ರಾಮದುರ್ಗ : ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಹೊರವಲಯದಲ್ಲಿದ್ದ ಮುಸ್ಲಿಂ ಸಮಾಜದ ಇದಗಾ ಹತ್ತಿರ ಇರುವ ಅಂಜುಮನ್ ಇಸ್ಲಾಂ ಕಮಿಟಯ ಖೋಲಾ ಜಾಗೆಯಲ್ಲಿ ಅಂಜುಮನ್ ಇಸ್ಲಾಂ ಕಮಿಟಿ ವತಿಯಿಂದ ನಿರ್ಮಿಸಲಾಗುತ್ತಿರುವ ಸಮುದಾಯ ಭವನ (ಶಾದಿಮಹಲ್) ಕಟ್ಟಡಕ್ಕೆ ಕರ್ನಾಟಕ ಸರ್ಕಾರ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಅನುದಾನದ
40ಲಕ್ಷ ರೊಪಾಯಿ ವೆಚ್ಚದಲ್ಲಿ ಕಾಮಗಾರಿ ಕರ್ನಾಟಕ ಸರಕಾರದ ಮುಖ್ಯ ಸಚೇತಕ್ ಹಾಗೂ ರಾಮದುರ್ಗ ಕ್ಷೇತ್ರದ ಶಾಸಕ ಅಶೋಕ್ ಪಟ್ಟಣ ಭೂಮಿ ಪೂಜೆ ನೇರವರಿಸಿ ನಂತರ ಸುದ್ಧಿಗಾರರ ಜೊತೆ ಮಾತನಾಡಿದರು.
ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ ಸದ್ಬಳಕೆಯನ್ನು ಮಾಡಕೊಳ್ಳಿ.
ಅಲ್ಪಸಂಖ್ಯಾತ ಮುರಾರ್ಜಿ ವಸತಿ ಶಾಲೆ ಶೀಘ್ರದಲ್ಲಿ ಕಟ್ಟಡ ನಿರ್ಮಾಣ,ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ.
ನಿಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಬೇಕು ಅವರನ್ನು ವಿದ್ಯಾವಂತರನ್ನಾಗಿ ಮಾಡಿ ಸಮಾಜದಲ್ಲಿ ಉನತ್ತ ವ್ಯಕ್ತಿಗಳನ್ನಾಗಿ ಮಾಡಬೇಕು, ಎಲ್ಲರೂ ಒಂದಾಗಿ ಸಮಾಜ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಬೇಕು ಎಂದು ಹೇಳಿದರು.
ಜಾಮಿಯಾ ಮಸ್ಜಿದ್ ಮೌಲಾನಾ, ಜಹುರ್ ಹಾಜಿ,ಆಶೀರ್ವಚನ ನೀಡಿದರು.
ಈ ಒಂದು ಕಾರ್ಯಕ್ರಮದಲ್ಲಿ ಅಂಜುಮನ್ ಇಸ್ಲಾಂ ಕಮಿಟಿವತಿಯಿಂದ ಕರ ಪತ್ರ ಹಂಚಲಾಯಿತು, ಈ ಕರ ಪತ್ರದಲ್ಲಿ ಏನೇದೆ ನೋಡೂನು ಬನ್ನಿ, ನಿರ್ದೇಶಕರಾದ ಶಬ್ಬಿರ ತಾಸಗಾಂವ ಇವರು ಅಂಜುಮನ್- ಎ- ಇಸ್ಲಾಂ ಕಮೀಟಿಯವರು ಧನಲಕ್ಷ್ಮೀ ಸಕ್ಕರೆ ಕಾರ್ಖಾನೆಗೆ ಹಲಾಲ ಸರ್ಟಿಫಿಕೇಟನ್ನು ನೀಡಿ ಅವರಿಂದ ಹಣ ಪಡೆದಿದ್ದಾರೆಂದು ಗಂಭೀರ ಆರೋಪವನ್ನು ಮಾಡಿದರು.
ಈ ವಿಷಯದ ಕುರಿತು ಅಂಜುಮನ್ ಕಮಿಟಿ ಜಾಮಿಯ ಮಸೀದಿಯಲ್ಲಿ 29-04-2025 ರಂದು ಸಭೆ ಮಾಡಿ ಸಭೆಯಲ್ಲಿ ಸದರಿ ನಿರ್ದೇಶಕರಾದ ಶಬ್ಬಿರಅಹ್ಮದ ತಾಸಗಾಂವ ಇವರನ್ನು ಅಂಜುಮನ ಇಸ್ಲಾಂ ಕಮೀಟಿಯಿಂದ ವಜಾ ಮಾಡಿ ಮುಂದಿನ ಮಾಹಿತಿಗಾಗಿ ವಕ್ಷ ಬೋರ್ಡಿಗೆ ಕಳಿಸಿದ್ದೇವೆ ಎಂದು ಕರ ಪತ್ರ ಹಂಚಿದರು.
ಈ ಸಂಧರ್ಭದಲ್ಲಿ ಅಂಜುಮನ್ ಇಸ್ಲಾಂ ಕಮಿಟಿಯ ಅಧ್ಯಕ್ಷ, ಶಬ್ಬೀರ್ ಕಾಜಿ,ಉಪಾಧ್ಯಕ್ಷ, ಫೈರೋಜ್ ಪಠಾಣ ಜಾಮಿಯಾ ಮಸ್ಜಿದ್ ಮೌಲಾನಾ, ಜಹುರ್ ಹಾಜಿ, ಯುವ ಕಾಂಗ್ರೆಸ್ ಅಧ್ಯಕ್ಷ ಅನಿಕೇತ್ ಪಟ್ಟಣ ಉಪಸ್ಥಿತರಿದ್ದರು.
ವರದಿ : ಮಂಜುನಾಥ ಕಲಾದಗಿ




