋಗ್ಯ ಸಮಸ್ಯೆ ಇದೆ ಎಂಬುದು ಗೊತ್ತಿದ್ದರೂ ಕೂಡ ನಮ್ಮ ಮಾಧ್ಯಮಗಳು ಆ ವಿಷಯವನ್ನು ವೈಭವಿಕರಿಸಿಲ್ಲ. ಇದು ನನಗೆ ಖುಷಿ ಕೊಟ್ಟಿದೆ. ಅಷ್ಟು ಪ್ರೀತಿ ಮತ್ತು ಗೌರವ ನನ್ನ ಮೇಲೆ ಇಟ್ಟಿದ್ದಾರೆ ಎಂದು ಶಿವಣ್ಣ ಸಂತಸ ವ್ಯಕ್ತಪಡಿಸಿದ್ದಾರೆ.