ಗೋಕಾಕ : ವಿವಿದ ಬೇಡಕಿಗಳಿಗಾಗಿ ರಾಜ್ಯಾಧಂತ ಸಾರಿಗೆ ನೌಕರರು ಅನಿರ್ದಿಷ್ಟಾವದಿ ಬಸ್ ಬಂದ ಮುಷ್ಕರ ಮಾಡಿದ ಹಿನ್ನೆಲೆಯಲ್ಲಿ ಗೋಕಾಕದಲ್ಲಿಲ್ಲ ಮುಷ್ಕರಕ್ಕೆ ಬೆಂಬಲ
ಎಂದಿನಂತೆ ಗೋಕಾಕದಲ್ಲಿ ಸಾರಿಗೆ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಿದ್ದಾರೆ, ಇನ್ನು ಯಾವುದೆ ರೀತಿ ಅಹಿತಕರ ಘಟನೆ ನಡೆಯದಂತೆ ಬಸ್ ನಿಲ್ದಾಣದಲ್ಲಿ ಮತ್ತು ಡಿಫೊ ಗೇಟ ಬಳಿಯಲ್ಲಿ ಪೋಲಿಸರ ಬಂದೊ ಬಸ್ತ ಎರ್ಪಡಿಸಲಾಗಿದೆ.
ಅದರ ಜೊತೆಯಲ್ಲಿ 65 ಬಸ್ದುಗಳಲ್ಲಿ ಕೇವಲ 29 ಬಸ್ಸುಗಳು ಸಂಚಾರದಲ್ಲಿವೆ ಮತ್ತು ಹೊರಗಿನ ಡೀಪೊದಿಂದ ಬರಬೇಕಾದ 257 ಬಸ್ಸುಗಳಲ್ಲಿ 101 ಬಸ್ಸುಗಳು ಬಂದು ಹೋಗಿವೆ ಎಂದು ಸ್ಥಳಿಯ ಗೋಕಾಕ ಡೀಪೊ ಮ್ಯಾನೆಜರ ಮೌಖಿಕವಾಗಿ ಮಾಹಿತಿ ನೀಡಿದ್ದಾರೆ.
ಮುಷ್ಕರದ ಹಿನ್ನೆಲೆಯಲ್ಲಿ ಗೋಕಾಕದಲ್ಲಿ 44 ℅ ಸಿಬ್ಬಂದಿಗಳು ಹಾಜರಿದ್ದು ಇನ್ನುಳಿದ ಗೋಕಾಕ ಡೀಪೊಗೆ ಸೇರಿದ ಸಾರಿಗೆ ಸಿಬ್ಬಂದಿಗಳು ಹಾಜರಾಗದೆ ಮುಷ್ಕರಕ್ಕೆ ಬೆಂಬಲ ನೀಡಿದ್ದಾರೆಂದು ತಿಳಿದು ಬಂದಿದೆ.
ಒಟ್ಟಾರೆಯಾಗಿ ಗೋಕಾಕದಲ್ಲಿ ಬಾಯಲ್ಲಿ ಮಾತ್ರ ಮುಷ್ಕರ ಎಂದು ಹೇಳುತಿದ್ದಾರೆ ಹೊರತು ಬಹಿರಂಗವಾಗಿ ಯಾರೂ ಕೂಡ ಎಸ್ಮಾ ಜಾರಿಯಾದ ಕಾರಣ ಮುಂದೆ ಬರುತ್ತಿಲ್ಲ ಎಂದು ಕಾಣುತ್ತಲಿದೆ.
ವರದಿ : ಮನೋಹರ ಮೇಗೆರಿ




