ರಾಮದುರ್ಗ: ತಾಲೂಕಿನ ಸುರೇಬಾನ ರೈತ ಸಂಪರ್ಕ ಕೇಂದ್ರದಲ್ಲಿ ಮುಂಗಾರು ಹಂಗಾಮಿನ ಬೀಜ ವಿತರಣಾ ಕಾರ್ಯಕ್ರಮವನ್ನು ಶಾಸಕ ಅಶೋಕ ಪಟ್ಟಣ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ದೇಶಕರಾದ ಎಸ್ ಎಫ್ ಬೆಳವಟಗಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಪೂರ್ವ ಹಂಗಾಮಿನಲ್ಲಿ ಮಳೆಯ ವಾಡಿಕೆಗಿಂತ ಜಾಸ್ತಿಯಾಗಿದ್ದು,ಮುಂಗಾರು ಬಿತ್ತನೆ ಕಾರ್ಯಕ್ಕೆ ಅನುಕೂಲವಾಗಿರುತ್ತದೆ. ಈ ನಿಟ್ಟಿನಲ್ಲಿ ರೈತರಿಗೆ ಅನುಕೂಲವಾಗುವಂತೆ ಹೆಸರು, ಗೋವಿನಜೋಳ, ಸಜ್ಜೆ, ಸೂರ್ಯಕಾಂತಿ, ಉದ್ದು, ತೊಗರಿಬೆಳೆಯ ಪ್ರಮಾಣಿಕೃತ ಬೀಜಗಳು ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಹಾಗೂ ವಿವಿಧೋದ್ದೇಶ ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳಲ್ಲಿ ಲಭ್ಯವಿರುತ್ತವೆ, ರಸಗೊಬ್ಬರ ದಾಸ್ತಾನಿಗೆ ಸಂಬಂಧಿಸಿದಂತೆ ಸಾಕಷ್ಟು ದಾಸ್ತಾನು ಲಭ್ಯವಿದ್ದು ಡಿ ಎ ಪಿ ಗೊಬ್ಬರಕ್ಕೆ ಪರ್ಯಾಯವಾಗಿ ಕಾಂಪ್ಲೆಕ್ಸ್… ಗೊಬ್ಬರಗಳನ್ನು ಬಳಸಲು ಸಲಹೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಅಶೋಕ ಪಟ್ಟಣ ಅವರು ಮಾತನಾಡಿ ಕೃಷಿಗೆ ಸಂಭಂದಿಸಿದ ಎಲ್ಲ ದಾಸ್ತಾನುಗಳು ಹೇರಳವಾಗಿ ಲವ್ಯವಿದ್ದು ರೈತರು ಯಾವುದೇ ರೀತಿಯ ಆತಂಕ ಪಡುವ ಅವಶ್ಯಕತೆಯಿಲ್ಲವೆಂದು ತಿಳಿಸಿದರು ಜಾಲಿಕಟ್ಟಿ ಗ್ರಾಮದಲ್ಲಿ ಕೃಷಿ ಸಾಲ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತನ ಸಂಬಂಧಿಕರಿಗೆ ಸಾಂಕೇತಿಕವಾಗಿ 5 ಲಕ್ಷ ರೂಪಾಯಿ ದೃಡೀಕರಣ ಪತ್ರ ವಿತರಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಶಂಕ್ರಯ್ಯ ಚಿಕ್ಕಮಠ, ಮಾರುತಿ ಕೂಟಗಿ, ಶಿವಾನಂದ ಚಿಕ್ಕನಗೌಡ್ರ, ಶಿವಪ್ಪ ಮೇಟಿ, ಹನಮಂತ ಬೆಳವಡಿ, ಜಿ ಬಿ ರಂಗನಗೌಡ್ರ, ಶಿದ್ಲಿಂಗಪ್ಪ ಶಿಂಗಾರಿಕೊಪ್ಪ, ಇಲಾಖೆ ಸಿಬ್ಬಂದಿಗಳಾದ ಕೃಷಿ ಅಧಿಕಾರಿ ಆರ್ ವಿ ದಾಸರ, ಸಂಗಮೇಶ ಜಲಗೇರಿ, ಶ್ರೀಶೈಲ ಪಾಟೀಲ, ಈರಣ್ಣ ಬೆಳವಣಿಕಿ, ಶಂಕ್ರಪ್ಪ ರಾಚಪ್ಪನವರ, ಜಗದೀಶ ದಂಡಿನ, ಕೃಷಿ ಸಖೀಯರು ಉಪಸ್ಥಿತರಿದ್ದರು. ಗೋವಿಂದಶೆಟ್ಟಿ ಜಾಯಣ್ಣವರ ನಿರೂಪಿಸಿದರು, ಆರ್ ವಿ ವಾಸನ ಸ್ವಾಗತಿಸಿದರು, ನವೀನಕುಮಾರ ಪಾಟೀಲ ವಂದಿಸಿದರು.
ವರದಿ: ಕುಮಾರ ಎಂ