ತುರುವೇಕೆರೆ: ತಾಲೂಕಿನ ಮಾಯಸಂದ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಂ.ಎಲ್. ಲೋಕೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಹಿಂದಿನ ಅಧ್ಯಕ್ಷರಾಗಿದ್ದ ಪಂಚಾಕ್ಷರಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು. 12 ನಿರ್ದೇಶಕ ಬಲವುಳ್ಳ ಸಂಘದಿಂದ ಅಧ್ಯಕ್ಷ ಸ್ಥಾನಕ್ಕೆ ಎಂ.ಎಲ್.ಲೋಕೇಶ್ ರವರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ಏಕೈಕ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಮಾಯಸಂದ್ರ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಂ.ಎಲ್.ಲೋಕೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ, ಸಹಕಾರ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಘೋಷಿಸಿದರು. ನೂತನ ಅಧ್ಯಕ್ಷರ ಆಯ್ಕೆ ಘೋಷಣೆಯಾಗುತ್ತಿದ್ದಂತೆ ಬೆಂಬಲಿಗರು, ಅಭಿಮಾನಿಗಳು, ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ನೂತನ ಅಧ್ಯಕ್ಷ ಎಂ.ಎಲ್.ಲೋಕೇಶ್ ರವರು ಮಾತನಾಡಿ, ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಲು ಸಹಕರಿಸಿದ ಸರ್ವ ನಿರ್ದೇಶಕರುಗಳಿಗೆ ಮತ್ತು ಸಹಕರಿಸಿದ ಸರ್ವರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಮ್ಮ ಸಂಘದ ಎಲ್ಲಾ ನಿರ್ದೇಶಕರ ಜೊತೆಗೂಡಿ ಸಂಘದ ವ್ಯಾಪ್ತಿಯಲ್ಲಿನ ಎಲ್ಲಾ ಹಳ್ಳಿಗಳ ರೈತರುಗಳಿಗೆ ಮತ್ತು ಸಹಕಾರ ಸಂಘದ ಶ್ರೇಯೋಭಿವೃದ್ಧಿಗಾಗಿ, ಸಂಘದ ಏಳಿಗೆಗಾಗಿ ಶ್ರಮಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ತೆಂಗು ಅಡಿಕೆ ಬೆಳೆಗಾರ ಸಂಘದ ಅಧ್ಯಕ್ಷ ಜಯರಾಮ್, ಮಾಯಸಂದ್ರ ಗ್ರಾಪಂ ಅಧ್ಯಕ್ಷ ಚಂದ್ರ, ಉಪಾಧ್ಯಕ್ಷೆ ಜಯಮ್ಮ, ಸಂಘದ ನಿರ್ದೇಶಕರುಗಳಾದ ಜವರೇಗೌಡ, ನಟರಾಜು, ಶ್ಯಾಮಲ, ಅಶೋಕ್ ಕುಮಾರ್, ಗಿರಿಧರ್, ವಾಸು, ಗಂಗಯ್ಯ, ನಂದೀಶ್, ಸಿಇಒ ಮಮತಾ , ಗ್ರಾಪಂ ಮಾಜಿ ಅಧ್ಯಕ್ಷರಾದ ಪಂಚಾಕ್ಷರಿ, ಶ್ರೀನಿವಾಸ್ (ಕಾಳಿ). ಸ್ಥಳೀಯ ಮುಖಂಡರಾದ ಸುಬ್ರಹ್ಮಣ್ಯ ಕುಮಾರ್, ಸಿದ್ದೇಗೌಡ, ರಾಜೀವ್, ಹರ್ಷಿತ್ ಜೈನ್ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ಯುವ ಮುಖಂಡರುಗಳು. ಪದಾಧಿಕಾರಿಗಳು, ಗ್ರಾಮಸ್ಥರು, ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದು ನೂತನ ಅಧ್ಯಕ್ಷರಿಗೆ ಶುಭ ಹಾರೈಸಿದರು.
ವರದಿ : ಗಿರೀಶ್ ಕೆ ಭಟ್




