Ad imageAd image

ಶಾಸಕ ಎ.ಆರ್. ಕೃಷ್ಣಮೂರ್ತಿ ರವರಿಂದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜು ಕ್ರೀಡಾಕೂಟ ಉದ್ಘಾಟನೆ.

Bharath Vaibhav
ಶಾಸಕ ಎ.ಆರ್. ಕೃಷ್ಣಮೂರ್ತಿ ರವರಿಂದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜು ಕ್ರೀಡಾಕೂಟ ಉದ್ಘಾಟನೆ.
WhatsApp Group Join Now
Telegram Group Join Now

ಯಳಂದೂರು:-ಕ್ರೀಡೆಯಿಂದ ವಿದ್ಯಾರ್ಥಿಗಳಿಗೆ ಮನೋಶಕ್ತಿ ಹಾಗೂ ದೈಹಿಕ ಶಕ್ತಿ ಹೆಚ್ಚಿಸುತ್ತದೆ ಎಂದು ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕ ಎ.ಆರ್. ಕೃಷ್ಣಮೂರ್ತಿರವರು ತಿಳಿಸಿದರು.ಸಂತೆಮರಳ್ಳಿಯ ಜೆಎಸ್ಎಸ್ ಮಹಿಳಾ ಪದವಿ ಪೂರ್ವ ಕಾಲೇಜು ಆವರಣದಲ್ಲಿ 2024ನೇ ಸಾಲಿನ ಯಳಂದೂರು ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟವನ್ನು ಸಾಲ ಶಿಕ್ಷಣ ಇಲಾಖೆ ಹಾಗೂ ಜೆಎಸ್ಎಸ್ ಕಾಲೇಜು ಇವರ ಸಹಯೋಗದೊಂದಿಗೆ ನಡೆಸಲಾಯಿತು

ಕ್ರೀಡಾಕೂಟ ಉದ್ಘಾಟಿಸಿ ಶಾಸಕ ಎ.ಆರ್. ಕೃಷ್ಣಮೂರ್ತಿ ಮಾತನಾಡಿ ವಿದ್ಯಾರ್ಥಿ ಜೀವನದಲ್ಲೇ ಅಲ್ಲ ಪ್ರತಿಯೊಬ್ಬರೂ ಕೂಡ ದೈಹಿಕವಾಗಿ,ಸಮರ್ಥವಾಗಿ ದೇಹವನ್ನು ದಂಡಿಸಿಕೊಂಡು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಕ್ರೀಡೆ ಮಹತ್ವವಾದದ್ದು,

ಕ್ರೀಡಾಪಟುಗಳು ಯಾವ ರೀತಿ ಕ್ರೀಡೆಯ ಮೇಲೆ ಗಮನ ಕೊಡುತ್ತೀರಿ ಅದೇ ರೀತಿ ಕ್ರೀಡೆಗೆ ಸಂಬಂಧ ಪಟ್ಟಂತೆ ಭಾರತದಲ್ಲಿ ಅಥ್ಲೆಟಿಕ್ಸ್ ನಲ್ಲಿ ಏಷ್ಯಾ ದಲ್ಲೇ ಹೆಚ್ಚು ಪದಕಗಳನ್ನು ಪಡೆದರು, ಒಲಂಪಿಕ್ಸ್ ನಲ್ಲೂ ಪ್ರಯತ್ನಪಟ್ಟರು ಆದರೆ ಚಿನ್ನವನ್ನು ಗೆಲ್ಲುವುದಕ್ಕೆ ನಾವು ಸಾಧ್ಯವಾಗಲಿಲ್ಲ ಏಕೆಂದರೆ ಅದು ಜಗತ್ತಿನ ಕ್ರೀಡೆ, ಹಾಗಾಗಿ ಕೆಲವು ಕ್ರೀಡೆಗಳಲ್ಲಿ ನಮ್ಮ ದೇಶದ ಕ್ರೀಡಾಪಟುಗಳು ಜಯಗಳಿಸಿದ್ದು ನಮ್ಮ ದೇಶಕ್ಕೆ ಹೆಮ್ಮೆಯನ್ನು ತಂದುಕೊಟ್ಟಿದ್ದಾರೆ ಅದಕ್ಕೆ ಪ್ರಧಾನಮಂತ್ರಿಗಳು ಅವರಿಗೆ ಗೌರವವನ್ನು ಸಲ್ಲಿಸಿದ್ದಾರೆ, ಅದೇ ರೀತಿ ನೀವು ಕೂಡ ಇವತ್ತಿನ ಈ ಕ್ರೀಡಾಕೂಟದಲ್ಲಿ ಪಿಯು ವಿದ್ಯಾರ್ಥಿಗಳು ನೀವು ಸಾಂಕೇತಿಕವಾಗಿ ಕ್ರೀಡಾಕೂಟದಲ್ಲಿ ಭಾಗವಹಿಸುವುದಿಲ್ಲ, ಪರಿಪೂರ್ಣವಾದ ನಿಟ್ಟಿನಲ್ಲಿ ತಾವು ತಮ್ಮ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುವ ಮುಖಾಂತರ ಉತ್ತಮ ಕ್ರೀಡಪಟವಾಗಿ ನಿಮ್ಮ ಕಾಲೇಜಿಗೆ ತಾವು ಭಾಗಿಯಾಗ ಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಉಪನಿರ್ದೇಶಕರಾದ ಸಿ ಮಂಜುನಾಥ ಪ್ರಸನ್ನ,ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಕಾಂತರಾಜು, ಪ್ರಾಂಶುಪಾಲರಾದ ವಿಜಯ ಹನೂರು,ಎಲ್.ಮಹೇಶ್,ಕೆ.ಪಿ.ನಂದಿನಿ, ಗ್ಯಾರೆಂಟಿ ಯೋಜನೆ ಅನುಷ್ಠಾನದ ಅಧ್ಯಕ್ಷರಾದ ಎಚ್.ವಿ.ಚಂದ್ರು, ತಾಲೂಕು ಸರ್ಕಾರಿ ನೌಕರ ಸಂಘದ ಖಜಾಂಚಿ ಸಲೀನ, ದೈಹಿಕ ಶಿಕ್ಷಕರಾದ ಮಹದೇವ್, ಅಧ್ಯಕ್ಷರಾದ ಮುರುಳಿ, ಪಟ್ಟಣ ಪಂಚಾಯತಿ ಸದಸ್ಯರು ಅಧಿಕಾರಿಗಳು,ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ವರದಿ : ಸ್ವಾಮಿ ಬಳೇಪೇಟೆ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!