ಸಿಂದಗಿ : ಭಾರತ ದೇಶ ಹಳ್ಳಿಗಳಿಂದ ಕೂಡಿದ ರಾಷ್ಟ್ರ ಹಳ್ಳಿಗಳು ಎಲ್ಲ ಸೌಕರ್ಯಗಳಿಂದ ಅಭಿವೃದ್ಧಿಯಾದಲ್ಲಿ ಮಾತ್ರ ದೇಶ ಸಮೃದ್ಧ ದೇಶವಾಗುತ್ತದೆ. ಆ ನಿಟ್ಟಿನಲ್ಲಿ ಸಿಂದಗಿ ಮತಕ್ಷೇತ್ರದ ಪ್ರತಿ ಹಳ್ಳಿಗಳು ಮೂಲಭೂತ ಸೌಕರ್ಯಗಳಿಂದ ಅಭಿವೃದ್ಧಿ ಹೊಂದುತ್ತಲ್ಲಿವೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಅವರು ಮಂಗಳವಾರ ಆಲಮೇಲ ತಾಲೂಕಿನ ಗುಂದಗಿ ಗ್ರಾಮದಲ್ಲಿ ಜಿಲ್ಲಾ ಪಂಚಾಯತ ವಿಜಯಪುರ ಪಂಚಾಯತ್ ರಾಜ್ಯ ಇಲಾಖೆ ಉಪಯುಭಾಗ ಸಿಂದಗಿ, 2023 -24 ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಅನುದಾನ ಅಡಿಯಲ್ಲಿ ರೂ.50 ಲಕ್ಷ ದಲ್ಲಿ ಸಿಸಿ ರಸ್ತೆ ನಿರ್ಮಾಣ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪಯೋಗ ಸಿಂದಗಿ, 2023- 24ನೇ ಸಾಲಿನ ಜೀವ ಜಲ ಮಿಷನ್ ಯೋಜನೆ ಅಡಿಯಲ್ಲಿ ಗುಂಡಗಿ ಗ್ರಾಮದ ಮನೆ ಮನೆ ನಳ ಸಂಪರ್ಕ ಯೋಜನೆಗೆ ರೂ.141 ಲಕ್ಷದ ಅನುದಾನದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ನಾವೆಲ್ಲ ಆರೋಗ್ಯದಿಂದಿರಲು ಶುದ್ಧ ನೀರು ಅತ್ಯಂತ ಅವಶ್ಯಕ. ಗ್ರಾಮದ ಬಹುದಿನಗಳ ಬೇಡಿಕೆಯಾಗಿರುವ ಮನೆ ಮನೆಗೆ ನೀರು ಮತ್ತು ಸಿಸಿ ರಸ್ತೆ ನಿರ್ಮಾಣ ಮಾಡುತ್ತಿರುವುದು ನನಗೆ ಸಂತಸ ತಂದಿದೆ. ಮುಂದಿನ ದಿನಮಾನಗಳಲ್ಲಿ ಕ್ಷೇತ್ರದ ಪ್ರತಿಯೊಂದು ಹಳ್ಳಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವ ಕಾಯಕಲ್ಪದಲ್ಲಿ ತೊಡಗಿದ್ದೇನೆ. ಪ್ರತಿ ಕಾಮಗಾರಿಗಳಿಗೆ ಸಾರ್ವಜನಿಕರ ಸಹಕಾರ ಅತ್ಯಂತ ಅವಶ್ಯಕವಾಗಿದ್ದು ಗುತ್ತಿಗೆದಾರರು ವಸ್ತುನಿಷ್ಠವಾಗಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದರು.
ಈ ವೇಳೆ ಆಲಮೇಲ ಬ್ಲಾಕ್ ಅಧ್ಯಕ್ಷ ಸಾದಿಕ್ ಸುಂಬಡ, ಗ್ಯಾರಂಟಿ ಯೋಜನೆ ಅಧ್ಯಕ್ಷ ಹಾಗೂ ಪಟ್ಟಣ ಪಂಚಾಯಿತಿ ಸದಸ್ಯ ಅಶೋಕ ಕೋಳಾರಿ, ಗ್ರಾಮ ಪಂಚಾಯತ ಅಧ್ಯಕ್ಷರಾದ ವಿಠಾಬಾಯಿ ರಮೇಶ ಪಂಡಿತ, ಉಪಾಧ್ಯಕ್ಷ ಶ್ರೀದೇವಿ ಗುರುಪಾದಪ್ಪಗೌಡ ಬಿರಾದಾರ, ಸದ್ಯಸ ರಮೇಶ ಬಂಟನೂರ,ಪುಂಡಲೀಕ ದೊಡಮನಿ,ಬಸೀರ ತಾಂಬೊಳ್ಳಿ,ಯಾಸೀನ್ ಶೇಖ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ನಿಂಗಪ್ಪಗೌಡ ಪಾಟೀಲ, ಅನಿಲಗೌಡ ಪಾಟೀಲ, ಶಿವಶಂಕರ ಕರ್ಜಿಗಿ, ಸುರೇಸ ಭಾಸಗಿ,ಬಸವರಾಜ ಆಸಿಂಗಿಹಾಳ,ರವಿ ಕಟ್ಟಿ, ಬಸವರಾಜ ಭಾಸಗಿ, ನಾಗು ಹಿಪ್ಪರಗಿ,ವಿಠ್ಠಲ ಗಡ್ಡಿ ಪೂಜಾರಿ , ಶ್ರೀಶೈಲ ಗಡ್ಡಿ ಪೂಜಾರಿ, ಭೀಮರಾಯ ಸಿತಿ,ಬಸವರಾಜ ದೇಗಿನಾಳ,ವಿಠ್ಠಲ ನಂದೂರ ಸೇರಿದಂತೆ ಇತರರು ಇದ್ದರು.